
ಯುಗ ಯುಗಗಳೇಕಾಂತಗೀತ ಹಾಡುತನಂತ ನೋವಿನಲಿ ಕಾತರಿಸಿ ನನ್ನ ಉಷೆ ಬಂದೆ. ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರು ಹಣತೆ ಅರ್ಪಿಸಿದೆ; ನೀನೂಪ್ಪಿ ಒಲವ ಬಾಳಿಸಿದೆ. ನಾನು ಕವಿ, ನೀ ಕಾವ್ಯ ! – ನಾ ಬರೆದ ಗೀತಗಳು ನಿನ್ನ ಒಲವಿನ ನೂರು ಸೊಗಸು ನೆರ...
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ ಕರ್ಫ್ಯೂ ತೆಗೆದವರೆ. ಆದ್ರೂವೆ ಎಲ್ಲೆಡೆ ಸದ್ದಡಗೈತೆ. ಯಾರ ಮನೆಬಾಗಿಲುಗಳ...
ಬೇಸಿಗೆಯ ಬಿಸಿಲಿನಂಥ ಅವಳ ನೆನಪಿನಲ್ಲಿ ಹೃದಯದ ತಂತುಗಳೆಲ್ಲಾ ಸುಟ್ಟೂ ಸುಟ್ಟೂ ಕ್ಷಣ ಕ್ಷಣಕೂ ಸಾಯುತಿವೆ ಆದರೂ ಅವಳು ಚಂದ್ರನ ಶೀತಲದಂತಾದರೆ ಎಂದು ಈಗಲೂ ಕಾಯ್ದಿದ್ದೇನೆ. *****...
ಎಷ್ಟೊ ಹೇಮಂತಗಳಿಂದ ಕಾಯುತ್ತಿದ್ದೇನೆ ಇಲ್ಲಿ ಈ ಹೊಸ್ತಿಲಲ್ಲಿ ನಾನೊಳಗೆ ಬರಬೇಕು ನಿನ್ನೊಳಗೆ ಸೆಳೆ ಎಳೆ ಎಳೆಯಾಗಿ ಸೆಳೆ ಬೆಂಕಿಯ ಸೆಳೆಯಾಗಿ ಸುಳಿಯಾಗಿ ಸೊನ್ನೆಯ ಮಾಡಿ ನುಂಗು ನನ್ನನು ನಿನ್ನ ಹೊಕ್ಕುಳಿನೊಳಕ್ಕೆ ಆ ಹರಹಿನಲ್ಲಿ ಬಯಲಾಗಲೆ? ಬಯಲಾಚೆಯ...
ಅತ್ತೇ ಮಾವರಿಗಂಜಿ ಸುತ್ತೇಳು ನೆರೆಗಂಜಿ ಮತ್ತೇ ಪತಿ, ಭಾವ ಮೈದುನರಿಗಂಜಿ ಅವರಿಗಂಜಿ, ಇವರಿಗಂಜಿ ಅಂಜಿ, ಅಂಜಿ ಅಳುಕುತ್ತಲೇ ಬಾಳುವ ಕರ್ಮ ಬೇಡ ಮಗಳೇ ಎಲ್ಲರಿಗಂಜಿ ಬಾಳಿದವರೆಲ್ಲ ಕಾಲನ ಛಾಯೆಯ ತಿಮಿರವಾದರು ಹೊಸಲಿನಾಚೆಯ ಬೆಳಕ ಕಾಣದಾದರು ಮುಚ್ಚಿಟ್...
ಹಿಂದೆ ಬೇಡರು ಬಿಲ್ಲು ಬಾಣ ಹಿಡಿದು ಪಕ್ಷಿಗಳನ್ನು ಕೊಲ್ಲಲು ಹೋಗುತ್ತಿದ್ದರು ಕಾಡಿಗೆ ಈಗ ಬಾಣ ಬಿಡದೆ ಕೊಲ್ಲುತ್ತಿದೆ, ಹದಿಹರೆಯದ ಹುಡುಗರನ್ನು ಚೆಂದದ ಹೆಣ್ಣುಗಳ ಬಿಲ್ಲು ಹುಬ್ಬಿನ ಕೆಳಗೆ ಮಿಂಚುವ ಕಣ್ಣುಗಳಿಗೆ ಹಚ್ಚಿದ ಕಪ್ಪು ಕಾಡಿಗೆ *****...
ಹೃದಯ ತುಂಬಿ; ದುಂಬಿಯಾಗಿ ರಸಿಕವರ್ಣ ಮೂಡಲಿ; ಒನಪುಗರಿಯು ಚಿಗುರಲಿ ಅಂತರಂಗ ಹರ್ಷ ಕೂಗಿ ಸೃಷ್ಟಿ ಸ್ಪುರಿಸಿ ರಾಗ ಮಾಡಲಿ; ಹೃದಯ ತಾಳ ಹಾಕಲಿ ಪಕ್ಕ ಬೀಸಿ, ಮುಂದೆ ಈಸಿ ಚುಕ್ಕೆಯಡೆಗೆ ಓಡಲಿ, ರವಿಯ ಒಡನೆ ಆಡಲಿ ಮೇಲೆ ಏರಿ, ಹೃದಯ ಸೋಸಿ ಸತ್ಯ ಶಿವನ ಕ...
ಹೊಸ ಸಹಸ್ರಮಾನಕೆ ಪ್ರೀತಿಯ ಸುಸ್ವಾಗತ ಆರತಿ ಎತ್ತಿದೆ ವಿಶ್ವದ ಕಲ್ಯಾಣಕೆ ಭಾರತ ಶ್ರುತಿನುಡಿಸಲಿ ಈ ವರ್ಷ ಶತಮಾನದ ಚಲನೆಗೆ, ಸತ್ಯ ಸಹನೆ ಅಹಿಂಸೆಗಳ ತವರು ಮನೆಯ ಹಾಡಿಗೆ ಆಧ್ಯಾತ್ಮದ ಮೂರ್ತಿ ಹೊತ್ತ ವಿಜ್ಞಾನದ ರಥಕೆ ತಡೆಯಿಲ್ಲದ ನಡೆ ಒದಗಲಿ ಶಿವ ಸ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














