ಹೊಸದಿನದ ಹೊಸತುತ್ತೂರಿಯ ದನಿ- ಯು ಹೃದಯವನು ಸೇರೆ, ಕುದಿರಕ್ತ ತಳಮಳಿಸಲಾ ನವಜವ್ವನೋತ್ಸಾ- ಹದಲಿ ಪಂಜರದೊಳಿಹ ಗಿಳಿಯ ಹೊ- ರಗೆಳೆದು ತೂರಿ ತೇಲಲು ಬಿಟ್ಟು, “ಸೌಖ್ಯದಾಕಾಶದಲಿ ಮುಗಿಲು- ಹಣ್ಣುಗಳ ಸವಿದು ಶಾಂತಿಸರಕಿ- ಳಿದು ತಿಳಿನೀರನೀಂಟಿ ಸ...

ಕಾರ್ಮೋಡ ಮುತ್ತಿಗೆಯ ಕಿತ್ತೊಗೆದ ಅನಂತಾನಂದಮಯಮಾಕಾಶ! ಗಿರಿಗಹ್ವಕರಗಳಾಚೆಯಲಿ ಗಗನದಲಿ ತೇಲಿ ತಿರುಗುತಿಹ ಗಿಳಿವಿಂಡು! ಸರಸಿಜಳ ಸೆರೆಬಿಟ್ಟು ಸ್ವರ್ಣೋಜ್ವ- ಲೋದಯದ ಸುಮಂಗಲ ಪಾಡಿ ಕುಲುನಗೆಯ ಕುಸುಮಗಳ ಮೂಸಿ ಮುತ್ತಿಟ್ಟು ಮಧುವನೀಂಟುತಿಹ ತುಂಬಿಗಳು!...

೧ ಢಣಢಣನಾದವು ಕೇಳಿಸಿತೆಂದರೆ, ದೇವರಪ್ರಾಣವು ಹಾರುವುದು. ಧರ್ಮಕ್ಕೆ ಬೆಂಕಿಯ ಬೀಳುವದು. ಸೂರ್ಯನ, ಸಾಗರ ನುಂಗುವುದು. ದೈತ್ಯರ ಮೇಳವು ಕೂಡುವುದು. ಕಾಲನ ನೃತ್ಯವು ನಡೆಯುವುದು. ಭೈರವಿರಾಗವು ಕೇಳುವುದು. ನರಕವು ಸ್ವಾಗತಗೈಯುವುದು. ಢಣಢಣನಾದವು ಕೇಳ...

(ನನ್ನ ಗೆಳೆಯನೋರ್ವನಿಗೆ ಗಂಡುಮಗು ಹುಟ್ಟಿತೆಂಬ ವಾರ್ತೆ ಕೇಳಿದಾಗ ಬರೆದು ಕಳಿಸಿದುದು.) ೧ ಗಂಡು ಜನಿಸಿತೇನು ಗೆಳೆಯ, ಗಂಡು ಗಂಡಸಾಗಲಿ! ಹಾಲು, ಹಣ್ಣು ಕದ್ದುತಿಂದು ಪುಂಡ ಹುಡುಗನಾಗಲಿ ! ೨ ಶಾಲೆಗವನ ಅಟ್ಟಿ, ಬಿಟ್ಟ, ಮನೆಯ ಪಾಠ ಕಲಿಯಲಿ! ಲತ್ತಿ ...

ಸತಿ:- ತೇಲು ಮೋಡಗಳ ತೀಡಿ ಮುಡಿಗಟ್ಟಿ ಮಲ್ಲಿಗೆ ಮುಡಿದು ಮುಗುಳುನಗೆ ಚೆಲ್ವ ಮುಗಿಲುಚೆನ್ನೆಯ ನೋಡಿ ನಗದಿರ್ಪ ಕವಿಯು ಕವಿಯೇನೆಂಬೆ! ಚೆನ್ನ ಚಿನ್ಮಯನೆ, ಚೆಲುನಗೆಯನೊಮ್ಮೆ ಬೀರು, ಸುಪ್ರಭಾತದ ಸುಮನ ಸಂಚಯದಂತೆ! ಕಿರುನೃತ್ಯಗೈಯೊಮ್ಮೆ ಮಧುವನೀಂಟಿ ಮೈ...

ಸೂಳೆಕುದುರೆಯ ಬಿಟ್ಟು ಮೂಜಗದಿ ಸಂಚರಿಸಿದೆವು, ಕಟಿ ಹಾಕುವ ಕಲಿಯು ಒಬ್ಬನಿಲ್ಲವು ಎಂಬ ಹೆಬ್ಬುಬ್ಬಿನೀ ಚಿಹ್ನ ಗಂಡಸಿನ ಹೃದಯ `ಹೂಂಕಾರ’! ಮುದುಕನಾಹುತಿ ಕೊಟ್ಟು ಹುಡುಗಿಯ ತಲೆಬುರುಡಿಯನು ಕೆಂಪು ಬಟ್ಟೆಯೊಳದ್ದಿ ಪೂರ್ವ-ಪಶ್ಚಿಮದಿ ಮೆರೆಯಿಸಿ...

(ನಾಲ್ಕೈದು ಗೆಳೆಯರು ಕೂಡಿ ಸಾಹಿತ್ಯ ಕ್ರೀಡೆಯಾಡುತಲಿದ್ದೆವು. ಗೆಳೆಯನೋರ್ವನು ನನಗೆ ಪುಚ್ಛ, ಪಲ್ಲಕ್ಕಿ, ಪರಮೇಶ, ಪರ್ವತ, ಪಟ ಈ ಐದು ಶಬ್ದಗಳನ್ನು ಪ್ರಯೋಗಿಸಿ, ಜನಪದ ಶೈಲಿಯಲ್ಲಿ ಈ ಕೂಡಲೆ ಒಂದು ಪದ ಕಟ್ಟು ಎಂದ. ಆಗೆ ಹಾಡಿದ ಹಾಡಿದು) ಪುಚ್ಛವೆಂ...

೧ ಅಜ್ಜ ಕಣ್ಣು ಮುಚ್ಚಿ ಬಿಟ್ಟ! ಕೈಯ ಹಿಡಿದು ಕೇಳಿಬಿಟ್ಟ! ೨ “ಇವಳಬಿಟ್ಟು ಇವಳುಯಾರು? ಇವನಬಿಟ್ಟು ಇವನುಯಾರು?” ೩ ಇವಳುಗಂಗೆ, ಇವಳುಗೌರಿ! ಬ್ರಹ್ಮ, ವಿಷ್ಣು, ರುದ್ರರಿವರು! ೪ “ಹೋಗೆ ಗಂಗಿ, ಹೋಗೆ ಗೌರಿ! ಹೋಗೊ ಬ್ರಹ್ಮ, ವಿಷ್ಣು,...

೧ ಕೂಳಿಲ್ಲದಿಹ ನನಗೆ ಕಲ್ಲಿನಾರ್ಚನೆಯಂತೆ! ಸೆರೆಮನೆಯ ಸೋಬತಿಗೆ ಸೂರ್ಯ ಜಪ ತಪವಂತೆ! ೨ ನಾನೊಲ್ಲದಿಹ ನಾರಿ ನನಗಾಗಿ ಇಹಳಂತೆ! ಪಿತನ ನುಡಿ ಮೀರಿ ನಡೆಯೆ ನರಕವಂತೆ! ೩ ಹೆಣ್ಣಿನಾ ಹಣೆಬರಹ ಪುರುಷ ಬರೆದುದೆ ಅಂತೆ! ಇಲ್ಲದೊಡೆ ವಿರಹ ಅವಳ ಜೀವನಕಂತೆ! ೪...

ಭಿಕ್ಷುಕಿ:- ಬಿಕ್ಷಾಂದೇಹಿ! ಭಿಕ್ಷಾಂದೇಹಿ! (ಅರಸನು ಬೀದಿಯಲ್ಲಿಯ ಇವಳನ್ನು ನೋಡಿ) ಅರಸ:- ಹಗಲಿರುಳು ಗಣಿಸದಲೆ, ಮಳೆಗಾಳಿಯೆಣಿಸದಲೆ ಮನೆಮಾರು ನೆನೆಯದಲೆ, ಬಳಗವನು ಕೂಡದಲೆ ಹರಕು ಸೀರೆಯನುಟ್ಟು, ಮಾಸಿದಾ ತಲೆಬಿಟ್ಟು ಕರದಿ ಜೋಳಿಗೆ ತೊಟ್ಟು, ಕಣ್ಣ...