Home / ಲೇಖನ / ಇತರೆ / ನವಿಲುಗರಿ..

ನವಿಲುಗರಿ..

* ಹಲವರು ನಡೆದು ನಡೆದು ದಾರಿ.

* ಸಿನಿಮಾ ನಟರಾಗುವ ಗುರಿ ಹೊಂದಿ, ಅದಕ್ಕಾಗಿ ಇಂದಿನಿಂದಲೇ ಒಳ್ಳೆಯ ಮೈಕಟ್ಟು, ಮಾತು, ಹಾಸ್ಯ, ಅನುಕರಣೆ ಇತ್ಯಾದಿ ಅಭ್ಯಾಸ ಮಾಡಿ.

* ಹಸಿಶುಂಠಿ, ಒಣ ಶುಂಠಿಯಿಂದ ಆರೋಗ್ಯ, ಸೌಂದರ್‍ಯ ವೃದ್ಧಿಗಾಗಿ, ನಿತ್ಯ ಆಹಾರದಲ್ಲಿ ಬಳಸಿ.

* ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ೫,೫೦೦ ಕೇಜಿ ಚಿನ್ನವಿದೆ. ಅದನ್ನು ವಿವಿಧ ಬ್ಯಾಂಕಿನಲ್ಲಿಟ್ಟಿರುವರು. ವರ್ಷಕ್ಕೆ ೮೦ ಕೇಜಿ ಚಿನ್ನ ಬಡ್ಡಿಯಾಗಿ ಬರುವುದು.

* ಕ್ರಿಸ್ತ ಶಕ ೫ನೆಯ ಶತಮಾನದಲ್ಲಿ ಚೀನಾದ ತತ್ವಜ್ಞಾನಿಗಳಾದ ಗೊಂಗುಬನ್ (ಲುಬನ್) ಮೋದಿ (ಮೋಝಿ) ಅವರು ಗಾಳಿ ಪಟವನ್ನು ಕಂಡು ಹಿಡಿದರು.

* ಶುಂಠಿ ಸುವಾಸನೆ, ರುಚಿ, ಹಸಿವು ವೃದ್ಧಿಸುವುದು.

* ದಿನಾಂಕ ೦೨-೦೮-೧೭೧೫ರಂದು ಪ್ರಸಾದವೆಂದು ಲಡ್ಡು ನೀಡುವ ಸಂಪ್ರದಾಯವು ತಿರುಪತಿ ದೇವಸ್ಥಾನದಲ್ಲಿ ಮೊದಲಾಯಿತು. ಈ ಸಂಪ್ರದಾಯಕ್ಕೆ ಈಗ ೩೦೦ ವರ್ಷಗಳು ವರ್ಷಕ್ಕೆ ಬರೀ ಲಡ್ಡಿನಿಂದಲೇ ೧೯೦ ಕೋಟಿ ರೂಪಾಯಿ ಬರುತ್ತಿದೆ.

* ಕನ್ನಡಕ್ಕೊಬ್ಬರೇ ಕೈಲಾಸಂ ಅವರು ದಿನಾಂಕ ೨೯-೦೭-೧೮೮೫ರಂದು ಮೈಸೂರಿನಲ್ಲಿ ಹುಟ್ಟಿದರು. ಇವರ ತಂದೆ-ತಮಿಳುನಾಡಿನ ಜಸ್ಟೀಸ್ ತ್ಯಾಗರಾಜ ಪರಮಶಿವ ಅಯ್ಯರ್, ತಾಯಿ- ಕಮಲಮ್ಮ.

* ಒಣ ಶುಂಠಿ ಹಾಲಿನಲ್ಲಿ ಹಾಕಿ ಕುದಿಸಿ, ಬೆಲ್ಲದೊಂದಿಗೆ ಕಲಿಸಿ ನಿತ್ಯ ಕುಡಿಯುವುದರಿಂದ ಗಂಟಲು ನೋವು, ಕೆಮ್ಮು, ಕಫ, ನಿವಾರಣೆಯಾಗುವುದು.

* ಕಳ್ಳಿ ಗಿಡಕ್ಕೆ ಎಲೆಗಳಿಲ್ಲ!

* ಸೋಡಿಯಂನಿಂದ ಕಂದು- ಕಬ್ಬಿಣದಿಂದ ಕೆಂಪು ಬಣ್ಣ ಪೊಟಾಸಿಯಂನಿಂದ ಹಳದಿ- ಮ್ಯಾಂಗನೀಸ್‌ನಿಂದ ಗುಲಾಬಿ ಬಣ್ಣ… ಹೀಗೆ ವಿವಿಧ ಬಣ್ಣಗಳಿಂದ ಶಿಲೆಗಳು ರೂಪುಗೊಳ್ಳಲಿದೆ.

* ಆಲ್ಬೇನಿಯಾದಲ್ಲಿ ಶೇಕಡ ೭೦% ರಷ್ಟು ಟರ್‍ಕಿಯಲ್ಲಿ ಶೇಕಡ ೯೮% ರಷ್ಟು ಮುಸ್ಲಿಮರಿದ್ದಾರೆ. ಇವು ಎರಡು ದೇಶಗಳೂ ಯುರೋಪ್‌ನಲ್ಲಿವೆ.

* ಜನಪ್ರಿಯ ಹಾಡುಗಾರ ಮನ್ನಾಡೆ ದಿನಾಂಕ ೦೧-೦೫-೧೯೧೯ ರಲ್ಲಿ ಕೋಲ್ಕತ್ತದಲ್ಲಿ ಜನಿಸಿದರು. ಇವರ ಹೆಸರು- ಪ್ರಬೋಧ ಚಂದ್ರ ಅಡ್ಡ ಹೆಸರು- ಮನ್ನಾ ಎಂದು. ೩,೫೦೦ ಹಾಡುಗಳನ್ನು ಸಿನಿಮಾದಲ್ಲಿ ಹಾಡಿದ್ದಾರೆ. ೨೦೦೭ರಲ್ಲಿ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು. “ಜಿಮೊನೆರ್ ಜುಲ್ಲಾ ಘೋರೆ” ಎನ್ನುವುದು ಇವರ ಬಂಗಾಳಿ ಆತ್ಮಕಥೆ ಇದನ್ನು “ಮೆಮೊರೀಸ್ ಕಮ್ ಆಲೈವ್” ಎಂದು ಇಂಗ್ಲೀಷ್‌ಗೆ ಅನುವಾದಗೊಂಡಿದೆಯಲ್ಲದೆ ಹಿಂದಿ-ಮರಾಠಿಗೂ ಅನುವಾದವಾಗಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...