ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ || ಪ ||

ಅಜಹರಪ್ರೀತೆ ಸುಗುಣ ಪ್ರಖ್ಯಾತೆ
ನಿಗಮಾತೀತೆ ನಗಜಾತೆ
ನಿರಂಜನದೇವಿ ಪಾಹಿಮಾಂ || ೧ ||

ಬಲ್ಲಿದಯಾತ್ರೆ ಚಲ್ವ ಸುಗಾತ್ರೆ
ಅಲ್ಲಮಹಾಪುರಿ
ಶ್ರೀಬೊಗಳಾಂಬೆ ದೇವಿ ಪಾಹಿಮಾಂ || ೨ ||

ಶಿಶುನಾಳವಾಸ ದೋಷವಿನಾಶ
ಅಸಮಸದ್ಗುರು ಗೋವಿಂದವಿಲಾಸೆ
ದೇವಿ ಪಾಹಿಮಾಂ || ೩ ||
*****