ಅವಳ ಬಾಳು!

ಬಯಲಲ್ಲಿ ಬಿಸಿಲಲ್ಲಿ ಆ ಬಾ-ಲೆ!
ಹಸಿಹುಲ್ಲು ಕುಯ್ದಾಡುವುದು ಕೇಳ್ದೆ!!  ||ಪಲ್ಲ||

ಹಾಡೊಂದು ತನ್ನಪ್ಪ ಮರೆತಽದೊ,
ಅವಳಮ್ಮ ಹರೆಯದಲಗಲಿಽದೊ!
‘ಕಿವಿನಿಗುರಿ ಕಂಕೆರಳೀ ನಾ ಕೇಳಿ,
ಹೆಣ್ ಬಾಳ ಕಂಡು ಸೋಜಿಗ ತಾಳಿ!  ||ಬಯ||

ತಾನೊರ್ವ ಕೊಡಗೂಸು ಎಂದಽಳು,
ಪುಡಿಕಾಸು ಬಿಸುಡೋದ ತೆಗೆದಽಳು!
ಸೆರಗು ಮೂಲೆಯಲಿಟ್ಟು ಬಿಗಿದಾಗ,
ಕಣ್ಣೀರ ಬಿಸಿಯೆನ್ನ ತಾಗಿಽತೊ!  ||ಬಯ||

ತನ್ನಣ್ಣ ಚಿಕ್ದಾಗೆ ಸತ್ತೋಽದ,
ಮಾಂವಂದಿರಾರಿಲ್ಲ ಒಣಜೀವ!
ಸತಿಯಾಗೆ ಗತಿಯಿಲ್ಲ-ಈ ಹುಲ್ಲು,
ಹುಲ್ನೆಲ ಅವಳೊಂದು ಒಸಿಪಾಲು!  ||ಬಯ||

ಹುಲ್ಲಿರಿವ ಕತ್ತಿಯ ಕೊರಳಿಽಗೆ,
ತಾನಾಗೆ ಮಡುಗ್ವಳು ಸಾಯೋಗೆ;
ತನತನಗೆ ತಾಳುಽವ ಬುದ್ದಿಯೋ
ಕಾಲಮಾನವ ನೂಕೆ ಧೈರ್ಯಽವೊ!  ||ಬಯ||

ಹೂಜೀವ ಸೊಗಸೆಂದು ಹಾಡೋಳು,
ಬೆಂದ ಬಾಳಿನ ತಾಪ ನೆನೆಯೊಽಳು;
ಕಣ್ಣೀರುಮಯಲೋಕ-ಅನ್ನೋಽಳು,
ತನ್ನ ಬಾಳಿನ ಮರುಕ ಮರೆಯೋಳು!  ||ಬಯ||

ಬಯಲ ಬಾನ್ ಸುತ್ತೆಲ್ಲ ಮೌನಽವೊ,
ಈ ಹುಡುಗಿಯ ಹಾಡಿನ ಮೇಳಽವೊ;
ಮಲೆನಾಡ ವಂಶದ ಸವಿಜೀಽವ,
ತಬ್ಬಲಿಯಾದ ಈ ಹೂಬಾಽಳ!  ||ಬಯ||

ಕೆಂಬಕ್ಕಿ ಬಯಲಾಗೆ ಹಾರ್‍ವಾಗ
ಕೊರಳೆತ್ತಿ ಆ ಬಾಲೆ ದಿಟ್ಟಿಽಸಿ;
ತನ್ ತಾಯಿ ಸಾಕಿದ್ದ ಮರಿಕೋಳಿ,
ನೆನೆಯೋಳು ತನ್ನೊಂದು ಮರಿಬೆಽಕ್ಕ!  ||ಬಯ||

ಹಾಡಲ್ಲೆ ಹನಿಯಾಗಿ ಜಿನುಗೋಳು!
ತನ್ನೆಸರು ಭೂರಮೆ-ಅನ್ನೋಳು!
ಗತಿ ತೋರದಲ್ಲಿಯೆ ಒರಗೋಽಳು,
ಏನಿದೀ ತರವಿದೊ ಜನಬಾಽಳು!  ||ಬಯ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೩೨
Next post ಪುಟಗೋಸಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…