ಪಾಂಡೋರೊಂದು ಮುರುದಂಗಾ ಲಿಡೀದಾರೋ
ನಾರಾಣ ತಾಲಾವ ಹಿಡಿದಾನೋ || ೧ ||

ಪಾರಾವತಿ ಲುರುಗೆಜ್ಜೇನ ಹಿಡಿದಾಲೋ
ಮೂಡಿನೊಂದು ಮುಂದಾಗೀ ನಡೆದಾರೋ || ೨ ||

ಮೂಡಿಗೊಂದು ಮೊಕುವಾಕೇ ನಿಂತಾರೋ
ಪಾಂಡೋ ರೊಂದು ಮುರುದಂಗಾನೇ ಹೊಡಿದಾರೋ || ೩ ||

ನಾರಾೖಣ ತಾಲಾನೇ ಹೊಡೆದಾನೋ
ಪಾರಾವತಿ ಲುರುಗೆಜ್ಜೇನ ಕಟ್ಟಗಿಲೋ || ೪ ||

ದೇವತೆಗೋಲ ಕುಂಜಾನೇ ಹಿಡಿದಾರೋ
ಬಲಿಂದರಾಯ ಹೊಯ್ಲನೇ ಹೊಡೆದಾನೋ || ೫ ||

ಯೇಲೂ ಹಗಲೂ ಯೇಲು ದಾತರೇ ಕೊನಿದಾರೋ
ನೋಡ ಗುಡ್ಡೇ ಗುಡ್ಡೆ ಕಲ್ಲೇ ಯೆಲ್ಲಾವ ನಡ್ಸುವಾಗೇ || ೬ ||

ಗುಡ್ಡೆಮೇನೆ ಮರುಗಾದಿ ಗೋಳೆಲ್ಲಾ
ನೋಡೆ ಹುಲ್ಲೂನೀರು ತಾವೇಯ ಬಿಡುವಾಗೇ || ೭ ||

ಆಕಾಶಕೆ ದುಗುಲೇಯ ಹಾರುವಾಗೇ
ಪಾರವೋತಿ ಪರುಮೇಶ್ವರ ಬರೂವಾಗೇ || ೮ ||

ನೋಡಾಕಾಶಕೆ ದುಗುಲೇಯ ಹಾರುವಾಗೇ
ನೋಡ ಕಣ್ಣೀಗೆ ಹೊಡಿಯಾರು ಶಿರುವಾಗೇ || ೯ ||

ನೋಡಿದುವೇ ನಮ್ಮಾಗೆ ತರವಲ್ಲೋ
ನೋಡಿದವು ನಮಗೆ ತರವಲ್ಲೇ || ೧೦ ||

ಗೌಡಾರೊಂದು ಬೊಮ್ಮಣ್ಣನ ಕರೆಬೇಕೂ
ನಾವ್ ಬಟ್ಟಕೊಂದು ಜೋಯಿಸಾನ ಕೇಲುಬೇಕೂ || ೧೧ ||

ನಾವ್ ಕಾಲಾಕೊಂದು ಸೂರಾಡುಲೆ ಬರುವಾದೋ
ನಾ ಶುಗ್ಗೀ ಯೇಲು ಶಿವರಾತುರಿ ದಿನುದಲ್ಲೀ || ೧೨ ||
*****
ಹೇಳಿದವರು: ದೇವುಕುಪ್ಪ ಗೌಡ, ನೆಲ್ಲೆಕೇರಿ ಮೂರೂರು. ದಿ: ೧೫/೧೧/೧೯೭೧

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.