ಎಮ್ಮ ಪದ ಸಂಪ್ರದವಾದೊಡೆಮ್ಮ ಜೀವನ ಕ
ಸೀಮ ಸಿರಿ ಸಂಪದ ಚಯನ ಬೇಕಿಲ್ಲವೆನು
ತೆಮ್ಮ ಪಿರಿಯರಂದದ ಕೃಷಿಯನುಸುರಿದರು
ಕಮತದೊಳೊಸರುವ ಬೆವರಿನೊಳಮ್ಮನರ್ಚನೆ ಮಾಡಿ
ತಮ್ಮನ್ನದಾರ್‍ಜನೆಯ ದೋಷ ಕಳೆಯುತ ಬೆಳೆದಿಹರು – ವಿಜ್ಞಾನೇಶ್ವರಾ
*****