ಮುತ್ತಣ್ಣ ಐ ಮಾ

#ಕವಿತೆ

ಗೀತೆಯ ಹುಟ್ಟು

0

ಧರ್ಮಕ್ಷೇತ್ರದ ಭೂಮಿ ಅಸಮ ಬಲ ಇಕ್ಕಡೆಯೊ- ಳದಮಧ್ಯೆ ಗಂಭೀರ-ಶ್ರೀಕೃಷ್ಣನು. ಕುರುಕ್ಷೇತ್ರ ಕುರುಸೇನೆ ಕೌರವನ ರಣಘೋಷ- ಸೇನಾನಿ ಫಲ್ಗುಣನು ಬಾಣಸಹಿತ. ಕುರುಸೇನಾ ಕಡಲಲ್ಲಿ ತೇಲುತಿಹ ಅರ್ಜುನನ ರಥವೊಂದು-ಸಾರಥಿಯು ಶ್ರೀಕೃಷ್ಣನು; ರೋಷ ಸಹನೆಯ ಮಧ್ಯೆ ಬೇಕೊ ಬೇಡೆಂಬುದರ ದ್ವಂದ್ವದಲಿ-ಜೀಕಲಾಡುತಯಿರ್ದುದು! ಭಾರತದ ವಿಧಿನಿಯಮ- ವನ್ನು ನಡೆಸುವ ಭರದಿ ಸೇರಿರುವ ಪ್ರಶಾಂತ ಸೂರ್ಯೋದಯ ಸೂರ್ಯಕಾಂತಿಯ ನಲ್ಮೆ ಪಾರ್ಥಚಿತ್ರದ ಒಲ್ಮೆ ಒಂದಾಗಿ ಸೇರಿದುವು […]

#ಕವಿತೆ

ಓಂ

0

ವೇದಭೂಮಿಯೊಳಿಹ ಕಡುಸಾಹಸದ ನೆಲೆಗೆ ಮಿ ತಿಯಿಲ್ಲ, ಕೊನೆಯಿಲ್ಲ;  ಪುರುಷ ಸ್ತ್ರೀಯರುವೆಂದು ನೀತಿಯಲಿ ಧೈರ್ಯದಲಿ ಛಲದಲ್ಲಿ ಧರ್ಮ ಭೂ ಮಿದುರೊಳೀ ಭೇದವಿಹುದಿಲ್ಲ;  ವಿಶ್ವವಿದನಂ ತ; ಅನಾದಿಕಾಲದಿಂ ಈ ಕ್ಷೇತ್ರ ಶೌರ್ಯ ಸ- ದನವದು; ಕಡು ಹೇಡಿಗಳಾ ಬೀಡು ತಾನಲ್ಲ! ಮೊರೆಯಿಟ್ಟು ಮತಿಗೆಟ್ಟು ಛಲಸಿದ್ಧಿ ದುರ್ಬುದ್ಧಿ ಯಿಂದ ಈ ಜಗರಂಗದೆಡೆ ಪರದೆಯೊಳು ನಿಂತು ಶತವರ್ಷ ದುರ್ನಟನಾ ದೃಶ್ಯವನು ತೋರಿದೊ- […]

#ಕವಿತೆ

ಕೃಷ್ಣಾಕುಮಾರಿಯ ಆತ್ಮಹತ್ಯೆ

0

(ಸೂ: ಜೋದಪುರ ಮತ್ತು ಜಯಪುರ ರಾಜವಂಶಗಳು ಕೃಷ್ಣಾಕುಮಾರಿಯ ಪಾಣಿಗ್ರಹಣ ನಿಮಿತ್ತ ಹೊಡೆದಾಡುವುದು.  ಅವಳ ತಂದೆ, ಭೀಸಿಂಹನ ದೆಸೆಯಿಂದ ಕೃಷ್ಣಾಕುಮಾರಿಯು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುವುದು) ಪೇರಾನೆಗಳೆರಡರ ಕಡು ಕಲಹಕೆ ಮರಿಮಿಗವೆ? ರಣಹದ್ದುಗಳೊಡೆದಾಟಕೆ ಶುಕಶಿಶುವಿನ ಬಲಿಯೆ? ಎಳೆಕುವರಿಯು ಎಳೆ ಹರೆಯವು ತಂದೆ ತಾಯಿಗಳವಳ ನಡುಕೆರೆಯಿಂ ಬರಲಾರದೆ ಬಿಟ್ಟಂತೆಯೆ:- ಅಲ್ಲಾ? ಸುಖಸೋಗಿನಯೆಡೆಗಿಂತೀ ಬಾಧಕವದು ಆಗೆ ಚೆಲು ಬಾನನು ಕಾರ್ಮೋಡವದಾವರಿಸಿದ ತೆರನೆ.  ||೧|| […]

#ಕವಿತೆ

ಅವಳ ಬಾಳು!

0

ಬಯಲಲ್ಲಿ ಬಿಸಿಲಲ್ಲಿ ಆ ಬಾ-ಲೆ! ಹಸಿಹುಲ್ಲು ಕುಯ್ದಾಡುವುದು ಕೇಳ್ದೆ!!  ||ಪಲ್ಲ|| ಹಾಡೊಂದು ತನ್ನಪ್ಪ ಮರೆತಽದೊ, ಅವಳಮ್ಮ ಹರೆಯದಲಗಲಿಽದೊ! ‘ಕಿವಿನಿಗುರಿ ಕಂಕೆರಳೀ ನಾ ಕೇಳಿ, ಹೆಣ್ ಬಾಳ ಕಂಡು ಸೋಜಿಗ ತಾಳಿ!  ||ಬಯ|| ತಾನೊರ್ವ ಕೊಡಗೂಸು ಎಂದಽಳು, ಪುಡಿಕಾಸು ಬಿಸುಡೋದ ತೆಗೆದಽಳು! ಸೆರಗು ಮೂಲೆಯಲಿಟ್ಟು ಬಿಗಿದಾಗ, ಕಣ್ಣೀರ ಬಿಸಿಯೆನ್ನ ತಾಗಿಽತೊ!  ||ಬಯ|| ತನ್ನಣ್ಣ ಚಿಕ್ದಾಗೆ ಸತ್ತೋಽದ, ಮಾಂವಂದಿರಾರಿಲ್ಲ […]

#ಕವಿತೆ

ಕವಿಯ ಬಯಕೆ

0

ಕವಿಯಾಗಿ ಸಲ್ಲಿಸುವ ಮಧುರಗಾನದ ಸೊಂಪು ನುಣ್ದನಿಗಳಿಂಪಿನಿಂ ಬರೆದು ಪೊಗಳುವ ಮಾತು ಸಾಲುಗಳ ಲೀಲೆಯಲಿ ಬರೆದ ಬಡಗಬ್ಬಿಗನ ನಾಲ್ಪಂಕ್ತಿ ಕವನವದು ಏನು ಕಲ್ಪಿತ ವಾಣಿ! ವೇದಗಳು ಶಾಸ್ತ್ರಗಳು ಕವಿಜಿಹ್ವೆ ಉಕ್ತಿಗಳು ಯಾರ ಹಂಗನು ಕಾಯೆ ಹೇಳಿ ನಲಿವುವೊ ಏನೊ! ತಮ್ಮ ಹೃದಯದ ಬಯಕೆ ಪದ್ಯ ಸಾಲ್ಗಳ ಮಾಲೆ. ಕವಿಯು ಮರೆ ಮೋಸವನು ಎತ್ತಿ ತೋರುವ ಇಹದ ಬಿಚ್ಚು […]

#ಕವಿತೆ

ಇಲಿ ಬೇಟೆ

0

ತಿಮ್ಮ ಬೋರ ನಂಜ ಕೂಡಿ ರಾಗಿ ಹಿಟ್ಟು ಕಲಸುವಾಗ ಬಾಯ್ಗೆ ಬಾಯಿ ಮಾತು ಎದ್ದು ಅವರನ್ನವರು ಮರೆತು ಕುಡಿದು ನಂಜ ಕುಪ್ಪಿ ಎತ್ತಿದ- ಬೋರ ಪಾಲು ಕೇಳಿದ! ಹಿಂದಿನಿರುಳು ಬೇಟೆಯಲ್ಲಿ ಕೊಚ್ಚೆ ಹಾರ್ದ ಮೊಲದ ಕಾಲ ಹಿಡಿದು ತಿಮ್ಮ ಅಂತೆ ತಂದು ಮಾಂಸ ತುಂಡು ಮಾಡಿ ಕಡೆಗೆ ಸುಟ್ಟು ಕೂತ ಮಾಂಸವ; ಸೇಂದಿ ಜತೆಗೆ ರಸವಲ! […]

#ಕವಿತೆ

ಹನುಮಂತನ ಜನನ

0

ಶ್ರೀರಾಮ ಶ್ರೀರಾಮ ಶ್ರೀರಾಮ ನಾಮವನು ವಿಂದ್ಯಾದ್ರಿ ಗಿರಿದುದಿಯ ಮೇಲಿನಿಂದುರಿಸಿ; ಸಾನಂದ ಸಂಸ್ಕಾರ ಸಾಯುಜ್ಯವನ್ನಿತ್ತ ಶ್ರೀರಾಮ ಭೃತ್ಯನೀ ಮಂಡಲದಿ ಹಾರಿ. ಹಾರಾರಿ ಲೋಕದಾ ಜನದೊಡೆಯ ರಾಮನಾ ಸೇವೆಯನು ಪೂಜೆಯನು ಧ್ಯಾನವನು ಸದಾ; ಧ್ಯಾನದಾ ಬೀಜವನು ಆ ಸೇತು ಹಿಮಿಗಿರಿಯ ನಡುಭೂಮಿಯೆಡೆ ಬಿತ್ತಿ ಧನ್ಯನವನಾದ! ಸೂಸಿಬಹ ತಣ್ಣೆಲರ, ಸುರುಳಾಯ್ವ ಬಿರುಗಾಳಿ ಮಧ್ಯೆ ಶ್ರೀರಾಮ ರಾಮೆಂಬ ಧ್ವನಿ ಕೇಳಿ; ಪೂರ್ವಾಪರ […]

#ಕವಿತೆ

ಜಾರಿಹೋದ ಉಂಗುರಕೆ

0

ನಮ್ಮ ಪ್ರೇಮದ ದಾರಿ ಕೊರಕಲನು ಸಮವಾಗಿ, ದೂರವನು ಹತ್ತಿರಿರಿಸಿ- ಸಂದ ಭಾಗ್ಯದ ಚೆನ್ನುಗನಸನ್ನು ನೆನೆಸನ್ನು ತೋರಿದುಂಗುರವ ಕಳೆದೆ! ಸಂಜೆ ತಾರೆಯ ನೋಡಿ ಅದರ ಕಾಂತಿಯ ಹಳಿದ ಸರಸಿ ಉಂಗುರವವಳು; ಮೊಲ್ಲೆ ಮಲ್ಲಿಗೆ ವರ್ಣದೀಪ್ತಿಯನು ತಾಕಂಡು ಮುಡಿಯಲೆಂದಳು ನನಗೆ! ರಮಣನಂದೆನಗಿತ್ತ ಅಂದಿನಾ ದಿನದಿಂದ ನನ್ನೊಡನಾಡಿ ಅವಳು, ಪತಿಭವನ ವಾರ್ತೆಯನು ಪತಿಯೊಲುಮೆ ತೆರವನ್ನು ಅಂದವಳವಳೆ ನನಗೆ! ಕ್ಷಣಕ್ಷಣಕು ದಿನದಿನಕು […]

#ಕವಿತೆ

ನಮ್ಮ ಕಾಳಗದ ಕೊನೆ!

0

ಬೆಳಗಾಯ್ತು ಬದುಕಿದೆ ಸೂರ್ಯಕಾಂತಿಯ ಕಂಡೆ ಆಲಸ್ಯ ಹರಿದೋಯ್ತು! ಕಂಬನಿ ಆರಿಽತು, ಮೈನಡುಕ ಓಡಿಽತು! ತನುಸ್ವಾಸ್ಥ್ಯವುಳಿಯಿತು ||ಬೆಳ|| ಜನ ಜನವ ತರಿತರಿದು ಕಿರುಕರುಳ ತಿವಿತಿವಿದು ಕೆಂಗಣ್ಣು ಕಿಡಿಕಾರಿ, ಹಿಂದೂ ಇಸ್ಲಾಂಗಳು ದ್ವಂದ್ವಕಾಳಗ ಹೂಡಿ ಸೌಹಾರ್ದತೆಗೆ ಬೇಡಿ- ಅದುಯೇಸು ಕಾಲದಿಂ ತನುಸವೆದು ದಣಿದಣಿದು ಪಡೆದಽರೊ ಈ ರಾಜ್ಯ; ಪರಜನವ ಪರರಾಜ್ಯಕ್ಕೋಡಿಸಿ ಪಡೆದೊಂದು ಸ್ವಾರಾಜ್ಯಕೀ ವ್ಯಾಜ್ಯ! ||ಬೆಳ|| ಹುಲ್ನೆಲ ಚಿಗುರೆಲ್ಲ […]

#ಕವಿತೆ

ರಾಜಾಸನದ ಕಟ್ಟೆಯ ಮೇಗಲಿ

0

ಮಡಿಕೇರೀ ಮಲೆ ಸೃಷ್ಠಿಯ ಕೋಮಲೆ ಸುತ್ತಲು ಗಿರಿಸಾಲು. ಬಯಲಿನ ತಪ್ಪಲು ನಿರ್ಝರ ದರಿಗಳು ನಿಡು ಮರ ಗಿಡ ಸಾಲು, ಸೃಷ್ಠಿಯ ರಮ್ಯ ಸೌಂದರ್ಯಗಳು ದೃಷ್ಠಿಯೆ ಬೀಳದ ಆಳದೊಳೆಲ್ಲಿಯು ಹಚ್ಚನೆ ಹೊಲಸಾಲು ಸುತ್ತು ದಿಗಂತವ ಅಪ್ಪುತ ನಿಂತಿಹ ನುಣ್ಣನೆ ಬೆಟ್ಟಗಳು, ಸುತ್ತಲು ಹಬ್ಬಿದ ಬನಹಸುರು. ತಪ್ಪಲ ಸಾನುವಲಾಯ್ವವು ದನಗಳು ಅಂಬಾ-ಅನ್ನುತಲಿ- ಇನಿವಣ್ ಮೆಲುತಲಿ ಮಿಗಮರಿ ಗಿರಿಯಿಂ ಪೊದರೊಳು […]