ಹೀಗಿರಲಿ ಭಕ್ತಿ

ಹರಿಯೇ ಹೀಗಿರಲಿ ಎನ್ನ ಭಕ್ತಿ
ಆ ಭಕ್ತಿಯಲಿ ಕಿಂಚಿತ್ತು ಸ್ವಾರ್ಥ ವಿರದಿರಲಿ
ಸ್ವಾರ್ಥವೇನಾಂದರೂ ನನ್ನಿದಾಗಿದ್ದರೆ
ಅದು ನಿನ್ನ ಪಡೆಯುವ ಹುನ್ನಾರವಿರಲಿ

ಹರಿಯೇ ಹೀಗಿರಲಿ ಎನ್ನ ಭಕ್ತಿ
ಮೀರಾ ನಿನಗಾಗಿ ಹುಚ್ಚಳಾದಂತಿರಲಿ
ವಿಷವಾಕೆ ಅಮೃತದ ಸೇವಿಸಿದಂತಿರಲಿ
ನನ್ನನ್ನು ನಾನು ಕಳೆದುಕೊಂಡಿರಲಿ

ಹರಿಯೇ ಹೀಗಿರಲಿ ಎನ್ನ ಭಕ್ತಿ
ಕಾಮ ಕಾಂಚನಗಳಾಸೆ ವಿರದಿರಲಿ
ಕಾಮಕಾಂಚನಾಸೆಗಳಿರ ಬೇಕಾದರೆ
ಅಂತಹ ಆಸೆ ಅದು ನಿನ್ನ ಮೇಲಿರಲಿ

ಹರಿಯೇ ಹೀಗಿರಲಿ ಎನ್ನ ಭಕ್ತಿ
ಕನ್ನೆ ಕುವರರ ಪ್ರೀತಿಯಂತಿರಲಿ
ನನ್ನ ನಾನು ಮರೆತು ಹೋಗಿರಲಿ
ಮಾಣಿಕ್ಯ ವಿಠಲನಾಗಿ ಸೋರಿ ಹೋಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರುಣೆ ತೋರು ನೀನೆನಗೆ
Next post ಮೂರನೇ ಮದಿವಿ ಮಹಾಸಂಕಟ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…