ಶ್ರೀ ಕೃಷ್ಣನಂತೊಂದು ಮುಗಿಲು

ಶ್ರೀ ಕೃಷ್ಣನಂತೊಂದು ಮುಗಿಲು ರಾಧೆಯಂತಿನ್ನೊಂದು ಮುಗಿಲು ಹೊಳೆದಾರಿ ಕಾಯುವ ಮುಗಿಲು ಜರತಾರಿ ಸೆರಗಿನ ಮುಗಿಲು ಬೆಣ್ಣೆಯ ಗಿರಿಯಂತೆ ಮುಗಿಲು ಅಲ್ಲೆ ಬಳಸುವ ಯಮುನೆಯ ಮುಗಿಲು ಗೋಪಿಯರ ತಂಡದ ಮುಗಿಲು ಬಲ್ಲೆ ಹರಿಗೋಲು ಹುಣ್ಣಿಮೆ ಹೊನಲು...

ಸಣ್ಣ ಸಂಗತಿ

ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ ಹುಣ್ಣಿಮೆಯ ಕಣ್ಣ ತೆರೆದಿದೆ. ತಾರೆ ಬಂದಿವೆ ಬಾನ ಬೀದಿಗೆ. ಅತ್ತ ಹಿಡಿದ ಸೋನೆಯ ಶ್ರುತಿಗೆ ಗಾಳಿಯೇ ಹಾಡುತಿದೆ. ಇತ್ತ ಈ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ...

ಪಂಪನಿಗೆ

ಮೃದು ಪವನ ಪರಿಮಳದ ಅರಿಕೆಗೆಚ್ಚರಗೊಳಲಿ ಸುಮವೀಣೆ! ಆ ವೀಣೆಯಿಂಚರದ ಕನಸಿನಲಿ ತೆರೆತೆರೆ ತೆರೆಯಲೊಂದು ರೂಪಕ ಸರೋವರಂ! ಅಲ್ಲುಲಿವ ರಾಜಹಂಸಗಳ ಪಲ್ಲವಿ ‘ಪಂಪಂ’! ಪಂಪ, ನಿನ್ನಿಂಪಿನಚ್ಚರಿಯ ನುಡಿವೆಳಗಿನಿಂ- ದರಳ್ವ ಮಲ್ಲಿಗೆ ಮಾವು ಕರ್ಬು ಗಿಳಿ ತುಂಬಿಗಳ...

ಉಸಿರಿನ ಹಡಗು

ಕಾಲದ ಕಡಲಲಿ ಉಸಿರಿನ ಹಡಗು ತೇಲುತ ನಡೆದಿದೆ ಹಗಲೂ ಇರುಳೂ; ನೀರಲಿ ತೆರೆದಿವೆ ನಿಲ್ಲದ ದಾರಿ.- ಎಲ್ಲಿಂದೆಲ್ಲಿಗೆ ಇದರ ಸವಾರಿ! ಕಾಮನ ಕೋರುವ ಕಣ್ಣು ಇದಕ್ಕೆ, ಬಯಕೆಯ ಬೀರುವ ಬಾವುಟ-ರೆಕ್ಕೆ, ಕ್ಷುಧಾಗ್ನಿ ಹೊರಳುವ ತುಂಬದ...

ನನ್‌ ಲಚ್ಮಿ

ಹಾಗೇ ನೋಡ್ತಾ ನೋಡ್ತಾ ಹೋದ್ರೆ ನನ್ ಲಚ್ಮೀನೆ ಒಳ್ಳ್ಯೋಳು | ಘಟ್ಟ್ಯಾಗೇನೊ ಮಾತಾಡ್ತಾಳೆ ಆದ್ರೂನೂವೆ ಒಳ್ಳ್ಯೋಳು || ಅವ್ಳೂ ಬಂದು ಸಿದ್ದೇ ಎಡ್ವಿ ಹದ್ನಾರ್ ವರ್ಷ ಹಾರ್ಹೋಯ್ತು | ಸೇತ್ವೇ ಕೆಳ್ಗೆ ಕಲ್ಮಣ್ ಮುಚ್ಚಿ...

ಎಳೆದೂ, ಎಳೆದೂ ಇರುಳು

ಎಳೆದೂ, ಎಳೆದೂ ಇರುಳು, ತೂಗಿ ತಡೆದೂ ಬೆಳಗು, ನನ್ನೀ ಕೈಹಿಡಿದವಳು ಹಾಸಿಗೆ ಹಿಡಿದಿರಲು. ಓಡಿಸಲಳವೇ ಚಿಂತೆ, ಬಿಡುವೇ ಬಳಲಿಕೆಗೆ, ನನ್ನೀ ಜೀವದ ಕಣ್ಣು ಹಾಸಿಗೆ ಹಿಡಿದಿರಲು? ಎಳೆದೂ, ಎಳೆದೂ.... ಭರವಸೆ ಒಂದೂ ಇಲ್ಲ; ಅಂಜಿಕೆ...

ನನ್ ಚಿನ್ನ

"ಗಂಡಯ್ಯ, ಗಂಡಯ್ಯ, ಬಿಡು ನಿನ್ನ ಚಿಂತೇಯ? ಪರದಾಟ ಸಾಕಿನ್ನು, ಮಹರಾಯ! ನಾ ನಿನ್ನ ಕೈಹಿಡಿದ ಹೆಂಡತಿಯೆ ಆಗಿರಲಿ,- ನಿನ್ನ ಮನೆಯಾಳಲ್ಲ ಸ್ವಾಮಿ !" ಎರಡರಲಿ ಒಂದೇನೊ ಆಳಾಗಿ ಇರಬೇಕು, ನನ್ನ ಚಿನ್ನಾ, ಓ ನನ್ನ...

ಈ ಶಿಕ್ಷೆ ಯಾರಿಗೆಂದು?

ಹಾಸಿಗೆಯೆ ಹರಸಿರುವ ದುಂಡುಮಲ್ಲಿಗೆಯರಳೆ ಆ ತುಂಬು ಹೆರಳ ಹೆಣ್ಣೆಲ್ಲಿ? ಬಿಳಿ ದಿಂಬಿನಂಚಿನಲಿ ಗೆರೆ ಬರೆದ ಕಾಡಿಗೆಯೆ, ಆ ದೀಪದುರಿಯ ಕಣ್ಣೆಲ್ಲಿ? ಅತ್ತ ಮಂಚದ ಕೆಳಗೆ ಬಿದ್ದ ಕಾಲುಂಗುರವೆ, ಆ ನವಿಲನಡೆಯ ಹೆಣ್ಣೆಲ್ಲಿ? ಬೆಳ್ಳಿ ಬಟ್ಟಲಿನೊಳಗೆ...

ನಿನ್ನ ಹೆಸರು

ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು. ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು. ಜೊಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು. ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು...

‘ಶ್ರೀ’ ಅವರಿಗೆ

ಪ್ರಸನ್ನ ಶರದಿಂದುಮಂಡಲದಂತೆ ‘ಶ್ರೀ’ ಗುರುವೆ ನೀವೆನ್ನ ಹೃದಯಪೀಠವನೇರಿದಂತೆನಗೆ ನಿಮ್ಮ ಸಂಸ್ಮರಣೆ. ನಿಮ್ಮಿಂದ ಪಂಪನ ಜೊತೆಗೆ ಬಂದರಾ ಪೇಕ್ಸ್‌ಪಿಯರ್ ಸಾಫೊಕ್ಲೀಸ್ ಭಾಸರೆ; ದೈವಹತ ಧನ್ಯಾತ್ಮನಾದನಶ್ವತ್ಥಾಮನ್. ಇತ್ತ ‘ಇಂಗ್ಲಿಷ್ ಗೀತೆ’ ಹೊಸತೊಂದು ಲೋಕಮನ್ ಕನ್ನಡದ ಕಣ್ಗೆ ತೆರೆದಿತ್ತು...
cheap jordans|wholesale air max|wholesale jordans|wholesale jewelry|wholesale jerseys