ನಮ್ಮ ಕಾಳಗದ ಕೊನೆ!

ಬೆಳಗಾಯ್ತು ಬದುಕಿದೆ ಸೂರ್ಯಕಾಂತಿಯ ಕಂಡೆ
ಆಲಸ್ಯ ಹರಿದೋಯ್ತು!
ಕಂಬನಿ ಆರಿಽತು, ಮೈನಡುಕ ಓಡಿಽತು!
ತನುಸ್ವಾಸ್ಥ್ಯವುಳಿಯಿತು ||ಬೆಳ||

ಜನ ಜನವ ತರಿತರಿದು ಕಿರುಕರುಳ ತಿವಿತಿವಿದು
ಕೆಂಗಣ್ಣು ಕಿಡಿಕಾರಿ,
ಹಿಂದೂ ಇಸ್ಲಾಂಗಳು ದ್ವಂದ್ವಕಾಳಗ ಹೂಡಿ
ಸೌಹಾರ್ದತೆಗೆ ಬೇಡಿ-
ಅದುಯೇಸು ಕಾಲದಿಂ ತನುಸವೆದು ದಣಿದಣಿದು
ಪಡೆದಽರೊ ಈ ರಾಜ್ಯ;
ಪರಜನವ ಪರರಾಜ್ಯಕ್ಕೋಡಿಸಿ ಪಡೆದೊಂದು
ಸ್ವಾರಾಜ್ಯಕೀ ವ್ಯಾಜ್ಯ! ||ಬೆಳ||

ಹುಲ್ನೆಲ ಚಿಗುರೆಲ್ಲ ಗಿಡಕಾಡು ಕೊನರೆಲ್ಲ
ಹಸುರಾಂತ ಪೈರೆಲ್ಲ,
ನೊಂದು ಬೇಗುದಿಗೊಂಡು ಇಬ್ಬನಿಯೊಡೆ ತಾವು
ಅತ್ತಽವು ಹನಿಸೂಸಿ;
ಭಾರತಿ ಕಣ್ಣೀರೆ-ಸಹಸ್ರಾರು ಹೆಂಗಽಳ
ಅಶ್ರುಮಯಾ ಧಾರೆ,
ಮಾರ್ಜಾಲ ನೀತಿಯೆ!  ಮತಧರ್ಮ ಬ್ರಾಂತಿಯೆ!
ಲೋಭವು ಜಗವಾಳೆ!! ||ಬೆಳ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೭
Next post ಸಣ್ಣ ಸಂಗತಿ

ಸಣ್ಣ ಕತೆ