ತಾಯೆ ಓ ಜಗದ ಮಾಯೆ
ಬಂಧಿಸಿರುವೆ ನಿ ಎತ್ತೆತ್ತಲು
ನಿನ್ನ ಸ್ಮರಣಿಯ ಮರೆಸಿ ಮತ್ತೆ
ದುಕ್ಕ ದುಮ್ಮಾನಗಳ ಸುತ್ತಲೂ

ನಿನ್ನ ಜ್ವಾಲೆಯಂತಹ ಕಂಗಳು
ನಿನ್ನ ನಗುವು ಬೆಳದಿಂಗಳು
ನಿನ್ನ ಕೌದ್ರಾವತಾರದ ಕೆನ್ನಾಲಗೆ
ಮೂಲೋಕಕ್ಕೆ ಸುಡುವ ಇಂಗಳು

ನಿನ್ನ ನರ್‍ತನವೂ ತಾಂಡವ ಲೀಲೆ
ನಿನ್ನ ಕೋಪಾಗ್ನಿ ದುಷ್ಟರಿಗಾಗಿ
ನಿನ್ನ ಕೃಪಕಟಾಕ್ಷ ಭಕ್ತರ ಮೇಲೆ
ನಿನ್ನ ಪ್ರೇಮಾಮೃತ ಶಿಷ್ಟರಿಗಾಗಿ

ತಾಯೆ ನಿನ್ನೆದುರಿನಲಿ ನಾ
ನನ್ನ ಅಂಗೈ ಚಾಚಿ ಬೇಡುತ್ತಿರುವೆ
ನಿನ್ನ ದರುಶನಕ್ಕಾಗಿ ನಿತ್ಯವೂ
ನಾನಿಲ್ಲೆ ಕೊರಗಿ ಬಾಡುತ್ತಿರುವೆ

ಸಾಧು ಸಂತರಿಗೂ ದರುಶನವನಿತ್ತೆ
ನಿನ್ನ ನಂಬಿದವರಿಗೂ ಕೈ ಹಿಂಡಿ
ನಾನು ಈಗ ನಿನ್ನ ಬಿಡಲಾರೆ
ಮಾಣಿಕ್ಯ ವಿಠಲ ಸಲಹು ತಂದೆ
*****