ವರ್‍ತಮಾನ ಅಭಿಮಾನದ ಹೊನ್ನಬೆಳಕಲ್ಲಿ
ಮುನ್ನೆಡೆದಿದೆ ನವಯುಗದ ನವಚೇತನ
ಹಿಮ್ಮೆಟ್ಟದೆ ಮುನ್ನುಗಿದೆ ಅನಂತ ಕಾನನ ||

ಕರ್‍ನಾಟ ಗತಕಾಲದಿ ಮೆರೆದಿದೆ
ಕಲಿ ಜಾಗೃತದ ಅರಿವ ಮೂಡಿಸುವಡೆಗೆ
ಶೃಂಗವೇರಿದೆ ಬಾಹ್ಯಸತ್ವವಿಜ್ಞಾನದ ಮರ್‍ಮತೆ ಸಾಧನಕೆ ||

ಮನ್ವಂತರದ ಪುರಭಾವೆಯಲಿ
ಭಾವತೆಯ ಹೊಂಗಿರಣ ಬೆಳಗಿ ಹಸನಾಗಿಹ
ಗಮ್ಯ ರೂಪತೆಯೆಡೆಗೆ ಕೈ ಚಾಚಿ ಕರೆದಿದೆ ಸಿಂಹಸ್ವಪ್ನ ||

ಆಂತರಿಕ ಸ್ವಪ್ಪ ತಾಣದಲಿ ಭದ್ರತೆಯ
ಬುನಾದಿಯ ಬಿಂಬದಿಂ ಪ್ರತಿಬಿಂಬವಾಗಿ
ಯಂತ್ರಮಾನವ ಮಂತ್ರತೆಯ ಮುಗ್ಧತೆಯನ್ನು ತೋರಿದೆ ||

ಸುಧ್ವಾನ ಹಕ್ಕಿ ಬೆಳ್ಮುಗಿಲ ಸೇರಿ
ಸ್ವಾತಂತ್ರ್ಯದ ವರ್‍ತಮಾನದಿರುಳ ಶುಭ್ರತೆಯ
ಐಕ್ಯತೆಯ ತೋರಿ ಆರ್‍ತನಾದದ ಮೆಟ್ಟಲೇರಿ ನಿಂತಿದೆ ||
*****