ಭಸ್ಮವಾದರು ದೃಶ್ಯ ಅಸ್ಮಿ ಎನ್ನುತ್ತಲಿದೆ ಕಸ್ಮಾತ್‌? ಅಕಸ್ಮಾತ್ತೋ? ಸಾಕ್ಷಿ! ಹೇಳು. ಯಾ ಅನಾಹತನಾದ ಯಾವದೋ ಆಸ್ವಾದ ಹೃದ್ಗಂಧಿಯಾಮೋದ ಬಂತು ತಾಳು. ಕ್ಷಣ ಕ್ಷಣ ಅಹಂ ಮೃತಿಯು ಆದರೂ ಆಕೃತಿಯು ಸತ್ಯ ವಾಸನೆಯಂತೆ ಸುಳಿಯುತಿಹುದು. ಆವಾಸ ರಜತವೋ ಆಸ್ತಿಕ್ಯ ನಿಹಿತವೋ ಪಾದ ಮೂಡದ ಹಾದಿ ತುಳಿಯುತಿಹುದು. ಒಂದೆ ಎರಡಾಗ...

ಮೂಲ: ಗನ್ವರ್ (ನಾರ್ವೇಜಿಯನ್ ಕವಿ) ಬೆಳಕು ನುಗ್ಗುತ್ತದೆ ತೆರೆದ ರೂಮಿನೊಳಕ್ಕೆ ಮೌನದ ಅಲೆಗಳಂತೆ. ಕೆಂಪು ಕ್ಯಾಕ್ಟಸ್‌ ಹೂವು ಎಲ್ಲಕಡೆ ಚೆಲ್ಲಿವೆ, ನಾಚುತ್ತ ನೋಡಿವೆ ನುಗ್ಗುತ್ತಿರುವ ಬೆಳಕಿನತ್ತ ಏನೋ ನಿರೀಕ್ಷಿಸುತ್ತ. ಹಸಿರು ಎಳೆಗಳ ನಡುವೆ ಹೆಪ...

ಸಾಹಿತಿ ಸುಂದರಯ್ಯನವರಿಗೆ ಪುಸ್ತಕದ ಬಾಬು ಮುಂಗಡ ಹಣವನ್ನು ಸಂಗಪ್ಪ ಕೊಟ್ಟುಬಿಟ್ಟ. ಆ ಸಂದರ್ಭದಲ್ಲಿ ಸುಂದರಯ್ಯ ಶಾನುಭೋಗರು ಮತ್ತು ಸಂಗಪ್ಪ ಲೋಕಾಭಿರಾಮವಾಗಿ ಮಾತಾಡ್ತ ಇದ್ದಾಗ ಸುಂದರಯ್ಯ ಹೇಳಿದರು: “ಸಂಗಪ್ನೋರೆ ನೀವು ನಿಜವಾಗ್ಲೂ ಸಮಾಜ ಸೇವೆಗೇ ...

ನಿನ್ನ ಮಗಳಾದ ಲಕ್ಷ್ಮಿಯಂತೆ ಸೌಂದರ್ಯದ ತವರಲ್ಲ ನಾನು ಓ! ಸಮುದ್ರ! ಆದರೆ ಮಗುವಿನಂತೆ ನಿನ್ನನು ಪ್ರೀತಿಸಿದೆ! ಕರುಣಿಸು ತಂದೆ! ನಾರಾಯಣನಂತೆ ಲಕ್ಷ್ಮೀಲೋಲನಲ್ಲ, ಶೇಷಶಾಯಿಯಲ್ಲ ಓ! ಸಮುದ್ರ! ಅವನಂತೆ ಪಾರಾಯಣ ಮಾಡಿದೆ ನಿನ್ನ! ಉರವಣಿಸೆನ್ನ ಮನವ, ತ...

ಪಂಚಗುರುಗಳು ಮಿಂಚಿ ಬಂದರು ಜ್ಯೋತಿ ಜಂಗಮವಾದರು ಪಂಚತತ್ವಕೆ ಪಂಚಪೀಠಕೆ ಪ೦ಚ ಧ್ವಜವನ್ನು ಹಿಡಿದರು ಶಾಂತಿ ಪ್ರೀತಿ ತ್ಯಾಗ ನೀತಿ ಮನುಜ ಸಂಸ್ಕೃತಿ ಮೆರೆದರು ದಾಳಿ ಇಟ್ಟಾ ಹಾಳು ಗೂಳಿಯ ಕಾಳ ಕತ್ತಲೆ ಕಳೆದರು ಆದಿಜ್ಯೋತಿರ್ಲಿಂಗ ಪೀಠದ ಅಮರ ಮಂತ್ರವ ಕ...

ಅಧ್ಯಾಯ ಹದಿನೇಳು ಕನ್ನಡ ಚಿತ್ರರಂಗವು ತನ್ನದೇ ಆದ ಶೈಲಿಯೊಂದನ್ನು ರೂಪಿಸಿಕೊಳ್ಳಲು ಆರಂಭದಿಂದಲೂ ಹೆಣಗಾಡುತ್ತಿತ್ತು. ಹಾಗೆಯೇ ನಿರ್ಮಾಣದ ದೃಷ್ಟಿಯಿಂದಲೂ ಚಿತ್ರರಂಗ ಬಡವಾಗಿತ್ತು. ಹಾಗಾಗಿ ಹೆಚ್ಚಿನ ಪ್ರಯೋಗಗಳ ಸಾಧ್ಯತೆಯನ್ನು ನಿರೀಕ್ಷಿಸುವಂತಿರಲ...

ಕಾದಿಹಳು ಭೂದೇವಿ, ನೀವು ಬಾರಿರಾ! ದಿವ್ಯ ತೀರ್ಥ ತಾರಿರಾ! ಬಿಸುಸುಯಿಲ ಬೇಗೆ ಹೊಮ್ಮಿ ಆಗಸವ ತಟ್ಟಿ ತಿವಿಯೆ ಹರಣವನೆ ಕೊರಳಲಿರಿಸಿ ಕರುಣೆಯನು ಕೇಳುತಿಹಳು ಕ್ಷಣ ಕ್ಷಣವು ನಿಮ್ಮ ನೆನಸು ಆನುದಿನವು ನಿಮ್ಮ ಕನಸು ಮರದುದಿಗೆ ಕಣ್ಣನಿರಿಸಿ ನೋಡುವಳು ಕ್...

ಆಕಾಶದಲ್ಲಿ ಧ್ವನಿ-ದೂರದಿಂದ ಕೃಷ್ಣ ಕೃಷ್ಣ ಜಯ ಕೃಷ್ಣ ಮುರಾರೇ ವಿತೃಷ್ಣನಾದೆನು ನಾ ಬಾಯಾರೆ ದ್ವಾರಕೆ ಬಾಗಿಲ ತೆರೆಯದೊ ಬಾರೆ ಉತ್ತರೆಯಿಂದುತ್ತರವನು ತಾರೆ. ಕೃಷ್ಣ ಕೃಷ್ಣ ಜಯ ಜಯ ತ್ರಿಪುರಾರೇ ಶರಪಂಜರದಲಿಯೊರಗರಲಾರೆ ಕೃಷ್ಣ ಕೃಷ್ಣ ಜಯ ಜಯ ಕೃಷ್ಣ ...

ಅದೊಂದು ಬೆಟ್ಟಗುಡ್ಡಕಾಡು, ಅಲ್ಲಿ ಗುಡ್ಡ ಕಲ್ಲುಗಳ ರಾಜ್ಯಭಾರ. ನಡೆದು ಬರುತ್ತಾ ಒಮ್ಮೆ ನಾನೂ ಈ ಬೆಟ್ಟಗುಡ್ಡಗಳ ರಾಜ್ಯದಲ್ಲಿ ಹೆಜ್ಜೆ ಇಟ್ಟೆ. ಮೊದಲಿಗೆ ನನಗೆ ಹೆದರಿಕೆಯಾಯಿತು. “ಅಬ್ಬಾ! ಇದೆಷ್ಟು ದೊಡ್ಡ ಬೆಟ್ಟ ಗುಡ್ಡಗಳು” ಎನಿಸಿತು. ಇ...

ಕೆರೆಯ ನೀರನು ಕೆರೆಗೆ ಚೆಲ್ಲುತಲಷ್ಟೊಂದು ದರಿದ್ರದೊಳು ವರವ ಪಡೆವುದೇನೆಂದೆ ಲ್ಲರುಂ ವರಹದೊಳೆಲ್ಲ ಬೇಕುಗಳ ಪಡೆಯು ತಿರೆ ಕೆರೆಯೊಣಗಿ ಮೆರೆಯುತಿದೆ ಮರುಪೂರಣದೆಲ್ಲ ತಜ್ಞತೆ ಬರಿದೆ – ವಿಜ್ಞಾನೇಶ್ವರಾ *****...

(ಹಳೆಯ ಕಥೆ) ಮಾಲೆಗಳು, ಮಾಲೆಗಳು ಬೀದಿ ಮನೆಮನೆಗೆ; ಮುತ್ತುಗಳ ಸೇಸೆಗಳು ತಲೆಯೊಳಗೆ ಮಿನುಗೆ; ಮಾಳಿಗೆಗಳೊಲೆದಾಡಿ ಹಿಗ್ಗು ಮುಗ್ಗಾಗೆ; ಎತ್ತಿದಾ ಗುಡಿ ದೀಪಗೋಪುರವ ಬೆಳಗೆ- ಒಂದು ವರುಷದ ಕೆಳಗೆ ನನಗೆ ಮೆರವಣಿಗೆ! ಗಾಳಿ ನೊರೆಕೀಳುವುದು ವಾದ್ಯಗಳ ಮೊ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...