ಭಾಳ ಒಳ್ಳೇವ್ರ್‍ ನಮ್ ಮಿಸ್ಸು
ಏನ್ ಹೇಳಿದ್ರೂ ಎಸ್ಸೆಸ್ಸು,
ನಗ್ತಾ ನಗ್ತಾ ಮಾತಾಡ್ತಾರೆ
ಸ್ಕೂಲಿಗೆಲ್ಲ ಫೇಮಸ್ಸು.

ಜಾಣಮರಿ ಅಂತಾರೆ
ಚಾಕ್ಲೇಟಿದ್ರೆ ಕೊಡ್ತಾರೆ,
ಬೆನ್ನು ತಟ್ಟಿ ಕೆನ್ನೆ ಸವರಿ
ಬೆಣ್ಣೆ ಕಂದ ಅಂತಾರೆ!

ಆಟಕ್ ಬಾ ಅಂತಾರೆ
ಆಟದ್ ಸಾಮಾನ್ ಕೊಡ್ತಾರೆ,
ಗೊತ್ತಿಲ್ದಂಗೆ ಆಟದ್ ಜೊತೆ
ಪಾಠಾನೂ ಕಲಿಸ್ತಾರೆ!

ನಮ್ಜೊತೇನೆ ಆಡ್ತಾರೆ
ಕೈಕೈ ಹಿಡಿದು ಹಾಡ್ತಾರೆ,
ಕೋತಿ ಕರಡಿ ಕಥೆ ಹೇಳಿ
ಸಿಕ್ಕಾ ಪಟ್ಟೆ ನಗಿಸ್ತಾರೆ.

ನಮ್ ಸ್ಕೂಲಂಥ ಸ್ಕೂಲಿಲ್ಲ
ನಮ್ ಮಿಸ್ಸಂಥ ಮಿಸ್ಸಿಲ್ಲ
ಅಮ್ಮನ್ ಹಾಗೇ ಅವ್ರೂನೂ
ಬಿಟ್ ಬರಕ್ಕೇ ಮನಸಿಲ್ಲ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)