ಪಂಚಗುರುಗಳು ಮಿಂಚಿ ಬಂದರು
ಜ್ಯೋತಿ ಜಂಗಮವಾದರು
ಪಂಚತತ್ವಕೆ ಪಂಚಪೀಠಕೆ
ಪ೦ಚ ಧ್ವಜವನ್ನು ಹಿಡಿದರು
ಶಾಂತಿ ಪ್ರೀತಿ ತ್ಯಾಗ ನೀತಿ
ಮನುಜ ಸಂಸ್ಕೃತಿ ಮೆರೆದರು
ದಾಳಿ ಇಟ್ಟಾ ಹಾಳು ಗೂಳಿಯ
ಕಾಳ ಕತ್ತಲೆ ಕಳೆದರು
ಆದಿಜ್ಯೋತಿರ್ಲಿಂಗ ಪೀಠದ
ಅಮರ ಮಂತ್ರವ ಕೊಟ್ಟರು
ಹೊಗೆಯ ಕಳೆದು ನಗೆಯ ತುಂಬಿ
ಕರ್ಪುರಾರತಿಯಾದರು
ಜಡವ ಒಡೆದರು ಜಾಡ್ಯ ಕಡೆದರು
ವಿಶ್ವ ಜ೦ಗಮವಾದರು
ಲಿಂಗತತ್ವದ ಶಿಖರ ಸಂಸ್ಕೃತಿ
ಭುವನ ಪೀಠಕೆ ತಂದರು
*****



















