ಮನೆಯ ಅಂಗಳಕೆ
ಬೆಳದಿಂಗಳ ಚಂದ್ರಮುಖಿ ಇವಳು
ಮನೆಯವರಿಗೆಲ್ಲಾ ಆಸರು
ಮನೆಯ ತೋಟಕ್ಕೆ ನೇಸರು
ಸೂರ್ಯಮುಖಿ ಇವಳು
ಕಷ್ಟ ಕಾರ್ಪಣ್ಯ ದುರಿತಗಳಿಗೆಲ್ಲಾ
ಹಲ್ಲು ಉದುರಿಸುವ
ಶೂರ್ಪನಖಿ ಇವಳು
*****