ಬದಲಾಗಿದೆ ಕಾಲ ಸೂಕ್ಷ್ಮಾತಿಸೂಕ್ಷ್ಮ ಸಂಕ್ರಮಣ ಕಾಲ ಅಡಿಯಿಡುವ ಮುನ್ನ ನುಡಿ ಜಾರುವ ಮುನ್ನ ಎಚ್ಚರವಿರಲಿ ಹೂವೇ ಹಾವಾಗಿ ಪ್ರಕೃತಿ ವಿಕೃತಿಯಾಗಿ ಅಮೃತವೇ ವಿಷವಾಗಿ ಜೀವ ತೆಗೆಯಬಹುದು ಎಚ್ಚರವಿರಲಿ ಮಾತು ಮುತ್ತಾಗದೇ ಮೃತ್ಯುವಾಗಿ ನಗುವ ಬೆಳದಿಂಗಳು...
ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು ಗೊಹೇಶ್ವರ ಅಲ್ಲಮನ ವಚನ. ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು...