ಕೈ ಕೈ ಎಲ್ಹೋಯ್ತು?
ಕಸದ ಮೂಲೆಗ್ಹೋಯ್ತು.
ಕಸ ಏನ್ ಕೊಟ್ಟಿತು?
ಹಸಿ ಗೊಬ್ಬರ ಕೊಟ್ಟಿತು.
ಗೊಬ್ಬರ ಏನ್ ಮಾಡ್ದೆ?
ತೋಟದ ಮರಕ್ ಹಾಕ್ದೆ?
ಯಾವ ಮರಕ್ ಹಾಕ್ದೆ?
ತೆಂಗು ಬಾಳೇಗ್ ಹಾಕ್ದೆ.
ತೆಂಗು ಏನ್ ಮಾಡಿತು?
ತೆಂಗಿನ ಕಾಯಿ ನೀಡಿತು.
ಬಾಳೆ ಏನ್ ಕೊಟ್ಟಿತು?
ಬಾಳೆ ಹಣ್ಣು ಕೊಟ್ಟಿತು.
ಕಾಯಿ ಹಣ್ಣು ಏನ್ಮಾಡ್ದೆ?
ದೇವ್ರಿಗೆ ನೈವೇದ್ಯ ಮಾಡ್ದೆ.
ನೈವೇದ್ಯಾನ ಎಲ್ಲಿಟ್ಟೆ?
ದೊಡ್ಡ ತಟ್ಟೇಲಿಟ್ಟೆ.
ಆಮೇಲೇನ್ಮಾಡ್ದೆ?
ಹೊಟ್ಟಯೊಳಗೆ ಬಿಟ್ಟೆ!
*****