
ಬಂದೆಯಾ ಬಾ, ಬಂದಾಯಿತಲ್ಲ ಇನ್ನೇಕೆ ಮೀನಮೇಷ. ಮೂರು ಬಿಟ್ಟು ನಿಂತಿರುವ ಅಭ್ಯಾಗತ ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ ನಿನ್ನದೇನು ಹೆಚ್ಚುಗಾರಿಕೆ ಅರವತ್ತರಲ್ಲಿ ನೀನು ಒಬ್ಬ. ಹೊಸ ವೇಷ ಹಳೆ ಹೆಸರು ಬರಿಗೈಯಲ್ಲಿ ಬಂದಿರುವೆಯಾ ಹೇಗೆ? ಏನೇನು ತಂದಿ...
ಇದಿರೆನ್ನ ಹಳಿವವರು ಮತಿಯ ಬೆಳಗುವರು ಮನದ ಕಾಳಿಕೆಯ ಕಳೆವವರೆನ್ನ ನಂಟರು ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ ಹೇಯೋಪಾದಿಯ ತೋರುವವರು ಇದು ಕಾರಣ ನಾನನ್ಯ ದೇಶಕ್ಕೆ ಹೋಗೆನು ಸಕಳೇಶ್ವರದೇವರ ತೋರುವರೊಳರು ಇಲ್ಲಿಯೆ [ಕಾಳಿಕೆ-ಕಲ್ಮಶ, ತೋರುವರೊಳರು...
೧ ಅಜ್ಜ ಕಣ್ಣು ಮುಚ್ಚಿ ಬಿಟ್ಟ! ಕೈಯ ಹಿಡಿದು ಕೇಳಿಬಿಟ್ಟ! ೨ “ಇವಳಬಿಟ್ಟು ಇವಳುಯಾರು? ಇವನಬಿಟ್ಟು ಇವನುಯಾರು?” ೩ ಇವಳುಗಂಗೆ, ಇವಳುಗೌರಿ! ಬ್ರಹ್ಮ, ವಿಷ್ಣು, ರುದ್ರರಿವರು! ೪ “ಹೋಗೆ ಗಂಗಿ, ಹೋಗೆ ಗೌರಿ! ಹೋಗೊ ಬ್ರಹ್ಮ, ವಿಷ್ಣು,...
ಈ ಮಾಗಿದ ಸಂಜೆ ಅವಳ ತಲೆಗೂದಲೆಲ್ಲಾ ಬಿಳಿಬಿಳಿ ಮೋಡಗಳ ರಾಶಿ, ಎದೆಯ ಆಳಕ್ಕೆ ಇಳಿವ ಅವಳ ಮೌನ ನೋಟದ ತುಂಬ ಈ ಬದುಕ ನೆರಳು, ಅಲ್ಲಾಡುತ್ತಿವೆ ಹಳದಿ ಎಲೆಗಳು. ಅವಳು ಮಾತನಾಡುವುದಿಲ್ಲ. ಬರೀ ನಿಟ್ಟುಸಿರು ಬಿಡುತ್ತಾಳೆ. ಎಲೆಗಂಟಿದ ಇರುವೆಯ ಕಾಲಗಳು ತು...
ಓ ದೇವಿ ಭಾರತೀಯೆ ನಮಿಸುವೆವು ನಿನಗೆ || ಧವಳಗಿರಿ ಹಿಮಾಲಯ ಶುಭ್ರಹಾಸನ ರುದ್ರ ವೀಣೆ ನಿನ್ನ ನಗೆ ಚೇತನ ನವನವೀನತೆಯ ವಿನೂತನ || ಹೃತ್ಪೂರ್‍ವಕ ಹೃಮ್ಮಾನಕ ನವ ವಿಶಾಲ ಹೃದಯ ಸಾಮ್ರಾಜ್ಞಿ ನಿನ್ನ ಚರಣಕೆ ನಮ್ಮ ನಮನ ಪರಮ ಪಾವನೆ ಧನ್ಯ ಜೀವನ || ನೂಪೂರ...
ಬಿಟ್ಟರೂ ಬಿಡದೀ ಕಾಮ ಭೂತ ಜೀವನ ಮಾಡಿದೆ ನರಕ ಸಂಭೂತ ಕಾಡುತ್ತಿದೆ ಮಾಯೆ, ಹೆಣ್ಣು ಹೊನ್ನು ಎಲ್ಲಿದೆಯೊ ಶಿವನ ಶಾಂತಿ ಜೊನ್ನ ಪ್ರತಿಜ್ಞೆ ಮಾಡುತ್ತಿರುವೆ ನಿತ್ಯ ನಾನು ಇಹ ಸುಖಗಳೆಲ್ಲವೂ ತ್ಯಜಿಸಬೇಕೆಂದು ಮತ್ತೊಂದುಗಳಿಗೆ ನನ್ನ ನೇಮ ಮರೆತು ಮೊಹೀತಗ...
ದೇವಾಲಯದ ಪ್ರವೇಶವು ಚಂಚಲನೇತ್ರರು ಚಾಕರರ ಪರಿಮುಖ ತನ್ನ ಕಡೆಯಿಂದ ಆಗ ಬೇಕಾಗಿರುವ ಸಾಹಿತ್ಯಗಳನ್ನು ಒದಗಿಸಿ ದೇವಾಲ ಯದ ಆಯಾ ಠಾವಿನಲ್ಲಿ ಇರಿಸುವುದಕ್ಕೆ ಪೂರ್ವಾರಭ್ಯ ನಡೆದು ಬಂದ ಪದ್ಧತಿಗನುಗುಣವಾಗಿ ಪ್ರಾರಂಭಮಾಡೋಣಾಯಿತು. ಅದನ್ನು ವಿರೋಧಿ ಸಬೇಕ...
ಮಿಂಚಿ ಚಕಮಕ, ಬಾಗಿ ತೂಗುತ ಮಣಿದು ಬಳಕುತ ತಡೆದಿದೆ ಕಾಮಬೆಟ್ಟದ ಪಚ್ಚೆ ಹೃದಯದಿ ಏನು ನುಸುಳುತ ನಡೆದಿದೆ ನಯನ ನಿಗಿನಿಗಿ ಎದೆಯ ದೃಢಪಡೆ ಏನೊ ನಾತವ ಹಿಡಿದಿದೆ ಕಳ್ಳಹೆಜ್ಜೆಯ ಮೆಲ್ಲನಡಿಗೆಯ ಘಾತಸಂಭ್ರಮ ಪಡೆದಿದೆ ಎಲೆಯ ಸಂದಿಗಳಿಂದ ಜಳಕನೆ ಹರಿದ ಮರ್...
ಎಲ್ಲೆಲ್ಲಿಯೂ ಮನದ ಮಾತುಗಳೆ ಮುಂಬರಿದು ಎದೆಯ ಕೊಳಲುಲಿಯನೇ ಕೇಳಗೊಡವು ! ಹಗಲೆಲ್ಲವೂ ಜಿನುಗುತಿಹುದೆ ಮನಸಿನ ವಾಯ, ತೆಗೆವುದೊಂದೊಂದು ಸಲ ಎದೆಯು ಬಾಯ ; ಎಣಿಕೆಯಿಲ್ಲದೆ ಬಣಗುನುಡಿಯ ಹೆಣೆವುದು ಮನಸು, ಎದೆಯದೊಂದೇ ಒಂದು ಪದವೆ ಸವಿಗನಸು ! ಕಾಗೆ- ಗೂ...
ಏನೇ ತಲೆಗೂ ಮೀಸೆಗೂ ಬಣ್ಣ ಹಚ್ಚಿಕೊಂಡರೂ| ಒಳ ಮನಸ್ಸೇಳುತಿದೆ ದೇಹಕೆ ವಯಸ್ಸಾಗಿದೆ ಎಂದು! ಆದರೂ ಹೇಳದೆ ಕೇಳದೆ ನಡೆದಿದೆ ಒಂದೇ ಸಮನೆ ಒಪ್ಪದ ಮನಸನು ಒಪ್ಪಿಸುವ ಕಾರ್‍ಯವಿಂದು || ಯಾಕೋ ಎಲ್ಲಾ ಟೀನೇಜು ಹುಡುಗ ಹುಡುಗಿಯರಿಂದ ಅಂಕಲ್ ಎಂದು ಕರೆಸಿಕೊಳ...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...















