ಏನೇ ನೋವಿರಲಿ- ಯಾವುದೆ
ಭಾಧೆಯ ಕಾವಿರಲಿ,
ನಮ್ಮ ಮನೆಯೊಂದೇ – ಇದರಲಿ
ಪ್ರೀತಿ ಆರದಿರಲಿ.

ಸ್ನೇಹ ಪ್ರೀತಿ ಎಂತೋ-ವಿರಸವು
ಕೂಡ ಸಹಜ ಅಂತೆ,
ಚಿಂತೆ ಇಲ್ಲ ಇರಲಿ-ಎಲ್ಲೂ
ಗೋಡೆ ಬಿರಿಯದಂತೆ

ಬೇಸಿಗೆ ಉರಿಬೇಗೆ-ಜಡಿಮಳೆ
ಸಿಡಿಲು ರೇಗಿ ಕೂಗೆ
ಕದವು ಅಲುಗದಿರಲಿ-ಛಾವಣಿ
ಬಿರಿದು ಸೋರದಿರಲಿ

ಇತಿಹಾಸಕು ಹಿಂದೆ-ನೆರೆಹೊರೆ
ಕಣ್ಣು ಬಿಡುವ ಮುಂದೆ
ಮೂಡಿದ ಅರಿವಿಲ್ಲಿ-ಹಾಡಿದೆ
ಮನುಜರೆಲ್ಲ ಒಂದೇ.
*****