ದೇವ ಕರುಣಿಸು ಜಯವ ನಾಡ ನಾಯಕಗೆ
ಜೀವದಿಂದುಳುಹೆಮಗೆ ನಾಡ ಬಿಡುಗಡೆಗೆ.

ಹಿಂಸೆಯನ್ನಡಗಿಸಲು, ಹಿಂಸಕರನೆದುರಿಸೆ, ಅ-
ಹಿಂಸೆಯೆನ್ನುವ ಹಿರಿಯ ತತ್ವವನು ಸಾರಿ,
ಧ್ವಂಸಕರ ಲೋಕದಲಿ ಶಾಂತಿ ಮೂಡಿಸೆ, ಪರಮ-
ಹಂಸ ಸಂದೇಶವಾಚರಿಸುತಿಹ ಗಾಂಧಿಗೆ.

(೬-೫-೧೯೪೪: ಮಹಾತ್ಮರನ್ನು ಅನಾರೋಗ್ಯದ ಪ್ರಯುಕ್ತ ಸೆರೆಯಿಂದ ಬಿಡುಗಡೆ ಮಾಡಿದಾಗ, ಅವರ ಆರೋಗ್ಯ ಕೋರಿ)
*****