ಯಾರು ಕಟ್ಟಿದರೊ ಈ ಭವ್ಯ ದೇಗುಲ
ಕೋಟಿ ಜನ ಹೊಗಳುವ ಈ ಕೋಟೆಕೊತ್ತಲ? ||

ಯಾವ ಚರಿತೆಯು ಬರೆಯಲಿಲ್ಲ
ಶಿಲಾಶಾಸನ ಕೊರೆಯಲಿಲ್ಲ
ತಾಳೆಗರಿಗಳು ಮಿಡಿಯಲಿಲ್ಲ
ತಾಮ್ರಪಟಗಳು ಹೊಗಳಲಿಲ್ಲ ||

ಕಟ್ಟಿಸಿದಾತನು ಪಟ್ಟದ ಮೇಲೆ
ಅಟ್ಟಹಾಸದಲಿ ಹೆಸರಾದ
ಕಟ್ಟಿದ ಸಾವಿರ ಜನಗಳ ದುಡಿಮೆಗೆ
ಕೂಲಿಕೊಟ್ಟವನು ದಣಿಯಾದ ||

ಅರಳದ ಮೊಗ್ಗು ಮೊಳೆಯದ ಬೀಜ
ನೋವಿನ ನಿಜ ಇತಿಹಾಸ
ಬೆಳೆಯುವ ಮೊದಲೆ ಬಲಿಯಾಗುವ
ಕನಸು ಕೂಸುಗಳ ಸರೆವಾಸ ||
*****