‘ಎರಡು ಜಡೆಗಳು ಕೂಡುವುದಿಲ್ಲ’ ಎನ್ನುವವರು ತುಂಗ-ಭದ್ರೆಯರನ್ನು ಕೂಡಲಿಯಲ್ಲಿ ನೋಡಲಿ! *****...
ಮನಸೂ ಸಾರದ ಕನಸೂ ಹಾಯದ ಘನತೆಯ ಗೌರೀಶಂಕರವೇ, ಮಾನವಜೀವನ ಮೇರುವಿನೆತ್ತರ ನಿಲಿಸಿದ ಅಹಿಂಸೆಯಂಕುರವೇ! ಸತ್ಯಕಾಗಿ ವಿಷ ಕುಡಿದ ವಿವೇಕವೆ ಸತಿಸುತರನು ಮಾರಿದ ಛಲವೇ, ಜ್ಞಾನವರಸಿ ವನ ಸಾರಿದ ಬೋಧಿಯೆ ಶಿಲುಬೆಯೇರಿ ಹರಸಿದ ಕರವೇ! ರಾಜಕಾರಣದ ಮರಳುಗಾಡಿನಲ...
ಹಗಲು ಕೈಯಲ್ಲಿರುವ ನಗದು ನಾಣ್ಯ ರಾತ್ರಿ ಕನಸಿನಲ್ಲಿರುವ ಕೂಡಿಟ್ಟ ನಾಣ್ಯ *****...
ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ ಎಲ್ಲೋ ಬುಲ್ಡೋಜರ್ದ ಸದ್ದು ಜಾಲಾಡಿಸಿದ ಅನುಭವ ಬಿಟ್ಟೂಬಿಡದೆ ಏನೇನೋ ಪೈಲಟ್ನ ಮಾತುಗಳು ಗಗನಸಖಿಯ ಒಂದೇ ಸಮನದ ಉಲಿತ “ನಿಮ್ಮ ಖುರ್ಚಿಯ ಪಟ್ಟಿ ಕಟ್ಟ...
ನಾನು ಗೀತೆಯ ಬರೆದು ಹಾಡಿದೆ ಭಾವ ಭಾರದೆದೆಯ ತಣಿಸಲು ಎಲ್ಲ ಮರೆತೊಮ್ಮನದಿ ನಲಿದು ನಿಮ್ಮ ಪ್ರೀತಿಗೆ ನಮಿಸಲು | ಸೋಲು-ಗೆಲುವೋ, ಗೆಲುವೊ ಸೋಲೋ ಉಯ್ಯಾಲೆಯಲ್ಲಿ ಝೀಕುತ, ಕವಿದಮಾವಾಸ್ಯಯ ಇರುಳಿನಲೆಯಲೂ ಪೂರ್ಣ ಚಂದ್ರಮನೆಡೆಗೆ ನೋಡುತ ಬದುಕೆ ಯಕ್ಷ ಪ್ರ...
ಮುಗ್ಧತೆಯಲ್ಲಿ ಕೆಲ ಎಚ್ಚರಿಕೆಗಳ ಇಟ್ಟುಕೊಳ್ಳಬೇಕಾಗುತ್ತದೆ ಇಲ್ಲದಿದ್ದರೆ ಅದು ಬೂದಿ ಮುಚ್ಚಿದ ಕೆಂಡ ಎದೆ ಸುಡುತ್ತದೆ. ಆತ್ಮೀಯತೆಯಲಿ ಕೆಲ ದೂರ ಹೊಂದಬೇಕು ಇಲ್ಲದಿದ್ದರೆ ಅದು ಅಸ್ಥಿತ್ವವನ್ನು ಮಂಜಿನಂತೆ ಕರಗಿ ನೀರಾಗಿ ಹರಿಸುವುದು. ಗೇಟಿನಾಚೆಯ ...
ಆ ನೋಟ! ಮೃದುಮಧುರ ನೋಟವೆಲ್ಲಿಹುದು? ಅಂದೊಮ್ಮೆ ಮಿಂಚಿದುದು ಅಲ್ಲೆ ಅಳಿದಿಹುದು ಹುಚ್ಚು ಕನಸಿನಲಾದರು ಮತ್ತೆ ಹೃದಯವ ಸೇರದು! ಮತ್ತೊಮ್ಮೆ ಪಡೆಯುವೆನೆ? – ಮತ್ತೆ ಬಾರದದು ಮೇಲ್ವಾಯ್ದ ಜ್ವಾಲೆಯೊಲು ಸಾಗಿ ಹೋಗಿಹುದು ! ಕಾಲನದಿ ಸಾಗುತಿರೆ ದಡ...
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ. ಹುಡುಗಿ ಕಂದುಬಣ್ಣದ ವರಾದರೂ ಲಕ್ಷಣವಾಗಿದ್ದಳ...
ಕೃಷಿ ಮಾಡುವ ರೈತನೆ ನೀನು ರಾಷ್ಟ್ರದ ಶ್ರೇಷ್ಠ ವ್ಯಕ್ತಿತ್ವ ನಿನ್ನದು ದೇಶದ ಸಹಸ್ರಾರು ಜನತೆಗೆ ಬದುಕುಳಿಯಲು ಆಹಾರ ಧಾನ್ಯವು ಪೂರೈಸುವ ದೇಶದ ರೈತ ನೀನು ಹಗಲಿರುಳು ಎನ್ನದೇ ಹೊಲದಲ್ಲಿ ದುಡಿದು ಆಹಾರ ಧಾನ್ಯ ಬೆಳೆ ಬೆಳೆಸುವನು ನೀನು ತನ್ನ ಸಹಾಯಕ್ಕ...
ನಾ ನಾನು ಈ ಕಣ್ಣುಗಳ ಕತ್ತಲೆ ಬೆಳಕು ನೆಳಲಾಟದಲ್ಲಿ ಈ ಎದೆಯ ಮತ್ತು ಈ ಲಂಗದ ಸುತ್ತು ಏರಿಳಿತದಲ್ಲಿ ಸೆಳೆತದಲ್ಲಿ ನೃತ್ತದ ವೃತ್ತದ ಆವರ್ತದಲ್ಲಿ ಧ್ವನಿಯ ಮೌನದ ವಿಸ್ಮೃತಿಯ ಶೂನ್ಯದಲ್ಲಿ ಲಯ. *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






