ನಿರ್ವಸ್ತುಭಾವ

ಅಧಃಪತಿತ ನಿಃಸೀಮ ಆತ್ಮದೆಚ್ಚತ್ತ ಶಕ್ತಿ ಒಂದು
ಇಲ್ಲತನದ ಕೊನೆ-ಮೊದಲುಗಳಲಿ ಅರೆಅರವು ಮರವುಗೊಂಡು
ಇದು ಬಿಡಿಸಬರದ ಕಗ್ಗಂಟು ಕೂಟ ಜನ್ಮದ ರಹಸ್ಯವೆಂದು
ಅತಿಸಾವಕಾಶಗತಿಯಲ್ಲಿ ನಡೆದ ಮೃತರೀತಿ ಮನಕೆ ತಂದು

ತಾನು ಬಂದ ಘನ ಅಂಧಗರ್ಭವಾಸವನೆ ಮರಳಿ ನೆನಿಸಿ
ಇಲ್ಲವೆಯ ಬಯಲ ಬಯಸಿತ್ತು ಅದುವೆ ಆಲಯವು ಲಯಕೆ ಎನಿಸಿ.
ಅಜ್ಞಾತದೊಂದು ಹೋಲಿಕೆಯನುಳ್ಳ ಮುಕ್ಕಾದ ಮೂಕಮುಖವು
ಮರವೆ ತುಂಬಿರುವ ಮಾಟಗಳನೆ ಮರಮರಳಿ ಮಾಡುತಿತ್ತು.

ಕುರುಡು ಕಲ್ಪವನೆ ಬರಡುಹಾದಿಯಲಿ ಎತ್ತೊ ದೂಡುತಿತ್ತು
ಪ್ರತಿಪದಾರ್ಥಗಳ ಉಗಮ ಅಡಗಿದೊಲು ತಮದ ಆಳದಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಯ ಬಂಧಿಸಿದ ಬಸವ
Next post ಸುಭದ್ರೆ – ೬

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…