ಯಾರಿಗಾದರೂ ಏನಾದರೂ ಆಗಬಹುದು ಮುಂದಿನ ಕ್ಷಣಗಳಲಿ ಸಾಯಬಹುದು ಸ್ವಲ್ಪದರಲ್ಲಿಯೇ ಮರುಹುಟ್ಟು ಪಡೆಯಲೂಬಹುದು. ಗಳಿಸಬಹುದು ಕಳೆದುಕೊಳ್ಳಲೂಬಹುದು ಹೀಗೇಽ ಇನ್ನೂ ಏನೇನೋ...... ಆದರೂ ಒಳತೋಟಿಗೆ ಕನಸುಗಳೇನೂ ಕಡಿಮೆ ಇಲ್ಲ ಸದ್ದು ಗದ್ದಲಲ್ಲೇ ಹೆಣೆದುಬಿಡುವ ಸೌಧಕ್ಕೂ ಗೆದ್ದಲಿರುವೆಗಳ ಕಾಟ...
ಕೆಲವು ವರ್ಷಗಳ ಹಿಂದೆ ರೇಲ್ವೇಸ್ಟೇಷನಿನ ಕ್ಯಾಂಟೀನಿನಲ್ಲಿ ಚಹಾ ಕುಡಿಯುತ್ತಿರುವಾಗ ಬಟ್ಟಲಿನಲ್ಲಿ ಗಾಂಧಿ ಟೋಪ್ಪಿಗೆ ಕಂಡು ಚಕಿತನಾದೆ. ಆಗ ಆ ಕುರಿತು ಆಲೋಚಿಸಲು ಸಮಯವಿರಲಿಲ್ಲ. ಅವಸರವಸರವಾಗಿ ಮಂದಿಯ ಮಧ್ಯೆ ಓಡೋಡಿ ಗಾಡಿ ಹತ್ತಿದೆ. ನಿಂತವರ ನಡುವೆ...
ಇಂದು ಮುಂಜಾನೆ ಸೂರ್ಯ ಮಂಜಿನ ಕ್ರೀಮು ಹಚ್ಚಿ, ತೆಳುಮೋಡದ ಸ್ಕ್ರೀನು ಮುಸುಕಿ ಹಾಕಿ ಥೇಟ್ ಚಂದ್ರನಂತೆ ಕಾಣುತ್ತಿದ್ದ, ಕೆರೆಯೊಳಗಿನ ಅವನ ಪ್ರತಿಬಿಂಬ ಹುಣ್ಣಿಮೆಯ ಚಂದ್ರನಂತೆಯೇ ಕಾಣುತ್ತಿತ್ತು. ಆದರೆ ಹತ್ತೇ ನಿಮಿಷದಲ್ಲಿ ಹತ್ತಿಕೊಂಡುರಿಯುವ ಅವನ ಮುಖ...
ಗುಡು ಗುಡು ಸದ್ದು ನಡುವೆ ಛಟಾರ್ ಎಂಬ ಸಿಡಿಲಿನ ಸದ್ದಿಗೆ ಜೊತೆಯಾಗಿ ಪಳ್ಳನೆ ಮಿಂಚುವ ಬೆಳಕು ಪಟಪಟ ಹನಿಗಳ ಸಿಡಿತ ಜೋರಾಗಿ ಭರ್ ಅಂತಾ ಮಳೆ ಅರಂಭವಾಯ್ತು. ಕಿಟಕಿಯಿಂದಲೇ ಸಿಡಿಯುತ್ತಿದ್ದ ಮಳೆ ಹನಿಗೆ ಮೊಗವೊಡ್ಡಿ...
ನಾವು ಗೂಡಿನಲ್ಲಿ ಬೆಚ್ಚಗೆ ಕಾವು ಕೂಟ್ಟು ಬೆಳೆಸಿ ಹೂಮಾಂಸ ಅರಳಿ ಹರಳೆಯಾಗಿ, ಹುಲ್ಲೆಸಳಾಗಿ ಇದ್ದಂಥವು ಬರುಬರುತ್ತಾ ರೆಕ್ಕೆ ಪುಚ್ಚಗಳಾಗಿ ಜೊತೆಗೆ ಕೊಕ್ಕು ಉಗುರುಗಳೂ ಆಗಿ ನಂತರ ಮುದಿಯಾದ ನಮ್ಮನ್ನೇ ಕುಕ್ಕಿ ಗಾಯಗೊಳಿಸಿ ಈ ಗೂಡನೂಡೆದು...
ಪ್ರಿಯ ಸಖಿ, ಅವನು ಸತ್ತು ಮಲಗಿ ಗಂಟೆಗಳೇ ಕಳೆದಿವೆ. ನಿಧಾನಕ್ಕೆ ಬರುವವರೆಲ್ಲಾ ಬಂದ ನಂತರ ಶವಸಂಸ್ಕಾರವೂ ನಡೆದಿದೆ. ಇಷ್ಟರವರೆಗೆ ನೋವಿನ ಹಿನ್ನೆಲೆಯಲ್ಲಿ ಮರೆಯಾಗಿದ್ದ ಹಸಿವು ಈಗ ಅವನ ಸಂಬಂಧಿಕರ ದೇಹದಲ್ಲಿ ಬೆಂಕಿಯಂತೆ ಸುಡುತ್ತಿರುವುದು ಗೋಚರಿಸುತ್ತದೆ....