
ನದಿಯ ಮೇಲಿನ ಗೆರೆ ಓಡಿ ಹರಿಯುವ ಪರೆ ಮರಳಿನ ಮೇಲಿನ ಗೆರೆ ಗಾಳಿಗೆ ಆಡುವ ಧರೆ ಕಲ್ಲಿನ ಮೇಲಿನ ಗೆರೆ ಸ್ನೇಹದ ಸಾಕ್ಷಿಯ ಕರೆ *****...
ಆಕಾಶಮಾರ್ಗದಲ್ಲೂ ಇಳಿಜಾರು ಬೆಟ್ಟ ಆಕ್ಸಿಡೆಂಟ್ ಝೋನ್, ಅಂಕುಡೊಂಕು ರಸ್ತೆ ಎಂದಿರಬೇಕಾಗಿತ್ತು ಬ್ರೇಕು ಗೇರುಗಳ ಕಿರಿಕಿರಿ ಶಬ್ದ ನಡುರಾತ್ರಿ ಟಾಯರ್ ಪಂಕ್ಚರ್ ಎಲ್ಲೋ ಕತ್ತಲಲ್ಲಿ ಒಂಟಿಯಾಗಿ ನಿಂತ ಒಗ್ಗಾಲಿ ಬಸ್ಸು ಹೊರಗೆ ಗಾಲಿ ಬದಲಿಸುವ ಡ್ರೈವರ್...
ಜಗವು ತೆರೆದ ಬಾಗಿಲು ಹೃದಯಗಣ್ಣ ತೆರೆದು ನೋಡು ಸೃಷ್ಟಿ ಸತ್ಯ ತಿಳಿಯಲು ||ಪ|| ಬಾನು ಇಳೆಯು ವಾಯುವಗ್ನಿ ಜಲವು ಜೀವ ಕಾರಣ, ಜೀವ ದೇವ ದ್ವೈತಾದ್ವೈತ ಸೃಷ್ಟಿ ಸೊಬಗ ತೋರಣ | ಭೂಮಿ ಬಾನಿನೊಡಲು ಕಡಲು ಹಸಿದ ಬಸಿರನ್ಹೂರಣ, ಬಣ್ಣ-ಬಣ್ಣ-ಬಣ್ಣ ಕಣ್ಣ ಭಾವ...
ರೊಟ್ಟಿ ತಟ್ಟೀ ತಟ್ಟೀ ಅವ್ವನ ಕೈಯ ರೇಖೆಗಳು ಕರಗಿ ಚಿಕ್ಕೀ ಬಳೆಗಳು ಮಾಸಿವೆ ಒಲೆಯ ಖಾವಿಗೆ ಅವಳ ಬೆವರ, ಹನಿಗಳು ಇಂಗಿ ಆವಿಯಾಗಿ ಮೋಡ ಕಟ್ಟಿವೆ ಮನೆಯ ಮಾಡಿನ ಮೇಲೆ ಅವಳೀಗ ನೀಲಿ ಆಕಾಶದ ಜೀವ ಹನಿ. ಬಸವಳಿದ ಹೆರಿಗೆ ಮನೆ ಸಂಭ್ರಮ ಸಾಂಬ್ರಾಣಿ ಹೊಗೆಯ ...
ಗ್ರಹಣ ಹಿಡಿಯಿತೆಂದು ಚಿಂತಿಸುತ- ಡೈಮಂಡ್ ರಿಂಗ್ ನೋಡುವ ಭಾಗ್ಯ ಕಳೆದುಕೊಳ್ಳಬೇಡ! *****...
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ… ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ… ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ ಬೆಂಕಿಯಲ್ಲಿಟ್ಟಂಗೆ. ಬಿಸ್ಲೇನು… ಜನ್ರೂ ...
ಮುಗಿಲ ಯೋಗದ ಗಾನ ಹೂಗಳು ಜ್ಯೋತಿ ಚಿಮ್ಮುತ ಸುರಿಯಲಿ ಆತ್ಮ ಪರ್ವತ ಶಾಂತಿ ಹೊಳೆಗಳು ಕಲ್ಲು ನೆಲದಲಿ ಹರಿಯಲಿ ಮಣ್ಣು ನೆನೆಯಲಿ ಬೆಣ್ಣೆಯಾಗಲಿ ಕಲ್ಲು ಮಲ್ಲಿಗೆಯಾಗಲಿ ಮುಳ್ಳು ಬೇಲಿಗೆ ತಾಯಿ ಚುಂಬಿಸಿ ಭುವನ ಲಿಂಗವ ಮಾಡಲಿ ಮುಗಿಲು ಮುಗಿಲಿಗೆ ಶೂನ್ಯ ...
ಬೆಳಕಿನ ಮುಖಗಳಿವೆ ಮಣ್ಣಿನ ಮುಖಗಳಿವೆ ಇವೆರಡರ ನಡುವೆಯೊಂದು ದಾರಿ ಹುಡುಕುತ್ತೇನೆ: ಮನುಷ್ಯರ ಮುಖಗಳತ್ತ ಕೊಂಡೊಯ್ಯುವ ದಾರಿ ಮುಖವಿಲ್ಲದವನು ನಾನು. ನಿನ್ನ ಮುಖ ನನ್ನದು ಅವನದೂ ನನ್ನದೇ ಅವಳದೂ ಹೌದು. ಕೆಲವೊಮ್ಮೆ ಮಂದಿಯ ಮುಂದೆ ಬಂದಾಗ ನನ್ನ ಸ್ವರ...
ಹೀಗೆ, ಹೀಗೆಯೇ ಇದ್ದೆ ಒಂದಂಗುಲವೂ ಆಚೀಚೆ ಹಾರದೆ ದಾಟದೆ ಯಾರಿಟ್ಟರೋ ಶಾಪ ಬರಿ ಪರಿತಾಪ ಒಳಗಿಹುದೆಲ್ಲವೂ ಮಿಥ್ಯೆ ಸೀತೆಗೂ ಒಮ್ಮೆ ಅಗ್ನಿ ಪರೀಕ್ಷೆ ಗೆದ್ದರೂ ಗೆಲುವಲ್ಲ ರಾಘವನದೇ ಪ್ರತೀಕ್ಷೆ ಯಾವುದೋ ನಿರೀಕ್ಷೆ ಗತಿತಪ್ಪಿದ ವಿವೇಚನೆ ಜಮದಗ್ನಿಯ ರೇ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














