ಎಲ್ಲಿ ಕಾರ್ಮುಗಿಲಿರುವುದೋ

ಎಲ್ಲಿ ಕಾರ್ಮುಗಿಲಿರುವುದೋ
ಅಲ್ಲಿ ಹಗಲಿನ ನೆರಳು ||

ಎಲ್ಲಿ ಮನಗಳು ಹರಿವುದೋ
ಅಲ್ಲಿ ತಿಳಿವಿನ ಅಲೆಗಳು ||

ಎಲ್ಲಿ ಚಂದಿರನ ಬೆಳದಿಂಗಳೋ
ಅಲ್ಲಿ ಬೆಳಕಿನ ಹೊನಲು ||

ಎಲ್ಲಿ ತಾಯಿ ಕುಡಿಯ ಬೇರೋ
ಅಲ್ಲಿ ಮಮತೆಯ ಸಸಿಗಳು ||

ಎಲ್ಲಿ ಬಂಜೆತನದ ಬಾಳಿಹುದೋ
ಅಲ್ಲಿ ಆಶಾದಾಯಕ ಹೂಗಳು ||

ಎಲ್ಲಿ ಹಸಿವಿನ ಅಳಲಿಹುವುದೋ
ಅಲ್ಲಿ ಹಸಿರಿನ ಸೆರಗು ||

ಎಲ್ಲಿ ಸಿರಿತನವಿರುವುದೋ
ಅಲ್ಲಿ ಚಂಚಲ ನರ್ತನವೂ ||

ಎಲ್ಲಿಂದೆಲ್ಲಿಗೋ ಪಯಣ
ಸರಸ ವಿರಸ ಜೀವನ
ಮೂರು ದಿನದ ಹಾಡು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂರನೇ ಮದಿವಿ ಮಹಾಸಂಕಟ
Next post ಶಂತನು ಮರಳಿ ಬಂದಾಗ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…