(ಕ್ಯಾಂಡಿಯಾ ನಡುಗಡ್ಡೆಯ ಹತ್ತಿರ)
ಕತ್ತಲೆಯ ಬರವನ್ನು ಸಾರುವಂತಹ ಕೊಂಬು
ಅಂಬುಧಿಯೊಳಾಗಿಹುದು ಬೂದಿಬೆಳಕಿನ ಕಂಬ,-
ಕಂಬ ಮರೆಯಾಗುತ್ತ, ಕೊಂಬು ಕಡೆಗಾಗುತ್ತ ನಿಶೆ ಬಂತು ದಶ ದಿಶೆಯಲಿ;
ಚಂದ್ರಾಮಗಿಹುದೊಂದು ಕೋಡೆಂದು ಹಾಡಿನಲಿ
ನುಡಿದಿದ್ದರಾಂಗ್ಲ ಕವಿಗಳು. ಕಂಡೆನದನಿಂದು:
ಸಾಂದ್ರರಜನಿಯನಾಳ್ಪ ಚದುರಚ೦ದ್ರನ ತಲೆಗೆ ಮೂಡಿತ್ತದೊಂದು ಕೋಡು!
*****

















