ನಿನ್ನ ಮಿಲನ ಅದೇ ಕವನ
ಶಾಂತಿ ವನದ ಕೂಜನಂ
ನವಿಲು ನಾನೆ ಉಯಿಲು ನೀನೆ
ರಜತರಂಗ ದಿಂಚರಂ ||೧||

ದೂರ ದೂರ ದೂರ ದಾರಿ
ನೂರು ತೀರ ತೀರಿತು
ಮತ್ತೆ ಮತ್ತೆ ಹತ್ತು ನೂರು
ದಾರಿ ತೋರದಾಯಿತು ||೨||

ಕಾಡು ಕಂಟಿ ಕಡಲು ಇತ್ತ
ಹುತ್ತ ಕುತ್ತ ನಾಗರಂ
ಬೆಂಕಿ ಭುಗಿಲು ಹೊಗೆಯು ಅತ್ತ
ಕರುಣ ಮರಣ ತೋರಣಂ ||೩||

ತನನ ತನನ ಮನನ ಮನನ
ಜಲತರಂಗ ಎಲ್ಲಿದೆ
ಹನನ ಹನನ ಹೋಮ ಹವನ
ಧೂಮ ಧೂಳಿ ಇಲ್ಲಿದೆ ||೪||

ಇಗೋ ಶರಣು ಸಕಲ ಶರಣು
ಶಬ್ದ ಮುಗ್ಧ ಅರ್‍ಪಣಂ
ಆತ್ಮ ದೀಪ ದೇಹ ಧೂಪ
ಆಖಿಲ ನಿಖಿಲ ತರ್‍ಪಣಂ ||೫||
*****