ಓ ಗೆಳತಿ
ಓ ಪ್ರಿಯ ಗೆಳತಿಯೇ
ನಿನ್ನ ಆ ಮಧುರ ನಗುವೆ
ನನಗೆ ತುಂಬಾ ಸವಿ ನೆನಪಾಗುತ್ತದೆ

ಗೆಳತಿ ನಿನ್ನ ನೆನಪು
ನನಗಾದರೇ ಆ ನಿನ್ನ ಸುಂದರ
ಸೌಂದರ್ಯ ಸ್ವಭಾವದ ಭಾವಚಿತ್ರ ಎದುರು
ಥಟನೆ ಬಂದು ನಿಲ್ಲುವಳು ನೀನು

ಓ ಗೆಳತಿ ನಿನ್ನ ನೆನಪಾದರೆ
ನಾನು ಎಲ್ಲವ ಮರೆತು
ನೀನು ನನ್ನನು ಆ ಹಿಂದೆ ಪ್ರೀತಿಸುವುದನ್ನು
ಸ್ಮರಿಸುತ್ತ ನಿನ್ನ ಚಿಂತೆಯಲ್ಲಿಯೇ ನಾನು

ಓ ಗೆಳತಿ ನೀನು ನಗುತ್ತಿರುವ
ಆ ನಗೆಯ ಎಂಥಹ ಸಂಗೀತ
ಹಿಹಿಹಿಹಿಹಿ… ಎಂಥಹ ಸಂಗೀತವದು?

ಅದು ಆಹಾ! ನಿನ್ನ ಮಧುರ ನಗುವೆ
ಎಲ್ಲೋ ಹುಟ್ಟಿದ ನೀನು ಎಲ್ಲೋ ಹುಟ್ಟಿದ ನಾನು
ಇಬ್ಬರ ಸಂಗಮದಿ ಸುಮಧುರ ಪ್ರೀತಿ
ನಿನ್ನ ನೆನಪಾದರೆ ಊಟ ಮಾಡಲಾರೇ
ನಿನ್ನ ಸುಮಧುರ ಪ್ರೀತಿಯೇ ಚಿಂತೆಯೇ ಎನ್ನಗೆ

ಮೊದಲ ರಾತ್ರಿ ಇಬ್ಬರ ಸಂಗಮ
ಆ ದಿನ ನೆನೆದರೆ ದುಃಖ ಎದುರಾಗುವುದು ನನಗೆ
ದುಃಖ ಮರೆಯುವಲ್ಲಿ ಮಗ್ನದ ಯೋಚನೆಯಲ್ಲಿ ನಾನು
ಸಂತೋಷದಿ ಕಾಲ ಕಳೆಯಲು ಪ್ರಯತ್ನಿಸುವೆ ನಾನು
*****

ಧರ್ಮೇಂದ್ರ ಪೂಜಾರಿ ಬಗ್ದೂರಿ
Latest posts by ಧರ್ಮೇಂದ್ರ ಪೂಜಾರಿ ಬಗ್ದೂರಿ (see all)