ನಟ ತೆರೆಯ ಮರೆಯಾದ ಆಟ ತೀರಿಸಿಕೊಂಡು, ಭಟ ಸಮರದಿಂದ ತೆರಳಿದ ಅರಸನರಮನೆಗೆ; ಪಟು ಪಾಡುಗಾರ ತುಟಿ ಮುಚ್ಚಿದನು ನಾಡು- ನುಡಿಗಳ ಹಾಡುಗಳನು ಹಾಡಿ. ಅಟಮಟದ ಮಾತಲ್ಲ; ನಾಡೆ ನಾರಾಯಣನು, ದಿಟವಾಗಿ ‘ನುಡಿಯೆ ಸಿರಿ’ ಎಂದು ಕೀರ್ತನೆಗೈದು ಹಟದಿ ಕೀರ್ತನಗಾರ ಬೆವರನೊರಿಸಲು ಹಿಂದೆ ಸರಿದ ವಿಶ್ರಾಂತಿಗಾಗಿ. ...

ಶ್ರುತಿಯೆ ಬೆಳಕು ಬಾಳಿನಂದದ ರೂಪಕೆ ನಭದೆ ದನಿಯ ಆನಂದಹೊನಲಸುರಕೆ|| ಕರವ ಮುಗಿದು ಬೇಡುವಂದದಿ ತಾಯೆ|| ಒಲವಿಂದ ವೃಂದದಲಿ ಕೂಡಿ ನಲಿದು ಬಾರೆ ಬಾರೆ ಜಗವ ತಣಿಸುತಲಿ ಕುಣಿದು ನಲಿದು ಮನವ ತಣಿಸೆ ಆನಂದದಲಿ ಕೂಡಿ ಒಲಿದು ಬಾರೆ ಬಾರೆ ಬಾ ತಾಯೆ ಶೃಂಗಾರ ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ದೀರ್‍ಘಕಾಲದ ಮೌನ ಮುಗಿದು ಮಾತು; ಬೇರೆ ಪ್ರೇಮಿಗಳು ಸಂಬಂಧ ಕಡಿದೋ, ಮಡಿದೋ ಇಲ್ಲದಿರುವಾಗ, ನಿಷ್ಕರುಣಿ ದೀಪಕ್ಕೆ ಕವಿಸಿ ಮರೆಯನ್ನ ನಿಷ್ಕರುಣಿ ಇರುಳಿಗೆ ಸರಿಸಿ ತೆರೆಯನ್ನ ಸಂಗೀತ ಕಲೆಗಳ ಉನ್ನತವಸ್ತುವನ್ನ ನಾವೀಗ ತಿ...

ಒಂದು ದಿನ ಇದ್ದಕ್ಕಿದ್ದ ಹಾಗೆ ನಮ್ಮ ಆಸ್ಪತ್ರೆಯ ಮುಖ್ಯಾಧಿಕಾರಿಗಳು ನನ್ನನ್ನು ತಮ್ಮ ರೂಮಿಗೆ ಕರೆಯಿಸಿಕೊಂಡರು. ನನ್ನ ಕೈಗೊಂದು ಆರ್ಡರ್ ಕಾಪಿಯೊಂದನ್ನು ಕೊಟ್ಟು, “ನಿಮಗೀಗ ವರ್ಗವಾಗಿದೆ. ಇಂದೆಯೇ ನಿಮ್ಮನ್ನು ಈ ಆಸ್ಪತ್ರೆಯ ಕೆಲಸಗಳಿಂದ ಬ...

ಅಲ್ಲೊಮ್ಮೆ ಇಲ್ಲೊಮ್ಮೆ ತಾನೆ ಹರಿವುದು ಮನಸಿ- ನಿರುವಿಕೆಯು, ದಿವ್ಯಹರ್‍ಮ್ಯವನೊಮ್ಮೆ ಬೇಡುವುದು ಅರಸರೈಸಿರಿಯೆಲ್ಲ ಬೇಕೆಂದು ಕಾಡುವುದು. ಅನುದಿನವು ಕೊರಗುವುದು ತನ್ನ ಸ್ಥಿತಿ ಕೆಡುಕೆನಿಸಿ. ಒಮ್ಮೆ ಚೆಲುವೆಯರಾದ ಲಲನೆಯರನತಿ ನೆನಸಿ,- ಅವರ ಚಂಚಲ ...

ಕೌರವನೆದೆಯಲಿ ಕಮಲವು ಅರಳಲಿ ರಾವಣನಾಗಲಿ ಗಿಳಿಹಕ್ಕಿ ಭುವನದ ಮನುಜರು ಜೇಂಗೊಡವಾಗಲಿ ಮೂಡಲಿ ಮಿನುಗಿನ ಹೊಸ ಚುಕ್ಕಿ ಮಂದರ ಗಿರಿಯಲ್ಲಿ ಮಧುಮಯ ಸಿರಿಯಲಿ ವಧುವಾಗಿರುವಳು ಋಷಿಕನ್ಯೆ ನವೋದ್ಯಾನದ ತೂಗುಯ್ಯಾಲೆಗೆ ಬಾಗುತ ಬಂದಳು ರಸಕನ್ಯೆ ಪಡೆಯುವದೇನಿದೆ...

ಫೆಬ್ರುವರಿ ತಿಂಗಳ ಮಯೂರ ಪತ್ರಿಕೆಯಲ್ಲಿ ನಮ್ಮ ಉತ್ತರ ಕನ್ನಡದ ಹೆಮ್ಮೆ ಖ್ಯಾತ ಕಥೆಗಾರ ಶ್ರೀಧರ ಬಳಿಗಾರರು ನನ್ನ ಕಥಾ ಪ್ರಸಂಗ ಎಂಬ ಸ್ವ ಅನುಭವವನ್ನು ದಾಖಲಿಸಿದ್ದರು. ವಾಸ್ತವ ಮತ್ತು ಕಲ್ಪನೆಗಳ ನಡುವಿನ ವಿಚಿತ್ರವಾದ ಮನೋವ್ಯಾಪಾರದ ಕಣದಲ್ಲಿ ಅರೆ...

ಸಂಜೇಲ್ ಓ ಲಸ್ಮಣಾಂತ್ ಏಳಿ ಅಟ್ಟೀಗ್ ಬಂದ್ರೆ ಬೇಗ ದಾರೀನ್ ನೋಡ್ತ ನಿಂತ್ಕೊಂಡೌಳೆ ನಂಜಿ ಬಾಗಿಲ್ನಾಗ! ೧ ಜೀತಕ್ ಜೀವ ಬಲಿ ಕೊಟ್ಮೇಲೆ ನಂಜೀನೆ ಒಸ್ ಪ್ರಾಣ! ನಂಜೀನ್ ಏನ್ರ ನೆನಿದೆ ಓದ್ರೆ ಉಡಗೋಗ್ತೈತೆ ತ್ರಾಣ! ೨ ಜೀವಾನ್ ಬೆಳಸೋಕ್ ತಾಕತ್ ಅಂದ್ರೆ ...

ತಂತಾನೆ ತಣಿವಿನಲ್ಲಿದ್ದ ತಲ್ಲೀನತೆಯು ನಿದ್ದೆ ತಿಳಿದೆದ್ದಾಗ ಎನಿತೆನಿತು ಶಾಂತಿ! ಬಾಯಿಲ್ಲದನುಭವದ ನೆನವೆ ನನೆಕೊನೆಹೋಗಿ ಕನಸೇ ನನಸಾಗಿರಲದೆಂಥ ನವ ಕಾಂತಿ! ಆಟವೇ ಹಿಗ್ಗು? ಒಡನಾಟವೇ ಹಿರಿ ಹಿಗ್ಗು ನೋಟದ ವಿಲಾಸವೇ ಗುಡಿಕಟ್ಟಿದಂತಿದೆ. ಒಂದು ಹಿಗ್...

ಸಂಪಿಗೆಯ ವೃಕ್ಷದ ಕೆಳಗೆ ಕುಳಿತ ಗುರುವಿನ ಸಾನಿಧ್ಯಕ್ಕೆ, ಒಬ್ಬ ಸಾಧಕ ಬಂದು ‘ದೀಕ್ಷೆ’ ಕೊಡಲು ಕೇಳಿಕೊಂಡ. ಗುರು ಹೇಳಿದರು- “ಅರಳಿದ ಸ್ವರ್ಣ ಸಂಪಿಗೆ, ಬುದ್ಧದೇವನ ಸಂದೇಶವ ಸಾರುತ್ತಿದೆ. ಗಿಡವು ಗುರುವಾಗಿರುವಾಗ, ನೀನು ದೀಕ್ಷೆ ಕೊ...

ಸಂತಸವೆಂದೊಡದು ಕುಂತತಿ ತಿನ್ನುವುದಲ್ಲ ಅಂತೆ ತಿನದಿರ್‍ಪವರ ಕಂಡು ಸುಖಿಸಲಳವಿಲ್ಲ ಸ್ವಂತ ದುಡಿಮೆಯು ಸಾಯುತಿರಲೆಂತು ನೋಡಿದೊಡಂ ಕಂತುತಿದೆ ನಿಶ್ಚಿತದಿ ಅನ್ನ ಮೂಲದ ಬಲವು ಚಿಂತನದ ಕೃಷಿ ದಾರಾವೃತವನಿವಾರ್‍ಯವೀ ಜಗಕೆ – ವಿಜ್ಞಾನೇಶ್ವರಾ ***...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...