ನಿನ್ನ ನಾನು ಪ್ರಿತಿಸುವೆನು ಶ್ಯಾಮ ಮಧುರ ಯಾಮಿನಿ ನಿನಗಾಗಿಯೆ ಹಾತೊರೆವೆನು ಸ್ವಪ್ನ ಲೋಕ ಸ್ವಾಮಿನಿ. ನೀ ಬಂದರೆ ಇಳೆಗಿಳಿವುದು ಅತುಲ ದಿವ್ಯ ಶಾಂತಿಯು ನಿನ್ನಿರುಳಲಿ ಕರುಳಿಗೆಲ್ಲಿ ಸಂಸಾರದ ಭ್ರಾಂತಿಯು ಉಕ್ಕಿಸುತ್ತ ಕಾಳ್ಗಡಲನು ಬ್ರಹ್ಮಾಂಡವ ಮುತ್ತಿದೆ ಬಾನ್ಬಯಲಲಿ ಹಣ್ಣಿಸಿರುವ ರವಿ ತೇಜವ ಮುಕ್ಕಿದೆ. ಅಂಧಂ...

“ಸಾಮಾನ್ಯವಾಗಿ ತಪ್ಪು ಮಾಡಿದ್ದರೆ ಮಣ್ಣುತಿನ್ನು ಹೋಗು” ಎಂದು ಉಡಾಫೆಯಾಗಿ ಹೇಳುವ ಜನರಿದ್ಧಾರೆ. ಒಂದರ್ಥದಲ್ಲಿ ಇದು ತಿನ್ನಲು ಯೋಗ್ಯವಲ್ಲದ್ದು ಎಂದೇ ಭಾವನೆ. ಅಥವಾ ಮಣ್ಣನ್ನು ಯಾರು ತಿನ್ನಲಾರರೆಂದೇ ಜನರ ನಂಬಿಕೆ. ಆದರೆ ಇತತ್ತೀಚಿ...

ಏತಕೆ ಆಟ ಆಡುವಿ ಭಕ್ತನ ವೇಷ ಹೂಡುವಿ? ಮೈಯ ಮೋಹದ ಕಾಮೀ ಬೆಕ್ಕು ಗುರುಗುಡುತಿದೆ ಒಳಗೆ ಬಿಚ್ಚಿದೆ ಉಗುರ, ಎತ್ತಿದೆ ಪಂಜ ವಿರಾಗಿ ವೇಷ ಹೊರಗೆ ಲೋಭ ಮೋಹಗಳ ಚಿರತೆ, ತೋಳ ತಲೆಯ ಬೋನಿನೊಳಗೆ ಆದರ ಫಳಫಳ ಗೋಪೀ ಚಂದನ ತೋಳಿಗೆ ಎದೆ ಹಣೆಗೆ ಜಪಮಣಿ ಮಾಲೆಯ ನ...

ಅದೊಂದು ಸರ್ಕಾರಿ ಆಸ್ಪತ್ರೆ ಆಸ್ಪತ್ರೆಗೆ ಹೋಗುವ ಮುಖ್ಯ ಬೀದಿಯಲ್ಲಿ (One way) ‘ಏಕಮುಖ ಸಂಚಾರ’ ಎಂದು ಬೋರ್ಡು ಹಾಕಿದ್ದರು. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದವರು “ಇದರ ಅರ್ಥ ಏನು ಎಂದು ತಿಳಿಯಬಹುದೆ?” ...

” ಜೀವನಕ್ಕೆ ಉದ್ದೇಶವೇನು?” ಎಂದು ಒಬ್ಬ ತರುಣನು ಅತ್ಯ೦ತ ಕುತೂಹಲದಿಂದ ಕೇಳಿದನು. ಸಂಗನುಶರಣನು ಮನಸ್ಸಿನಲ್ಲಿ ಜಗದಂಬೆಯನ್ನು ಸ್ಮರಿಸಿ, ಪ್ರಸ್ತುತ ಪ್ರಶ್ನೆಯನ್ನು ಆಕೆಯ ಸನ್ನಿಧಿಗೊಪ್ಪಿಸಿ, ತನ್ನ ತಲೆಯೊಳಗಿರುವ ವಿಚಾರಗಳ ನ್ನೆಲ್ಲ...

ದಿನಪತ್ರಿಕೆಯ ಪುಟವ ತಿರುಗಿಸಲು ಕಾಣುತಿಹವು ಸಾವು ರೈತರ ಆತ್ಮಹತ್ಯೆ ಸಾವು ಅಲ್ಲಿ ಸಾಯುವನು ಇಲ್ಲಿ ಸಾಯುವನು ದಿನವು ಸಾಯುವರು ಮಣ್ಣಿನ ಮಕ್ಕಳು ದಿನವು ಸಾಯುತಿದೆ ದೇಶದೊಕ್ಕಲು ಬೆನ್ನೆಲುಬು ಬಾನು ಬಿಕ್ಕಲು ಬೀಜ ಬಂಜೆಯಾಯಿತೋ ರೋಗ ಮುತ್ತಿತೋ ಮಳೆ...

ಕತ್ತಲೆಯ ಖಂಡ ಎನಿಸಿಕೊಂಡಿದ್ದ ಆಫ್ರಿಕಾ ಬೆಳಕಿಗೆ ಬಂದದ್ದು ಯುರೋಪಿನ ಸಾಹಸಿಗಳು ಅನ್ವೇಷಣೆ ಮಾಡಿದ ನಂತರವೇ  ಎಂದು ಹೇಳಬಹುದು. ತಾಂಜಾನಿಯಾದ ಮಹಾಕಣಿವೆ ಗ್ರೇಟ್ ರಿಫ್ಟ್‌ವ್ಯಾಲಿಯಲ್ಲಿ ಕಂಡು ಬಂದಿರುವ ಪುರಾತನ ಅವಶೇಷಗಳಿಂದ ಈ ಖಂಡದಲ್ಲೇ ಮಾನವಕುಲ...

2005-06ರ ಅಂತಿಮ ಬಿ.ಎ. ತಂಡದ ಪಾವನ ಕೃಷ್ಣ ಮತ್ತು ಅವನ ಗೆಳೆಯ ರೊಡನೆ ನಡೆಸಿದ ಸಾಹಸದ ಬಗ್ಗೆ ಪದೇ ಪದೇ ನೆನೆಪಿಸುತ್ತಿದ್ದವನು ನಕಲೀಶ್ಯಾಮನೆಂಬ ಕಮಲಾಕ. ಅವನ ಚಾರಣ ಮಿತ್ರರಲ್ಲಿ ಹೆಚ್ಚಿನವರು ಉನ್ನತ ಶಿಕಣ ಅಥವಾ ಉದ್ಯೋಗದ ನೆವದಲ್ಲಿ ಸುಳ್ಯ ಬಿಟ...

ಮೆದುಳು ಮನುಷ್ಯನಿಗೆ ಅತ್ಯಮೂಲ್ಯ ವಸ್ತು ಇದರಿಂದಲೇ ಇಡೀ ದೇಹದ ಸೂತ್ರ ಸಂಹನ ಕ್ರಿಯೆ ನಡೆಯುತ್ತದೆ. ಸೂಕ್ಷ್ಮತೆಯಿಂದಲೂ ಅಷ್ಟೇ ಪ್ರಧಾನವಾದ ಮೆದುಳನ್ನು ನೈಸರ್ಗಿಕವಾಗಿಯೆ ತಲೆಬುರುಡೆ ರಕ್ಷಿಸುತ್ತದೆ. ತಲೆ ಚಿಪ್ಪಿನೊಳಗೆ ಇರುವ ಮಿದುಳಿಗೆ ಏನಾದರೂ ...

ನನ್ನ ಹಿಂದೆಯೇ ಈ ಗೋಪಿಯರು ಸದಾ ತಿರುಗುವುದು ಯಾಕಮ್ಮಾ? ಬೇಡ ಎಂದರೂ ಕೈಹಿಡಿಳೆದು ಗಲ್ಲ ಸವರುವರು ಸರಿಯಾಮ್ಮಾ? ನಾಚಿಕೆ ಇಲ್ಲದೆ ಹೆಣ್ಣುಗಳಮ್ಮಾ ಬಾಚಿ ತಬ್ಬುವರು ಮೈಯನ್ನು, ಕಣ್ಣಿಗೆ ಕಣ್ಣು ಸೇರಿಸಿ ನಗುವರು ಮೆಲ್ಲಗೆ ಕೆನ್ನೆಯ ಹಿಂಡುವರು. ಸಾಕು...

ಮಗ ಪರೀಕ್ಷೆ ತಯಾರಿ ಮುಗಿಸಿ ಶಾಲೆಗೆ ಹೊರಟಿದ್ದ. ದೇವರ ಫೋಟೋ ಮೇಲೆ ಭಾರವಾದ ಕಲ್ಲೊಂದನ್ನು ಮಗ ಇಟ್ಟಿದ್ದನ್ನು ಕಂಡು ತಂದೆ ಕಂಡು ಕೇಳಿದರು ತಂದೆ:    “ಇದೇನಯ್ಯಾ ದೇವರ ಫೋಟೋ ಮೇಲೆ ಭಾರಿ ಕಲ್ಲನ್ನು ಇಟ್ಟಿದ್ದೀಯ? ಅದೇನೂಂತ ಹೇಳು” ಮಗ:  “...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....