ಐಸುರ ಮೊಹರಮ್‍ದಾಟಾ

ಐಸುರ ಮೊಹರಮ್‍ದಾಟಾ
ಕರ್ಬಲದಿ ಕಡಿದಾಟಾ || ಪ ||

ಹೊಡಿದ ಯಜೀದ ಬಾಣವಾ
ಹಿಡಿದ ಕರ್ಬಲ ದಾರಿನಾ
ಮಡಿದ ಹಸೇನ ಹುಸೇನಾ
ಕಿರಣಡಗಿತು ಧರಣಿಯ ಮೇಲ || ೧ ||

ಧಾಮಶಪುರದ ಪ್ಯಾಟಿ
ಒಂದಿವಸಾಯ್ತೋ ಲೂಟಿ
ಕೋಮಲಾಂಗದ ಕುದುರಿಯಾ
ಕಾಲು ಕೆದರಿ ಬೆದರಿ ನಾ
ಚದುರ ಮದೀನಶಾರಪುರದ
ಸದರಿನೊಳು ಬಂದು ನಿಂತು || ೨ ||

ಶಿಶುನಾಳಧೀಶನ ಕವಿಯ
ನೋಡಿ ಆಡೋ ಅಲಾವಿ
ಅಸಮಶಹಾದತ್ತು ತೀರಿತೋ
ಬೈಲಿನೊಳು ಬೈಲಾಯಿತೋ
ಮೂಲಮಹಾಮಂತ್ರ ಜಪಿಸಿ
ಊದಸುಟ್ಟು ಧೀನ್ ಎಂಬುವ || ೩ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮದೀನಪುರದ ಶಹರದೊಳೇನಾದಿತೋ
Next post ಒಲವೇ… ಭಾಗ – ೫

ಸಣ್ಣ ಕತೆ