
ನಾನು ಇನ್ನೊಮ್ಮೆ ಮರಳಿ ಬರುವಾಗ ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ ಸತ್ಯವತಿಯಾಗಿ ಸತಿಯಾಗಿ ನೀನು ಖಂಡಿತ ನನಗೆ ಸಿಕ್ಕುತ್ತಿ ಹಳೆ ಪರಿಚಯ ಉಕ್ಕಿ ಬಂದು ಮನದಲ್ಲಿ ಬಿಕ್ಕುತ್ತಿ ಆಗ ನಿನ್ನ ವದನತುಂಬ ವಿರಹದ ನೋವಿನ ಗೆರೆಗಳನ್ನು ಬಿಸಿಯುಸಿರಿನಲ್...
ಎಲ್ಲಿ ಕಾರ್ಮುಗಿಲಿರುವುದೋ ಅಲ್ಲಿ ಹಗಲಿನ ನೆರಳು || ಎಲ್ಲಿ ಮನಗಳು ಹರಿವುದೋ ಅಲ್ಲಿ ತಿಳಿವಿನ ಅಲೆಗಳು || ಎಲ್ಲಿ ಚಂದಿರನ ಬೆಳದಿಂಗಳೋ ಅಲ್ಲಿ ಬೆಳಕಿನ ಹೊನಲು || ಎಲ್ಲಿ ತಾಯಿ ಕುಡಿಯ ಬೇರೋ ಅಲ್ಲಿ ಮಮತೆಯ ಸಸಿಗಳು || ಎಲ್ಲಿ ಬಂಜೆತನದ ಬಾಳಿಹುದೋ ...
(ಮುಂದಿನ ಸಲ ಮದುವೆಯಾಗಲು ಸಿದ್ಧನಾದ ಮುದಿ ಮದುಮಗನೊಬ್ಬನು ತನ್ನ ಜೊತೆಯ ರಾಯರಾಡಿದ ಮಾತಿಗೆ ಉತ್ತರರೂಪವಾಗಿ ಮಾತನಾಡುವನು.) ….ನೀವೀಗೇನ್ ಮಾತಾಡಿದಿರ ರಾಯರಽ ಬರಾಬ್ಬರೀ ನೋಡಿರಿ…! ನಾನೂ ನಿಮ್ಮ ಮತದಂವನಽ ಏನ್ರೆಪಾ! ಇಷ್ಟು ವಯಸ್ಸಾ...
ಹರಿಯೇ ಹೀಗಿರಲಿ ಎನ್ನ ಭಕ್ತಿ ಆ ಭಕ್ತಿಯಲಿ ಕಿಂಚಿತ್ತು ಸ್ವಾರ್ಥ ವಿರದಿರಲಿ ಸ್ವಾರ್ಥವೇನಾಂದರೂ ನನ್ನಿದಾಗಿದ್ದರೆ ಅದು ನಿನ್ನ ಪಡೆಯುವ ಹುನ್ನಾರವಿರಲಿ ಹರಿಯೇ ಹೀಗಿರಲಿ ಎನ್ನ ಭಕ್ತಿ ಮೀರಾ ನಿನಗಾಗಿ ಹುಚ್ಚಳಾದಂತಿರಲಿ ವಿಷವಾಕೆ ಅಮೃತದ ಸೇವಿಸಿದಂತ...
ಕರುಣೆ ತೋರು ನೀನೆನಗೆ ನನ್ನ ಬಾಳ ಏಳಿಗೆಗೆ | ದಾರಿದೀಪವಾಗೆನಗೆ ನನ್ನ ಬಾಳ ಈ ಹಾದಿಗೆ || ಗುರುನೀನೇ ಗುರಿತೋರಿಸು ನೀನೇ ಇನ್ನಾರಿಹರೆನಗೆ ನೀನಲ್ಲದೀಬಾಳಿಗೆ| ಬದುಕ ಬವಣೆಯ ಬಿಡಿಸು ಬಾಳ ಮಹಿಮೆಯ ತಿಳಿಸು|| ಏಕೆ ಮತ್ತೆ ಮತ್ತೆ ಪುನರಪಿಸುವೆವೋ ಕಾಣೆ...
ಅವನೊಬ್ಬ ರಾಜಕೀಯ ಪುಢಾರಿ, ಮಂತ್ರಿಪದವಿಯಲ್ಲಿ ಸಂಪಾದಿಸಿದ ಕೋಟಿ ಕೋಟಿ ಹಣದ ಅಪಾರ ಸಂಪತ್ತು ಇತ್ತು. ಚಿನ್ನ, ಬೆಳ್ಳಿ, ಅಲ್ಲದೆ ತನ್ನದೇ ಆದ ಹೆಲಿಕ್ಯಾಪ್ಟರ್, ಸ್ವಂತ ವಿಮಾನ ಇಟ್ಟು ಕೊಂಡಿದ್ದ. ಅವನ ಹುಟ್ಟಿದ ಹಬ್ಬಕ್ಕೆ ಅತ್ಯಂತ ಬೆಲೆಬಾಳುವ ಚಪ್...
ಯಾರು ಕಟ್ಟಿದರೊ ಈ ಭವ್ಯ ದೇಗುಲ ಕೋಟಿ ಜನ ಹೊಗಳುವ ಈ ಕೋಟೆಕೊತ್ತಲ? || ಯಾವ ಚರಿತೆಯು ಬರೆಯಲಿಲ್ಲ ಶಿಲಾಶಾಸನ ಕೊರೆಯಲಿಲ್ಲ ತಾಳೆಗರಿಗಳು ಮಿಡಿಯಲಿಲ್ಲ ತಾಮ್ರಪಟಗಳು ಹೊಗಳಲಿಲ್ಲ || ಕಟ್ಟಿಸಿದಾತನು ಪಟ್ಟದ ಮೇಲೆ ಅಟ್ಟಹಾಸದಲಿ ಹೆಸರಾದ ಕಟ್ಟಿದ ಸಾವಿ...
ಭಾಗ-೧ ಒಬ್ಬ ಶ್ರೇಷ್ಠ ಕವಿಯಲ್ಲಿ ಅಲ್ಪ ಗುಣಗಳು ವಿರಳ. ಆತ ಗ್ರಹಿಸಿದ ಸಂಗತಿಗಳನ್ನು ಜಗತ್ತಿನ ಬದುಕಿನೊಂದಿಗೆ ಸಮೀಕರಿಸುವ, ವೈಭವೀಕರಿಸುವ ಆತನ ಅಂತಃಚಕ್ಷುವಿನಿಂದ ಆತನೊಬ್ಬ ಪ್ರವಾದಿಯಾಗಬಲ್ಲ. ಪರಿಪೂರ್ಣತೆಗೆ ಆತ ಸಾಕ್ಷಿ. ಉಳಿದವರ ತನ್ನಂತೆ ಪರಿ...
ಹಾಸಿಗೆ ಹಾಸಿದೆ ನೆಲದಾಗೆ ಅದು ಹಾಸದ ತಳವಿಲ್ಲ ಜಗದಾಗೆ || ಪ || ಹಸುಗೂಸು ಉರುಳಾಡಿ ಕೈಮೈಯಿ ತಿಕ್ಕಾಡಿ ಹೇಸಿಗೆ ಮಾಡಿದ್ದು ಹಾಸಿಗೆ ಹಸನಾಗಿ ಹಾಸಿದ್ದ ಗಸಬಸ ಕೆಡಿಸ್ಯಾಡಿ ರಸದಲ್ಲಿ ಉರುಳಿದ್ದು ಹಾಸಿಗೆ || ೧ || ಕಾಮದ ಕಲ್ಪನೆ ಏನೇನೂ ಇರದಾಗ ಮಾನ...
ಜನ ಜನ ನಮ್ಮ ಜನ ಕಾಳು ಕಡ್ಡಿ ತಿನ್ನುವ ಜನ ಹುಲ್ಲು ಮೇದು ಬರುವ ಜನ ಯಾವ ಕಸಾಯಿಖಾನೆಗೆ ಈ ಜನ ? ನಶ್ಶವ ತಿಣಿಕಿ ಎಡೆ ಎಡೆ ಹಣಿಕಿ ಏಕ್ಸಿ ಏಕ್ಸಿ ಎನ್ನುವರು ಎಡಬಲವೆನ್ನದೆ ಗಾಳಿಗೆ ಉಗಿದು ಬಯ್ಯುವರು ಬಯ್ಯಿಸಿಕೊಳ್ಳುವರು ಸಿಹಿ ಸಿಹಿ ಗುಲಾಬುಜಾಮೂನು...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















