ಒರತೆಗಳು ಬೆರೆಯುವುವು ಹೊಳೆಯ ಬಳಿ ಸಂದು; ಹೊಳೆ ಹರಿದು ಕಡಲಲ್ಲಿ ಕೂಡುವುವು ಬಂದು; ಗಗನದೊಳು ಗಾಳಿಗಳು ಹಗಲೆಲ್ಲ ಬೆಂದು ಸುಳಿಯುವುವು ಬಯಸಿಕೊಂಡೊಂದನೊಂದು, ಧರಣಿಯೊಳಗಾವುದೂ ಒಂಟಿಯಿಹುದಿಲ್ಲ- ಸೆಳೆವೊಂದು ದಿವ್ಯವಿಧಿಯಿಂದ ಜಗವೆಲ್ಲ ಬೇರೆ ಇರಲಾರದೆಯೆ, ಮೀರದೆಯೆ, ಸೇರುವುವು; ನೀನೇಕೆ ಬೇರೆ ಇರುವೆ? –...

ಮೊಬೈಲು ಎಸ್ಸೆಮ್ಮೆಸ್ಸು ಬಂದು ಭಾವಿಸುವರು ರದ್ದಿ ಕಾಗದದಂತೆ ಕೋರಿಯರ್ ಆನ್‌ಲೈನು ಬಂದು ಕೈಗೆ ಕೋಲು ಬಂದಂತೆ ಭಾವಿಸಿ ಸಾಲದು ಎಂಬುದಕೆ ಕಾಯಿನ್ ಬೂತು ವಕ್ಕರಿಸಿದ್ದು ಬಿಟಿ ಬದನೆ ಬಂದಂತೆ ಎನ್ನ ಕುಲಕ್ಕೆ ಆಯಿತು ಸಂಚಕಾರ ಈ ಜಗತ್ತೇ ಹಾಗೆ- ಹೊಟ್ಟೆ...

ಎಲ್ಲಿ ಮರೆಯಾಗಿ ಹೋಗಿವೆ, ಎಲ್ಲಿ ಅಡಗಿ ಕುಳಿತಿವೆ ಜೀವನದ ಅರ್ಥವನ್ನು ಗಟ್ಟಿಯಾಗಿಸಿದ, ನನ್ನ ರೂಪಿಸಿದ ಸಿಹಿಕಹಿ ನೆನಪುಗಳು? ರಜೆ ಸಿಕ್ಕಿತೆಂದರೆ ಅಜ್ಜಿ ಮನೆಗೋಡುವ ಸಂಭ್ರಮ, ತುಂಬಿದ ಮನೆಯ ಸಡಗರ; ನೂರೊಂದು ವರುಷ ಬಾಳಿದ ಪಿಜ್ಜನ ಯಜಮಾನಿಕೆಯ ದರ್...

ಅಗೊ, ಬೇಲಿಹಾರಿ ಓಡಿತು ಕೋಳಿ ಹೊರಗೆ, ಮನೆ- ಜೋಪಾನದಲಿ ನುರಿತ ಗೃಹಿಣಿ ಕಂಕುಳ ಮಗುವ ಅಲ್ಲೆ ಕೆಳಗಿಳಿಸಿ ಬೆನ್ನೆಟ್ಟಿದಳು ಸರಸರನೆ ಜಿಗಿದು ಓಡುವ ಕೋಳಿಯನ್ನು ‘ಹೋ’ ಎನುತಳುವ ಮಗು ತಾಯ ಹಿಂದೆ. ದೂರದಲೋಡಿ ಬರುತಿದೆ ಕೂಗಿ ಕರೆಯುತ್ತ ಕಣ್ಣೆದುರೆ ನೆ...

ಉಗ್ರಪ್ಪನ ವಾದ ಉಗ್ರಪ್ಪನ ಸಸ್ಪೆಂಡ್ ಆರ್ಡರ್ ಹೊರಡಿಸಿ ಹತ್ತಿರ ಹತ್ತಿರ ಒಂದು ತಿಂಗಳಾಗುತ್ತ ಬಂತು. ನಾಗೇನಹಳ್ಳಿಯ ಪಾಠ ಶಾಲೆಯ ಪ್ರಾರಂಭೋತ್ಸವದಿಂದ ಮನಸ್ಸು ಹರ್ಷಯುಕ್ತವಾಗಿದ್ದರೂ ರಂಗಣ್ಣನಿಗೆ ಆಲೋಚನೆ ತಪ್ಪಲಿಲ್ಲ. ತನಗಿರುವುದು ಒಂದು ತಿಂಗಳು ...

ಬೆಳಿಗ್ಗೆ ಬೆಳಿಗ್ಗೆ ಪೇಪರ್ ಓದುವುದೆಂದರೆ ಟಿ. ವಿ. ನೋಡುವುದೆಂದರೆ ಮೈಮೇಲೆ ಕೆಂಪಿರುವೆಗಳನ್ನು ಬಿಟ್ಟುಕೊಂಡಂತೆ ಪೇಪರ್ ಪುಟಗಳು ತೆಗೆದರೆ ಟಿ.ವಿ. ಚಾನೆಲ್‌ಗಳು ಒತ್ತಿದರೆ ಸಾಕು- ಘನಂದಾರಿ ಕೆಲಸ ಮಾಡುತ್ತೇನೆನ್ನುವವರ ಆರೋಪ ಪ್ರತ್ಯಾರೋಪ ಕೂಗಾಟ...

ದೇವ ಮಂದಿರದಲ್ಲಿ ನನ್ನ ಒಡವೆ ಕದ್ದ ಕಳ್ಳ ಸಿಕ್ಕಿ ಬಿದ್ದ- ಜೈಲಿನಲ್ಲಿ ಬಂದಿಯಾದ. ಅದೇ ದೇಗುಲದಲ್ಲಿ ಹೃದಯ ಕದ್ದ ನಲ್ಲ ನನ್ನ ಮನ ಮಂದಿರದಲ್ಲಿ ಬಂದಿಯಾದ- ಆತ್ಮ ಬಂಧುವಾದ. *****...

‘ಸುದೀರ್ಘವೂ ಸೃಜನಶೀಲವೂ ಆದ ಬದುಕನ್ನು ಬದುಕಿದ ಇತರ ಶ್ರೇಷ್ಠ ಕಲಾವಿದರಂತೆಯೇ, ಬರ್ನಿನಿ ಕೂಡಾ ವ್ಯಕ್ತಿಗತವಾದ ತನ್ನದೇ ತಡವಾದ ಶೈಲಿಯೊಂದನ್ನು ರೂಪಿಸಿಕೊಂಡ. ಈ ಸಾದೃಶ್ಯವನ್ನು, ಉದಾಹರಣೆಗೆ, ರೆಂಬ್ರಾಂಟ್ ಅಥವಾ ಬಿಥೋವೆನ್‌ರ ಜತೆ ಇನ್ನೂ ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...