ಬರೆದವರು: Thomas Hardy / Tess of the d’Urbervilles

ಮಲ್ಲಿಯು ನಡುಮನೆಯಿಂದ ಕಿರುಮನೆ : ಕಿರುಮನೆಯಿಂದ ನಡುಮನೆಗೆ ಅಲೆಯುತ್ತಿದ್ದಾಳೆ. ಕಾತರವಾಗಿ ಏನೋ ನಿರೀಕ್ಷೆಯಲ್ಲಿ ಇರುವಂತಿದೆ. ಗಳಿಗೆ ಗಳಿಗೆಗೂ ಬಾಗಿಲಿಗೆ ಬಂದು ನೋಡು ತ್ತಿದ್ದಾಳೆ. ಕ್ಯಾಲೆಂಡರಿನಲ್ಲಿ ನಾಲ್ಕನೆಯ ತಾರೀಖು : ಗಡಿಯಾರದಲ್ಲಿ ಹತ್ತು ಗಂಟಿ.

ನಡುಮನೆಯ ನಡುವೆ ಇದ್ದ ಟೇಬಲಿನ ಮೇಲೆ ಇದ್ದ ಮದರಾಸ್ ಮೆಯಿಲ್ ತೆಗೆದು ನೋಡುತ್ತಾಳೆ. ಅಲ್ಲಿ ಚೆನ್ನಾಗಿ ಬರೆದಿದೆ : ‘ಆಗಸ್ಟ್ ೧ ಮೆರವಣಿಗೆಯಲ್ಲಿ ನಡೆದ ಗದ್ದಲದ ಸಂಬಂಧವಾಗಿ ಅನೇಕ ವಿದ್ಯಾರ್ಥಿಗಳನ್ನು ಬಂಧಿಸಬೇಕಾಗಿದೆಯೆಂದೂ ಅದಕ್ಕಾಗಿ ಐಡೆಂಟಫಿ- ಕೇಷನ್ ಪೆರೇಡ್ ನಡೆಸಬೇಕೆಂದು ಕಾಲೇಜಿನ ಪ್ರಿನ್ಸ್ಪಾಲರು ಮಿ

ಎನ್‌. ಎಸ್. ಸುಬ್ಬರಾಯರನ್ನು ಪ್ರಾರ್ಥಿಸಲಾಯಿತು. ಆ ಪ್ರಾರ್ಥನೆ ಯನ್ನು ತಂದಿದ್ದ ಅಧಿಕಾರಿಯನ್ನು ಮಿ

ರಾಯರು ಧಿಕ್ಕರಿಸಿದರು. ಯೂನಿವರ್ಸಿಟಿಯ ವಿದ್ಯಾರ್ಥಿಗಳನ್ನು ಯೂನಿವರ್ಸಿಟಿಯ ಅಪ್ಪಣೆ ಇಲ್ಲದೆ ಯಾರೂ ಮುಟ್ಟಕೂಡದು ಎಂದು ಗದರಿಸಿದರು. ವಿದ್ಯಾರ್ಥಿ- ಗಳೆಲ್ಲ ಮಿ

ರಾಯರನ್ನು ದೇವರು ಎನ್ನುವಷ್ಟು ಗೌರವಿಸುತ್ತಿದ್ದಾರೆ. ಈ ಸಂಬಂಧವಾಗಿ ವಿದ್ಯಾರ್ಥಿವೃಂದದ ಆಚಿನ ಕೆಲವರನ್ನು ಬಂಧಿಸು ವಂತಿದೆ.’

ಪತ್ರಿಕೆಯು ಮೊಗುಂ ಆಗಿ ಹೇಳಿರುವುದನ್ನು ಮೈಸೂರು ಸ್ಪಷ್ಟ ವಾಗಿ ಹೇಳುತ್ತಿದೆ. ವಿದ್ಯಾರ್ಥಿವೃಂದದ ಆಚಿನ ಕೆಲವರು ಎನ್ನುವುದು ನರಸಿಂಹಯ್ಯನನ್ನು. ವಿದ್ಯಾರ್ಥಿಗಳ ಶಾಂತಿಯ ಮೆರವಣಿಗೆಯನ್ನು ಮುರಿದ ಅಧಿಕಾರಿಗಳನ್ನು ಸುಬ್ಬರಾಯನಕೆರೆಯ ಮೈದಾನದಲ್ಲಿ ಧಿಕ್ಕರಿಸಿ ಮಾತನಾಡಿದ ನರಸಿಂಹಯ್ಯನೇ ಆ ಕೆಲವರು. ಆ ಸುದ್ದಿ ಕೇಳಿ ಮಲ್ಲಿ ಕಂಗಾಲಾದಹಾಗೆ ಆಗಿದ್ದಾಳೆ. ನಾಯಕನಿಗೆ ಮುದ್ದಾಂ ಸುದ್ದಿ ಕಳುಹಿಸಿದ್ದಾಳೆ, ಆತನೂ ಈ ವೇಳೆಗೆ ಬರಬೇಕಾಗಿತ್ತು ಬಂದಿಲ್ಲ.

ಹತ್ತೂ ಕಾಲು ಆಯಿತು. ಇನ್ನೂ ಬಂದಿಲ್ಲ. ತಾನೇ ಟ್ಯಾಕ್ಸಿ ಮಾಡಿಕೊಂಡು ಹೋಗಿದ್ದರೆ ಆಗಿತ್ತಲ್ಲಾ !’ ಎಂದು ಅವಳಿಗೆ ಯೋಚನೆ. ಹತ್ತೂವರೆ ಆಯಿತು. ಆ ವೇಳೆಗೆ ಮದರಾಸು ಮೇಯಲ್ ಮೂರು ಸಲ ನೋಡಿದ್ದಳು. ಆಳನ್ನು ಕರೆದು “ಹೋಗು, ಅಯ್ಯನವರನ್ನು ಕರೆದುಕೊಂಡು ಬಾ” ಎಂದು ಕಳುಹಿಸಿದಳು.

ಮಲ್ಲಣ್ಣ ಯಾತ್ರೆ ಹೊರಟು ಹೋದ ಮೇಲೆ ಆನಂದಮ್ಮ ಶಂಭುರಾಮ್ಯುಯನವರು ಅವರ ಮನೆಯಲ್ಲಿದ್ದರು. ಆಳು ಬಾಗಿಲು ದಾಟ ಹೋಗುತ್ತಿದ್ದ ಹಾಗೇ “ಬೇಡ. ಅವರನ್ನು ಕರೆಸಬಾರದು. ಎಷ್ಟೇ ಆಗಲಿ ದೊಡ್ಡವರು” ಎಂದು ತಾನೇ ಅಯ್ಯನವರನ್ನು ಹುಡುಕಿ ಕೊಂಡು ಹೋದಳು.

ಆನಂದಮ್ಮ ಅಡುಗೆ ಮಾಡಿ ಮುಚ್ಚಿಟ್ಟು ಧ್ಯಾನದಲ್ಲಿ ಕುಳಿತಿದ್ದಾಳೆ. ಶಂಭುರಾಮಯ್ಯ ಅನುಭವಾಮೃತ ನೋಡುತ್ತ ಸೋಫಾದ ಮೇಲೆ ಕುಳಿತಿದ್ದಾನೆ. ಮಲ್ಲಿಯು “ಅಯ್ಯ !” ಎಂದು ಒಳಗೆ ಬಂದಳು. ಅವನು “ಯಾರು ಮಲ್ಲಮ್ಮನೇ ? ” ಎಂದು ಎದ್ದನು.

“ಮಲ್ಲಮ್ಮ ಅಲ್ಲ! ಮಲ್ಲಿ” ಎಂದು ಒಳಗೆ ಬಂದಳು.

“ಏನವ್ವಾ’ ? ಇದೇಕೆ: ಹೀಗಿದ್ದೀಯೆ ?”

“ಬುದ್ದಿಯೋರಿಗೆ ನೆನ್ನೆಯೇ ಹೇಳಿಕಳುಹಿಸಿದೆ. ಅವರು ಇನ್ನೂ ಬಂದಿಲ್ಲ.”

“ಏನು ಸುದ್ದಿ!”

“ಅದೇನೋ ಮೇಷ್ಟ್ರನ್ನ ಅರೆಸ್ಟ್‌ ಮಾಡುತ್ತಾರಂತೆ. ತಾತಯ್ಯ ನವರು ಊರಲ್ಲಿ ಇಲ್ಲವಂತೆ! ”

“ಅದೇನು ಅಷ್ಟು ಸುಲಭ ಅಲ್ಲ. ನಾನು ಕೇಳಿದ್ದರಲ್ಲಿ ವೈಸ್ ಛಾನ್‌ಸೆಲ್ಲರ್ ಡಾ ಸೀಲರು ಮಹಾರಾಜರು ಬರುವವರೆಗೂ ಏನೂ ಮಾಡಕೂಡದು. ಮೈಸೂರಿನ ವಿದ್ಯಾರ್ಥಿಗಳು ಮಾತ್ರವಲ್ಲ: ಬೆಂಗ- ಳೂರಿನ ವಿದ್ಯಾರ್ಥಿಗಳೂ ರೇಗಿದ್ದಾರೆ. ಈಗ ಅಧಿಕಾರಿಗಳು ದುಡುಕಿ ದರೆ ಇದು ಇನ್ನೊಂದು ಹೊಸ ಆಂದೋಲನಕ್ಕೆ ಕಾರಣವಾಗಬಹುದು ಮೈಸೂರಲ್ಲಿ ಆರಂಭವಾದ ಚಳುವಳಿ ಆಲ್ ಇಂಡಿಯ ವಿದ್ಯಾರ್ಥಿ ಚಳುವಳಿಯ ಮೊದಲನೆಯ ಅಂಕವಾದೀತು, ಎಂದು ದಿವಾನರಿಗೆ ಕಾಗದ ಬರೆದಿದ್ದಾರಂತೆ. ಅಲ್ಲದೆ ತಾತಯ್ಯನನರೂ ಊರಲ್ಲಿ ಇಲ್ಲ: ನಾಯಕರೂ ಇಲ್ಲ. ಇವರೆಲ್ಲ ಬರುವವರೆಗೂ ಏನೂ ಆಗುವುದಿಲ್ಲ. ಆಯಿತು. ನೀನೇ ಅಂತೆ ಈ ಸರ್ವಕ್ಕೂ ಮೂಲ?”

“ನಾನೇನು ಮಾಡಿದೆ? ವಿದ್ಯಾರ್ಥಿಗಳು ಬಂದು ತಿಲಕರಜಯಂತಿ ಮಾಡುತ್ತೇವೆ ಎಂದರು. ಅವರು ಹತ್ತು ರೂಪಾಯಿ ಕೇಳಿದರು. ಬುದ್ಧಿಯನರ ಹೆಸರಿನಲ್ಲಿ ಇಪ್ಪತ್ತು ರೂಪಾಯಿ ಕೊಟ್ಟೆ, ಅಷ್ಟೆ ! ನಾನು ಸರಕಾರದವರನ್ನು ಆ ಹುಡುಗರ ಮೇಲೆ ಬಿದ್ದು ಹೊಡೆದು ಪಟಕಿತ್ತು ಹಾಕಿ ಅಂದನೇ? ಅನರೇನು ಮಾಡುತ್ತಿದ್ದರು ಮಹಾ! ತಿಲಕ್ ಮಹರಾಜ್ ಕೀ ಜೈ! ಗಾಂಧೀ ಮಹಾರಾಜ್ ಕೇ ಜೈ, ಮೈಸೂರ್ ಮಹಾರಾಜ್ ಬಹದ್ದೂರ್ ಕೀ ಜೈ’ ಎಂದು ಕೂಗಿಕೊಂಡು ಸಂಜೆಯವರೆಗೂ ತಿರುಗಿ ಮನೆಗೆ ಹೋಗುತ್ತಿದ್ದರು. ಕೋತಿಯ ಹುಣ್ಣು ಬ್ರಹ್ಮರಾಕ್ಷಸ ಮಾಡಿ ಎಲ್ಲರ ಮನಸ್ಸನ್ನೂ ಕಳವಳಪಡಿಸುವುದಕ್ಕೆ ಕಾರಣರಾದ ಅಧಿಕಾರಿಗಳನ್ನು ಡಿಸ್ಮಿಸ್ ಮಾಡುತ್ತಿದ್ದೆ.”

ಹೊರಗೆ ಕಾರಿನ ಸದ್ದಾಯಿತು… ಮಲ್ಲಿಯು ಓಡಿಬಂದಳು. ಆಳು ಇಳಿದು ಬಂದು ಬಾಗಿಲು ತೆಗೆಯುವುದರೊಳಗಾಗಿ ತಾನೂ ಅಲ್ಲಿಗೆ ಬಂದು ನಿಂತಳು. ನಾಯಕನು ಇಳಿಯುತ್ತಿದ್ದ ಹಾಗೆಯೇ ಮಲ್ಲಿಯು ಮುಂದೆ ಬಂದು “ಬುದ್ಧಿ, ಮೇಸ್ಟ್ರನ್ನು ಅರೆಸ್ಟ್ ಮಾಡುವರಂತೆ! ” ಎಂದಳು.

ನಾಯಕನು ಮೆಟ್ಟಿಲನ್ನು ಹೆತ್ತುತ್ತಿದ್ದವನು ಹಾಗೆಯೇ ನಿಂತು ಕೇಳಿದನು: “ಏನು?”

“ಹೌದು ಬುದ್ದಿ, ಮೊದಲನೆಯತಾರೀಖು ಇಲ್ಲಿ ಗಲಾಟೆ ಆಯಿತು. ವಿದ್ಯಾರ್ಥಿಗಳದ್ದು ತಪ್ಪಿಲ್ಲ. ಅಂಥಾದ್ದರಲ್ಲಿ ತಮಗೆ ಅಧಿಕಾರ ಇದೆ ಅಂತ ಎಲ್ಲರನ್ನೂ ಅರೆಸ್ಟ್ ಮಾಡೋದೆ ಬುದ್ದಿ.”

ಮಲ್ಲಿಯ ಕೋಪವನ್ನು ಕಂಡೇ ನಾಯಕನಿಗೆ ಸೋಜಿಗ ವಾಯಿತು. ಅವಳು ಯಾವಾಗಲೂ ಇಷ್ಟು ಕೋಪಮಾಡಿದವಳಲ್ಲ. ಈಚೆಗೆ ಆಲ್ ಇಂಡಿಯಾ ಟೂರ್ ಮಾಡಿಕೊಂಡು ಬಂದಾಗಿನಿಂದ ಅವಳಿಗೆ ರಾಷ್ಟ್ರೀಯ ಭಾವನೆ ಹೆಚ್ಚುತ್ತಿದೆ. ಅಧಿಕಾರಿಗಳ ಮೇಲೆ, ಅದರಲ್ಲೂ ಸರಕಾರದ ಅಧಿಕಾರಿಗಳ ಮೇಲೆ ಅವಳಿಗೆ ಕೋಪ. ಅವ ರೆಲ್ಲ ಬ್ರಿಟಿಷ್ ಸರಕಾರಕ್ಕೆ ತಮ್ಮನ್ನು ಮಾರಿಕೊಂಡವರು. ಸ್ವಜನ ಅಭಿಮಾನವಿಲ್ಲದ ಮೃಗಗಳು ಎಂಬ ಭಾವನೆ ಬೆಳೆಯುತ್ತಿದೆ.

ನಾಯಕನು ಸಮಾಧಾನವಾಗಿ “ಆಗಲಿ, ಬನ್ನಿ. ಹಾಗಾಗದಂತೆ ಮಾಡೋವ. ಬೇಕಾದರೆ ದಿವಾನರು, ಮಹಾರಾಜರವರೆಗೂ ಹೋಗೋದಲ್ವಾ?” ಎಂದು ಅವಳನ್ನು ಒಳಕ್ಕೆ ಕರೆದುಕೊಂಡು ಹೋದನು.

ಮರುದಿನ ಸುಮಾರು ಎಂಟು ಗಂಟೆಯಿರಬಹುದು. ದಿವಾನರು ಯಾವುದೋ ಪತ್ರಗಳನ್ನು ನೋಡುತ್ತಾ ಕುಳಿತಿದ್ದಾರೆ. ನಾಯಕನು ಬಂದಿರುವುದು ಅವರಿಗೆ ತಿಳಿಯಿತು. ಕೂಡಲೆ ಕರೆಸಿಕೊಂಡರು. “ಏನು ರಾವ್ ಬಹದ್ದೂರರ ಸವಾರಿ ಇಲ್ಲಿಯವರೆಗೆ ಬಂದುದು?” “ತಮಗೊಂದು ಅರಿಕೆಮಾಡಲು ಬಂದಿದ್ದೇನೆ.” “ಅಪ್ಪಣೆಯಾಗಲಿ.”

“ಮೈಸೂರಿನ ವಿದ್ಯಾರ್ಥಿಗಳ ಸಮಾಚಾರವಾಗಿ ತಮಗೆ ಏನು ವರದಿ ಬಂದಿದೆ?”

“ಅದೇ! ಈಚೆಗೆ ನಮ್ಮ ಸಂಸ್ಥಾನದಲ್ಲಿ ಬ್ರಾಹ್ಮಣ ಬ್ರಾಹ್ಮ ಣೇತರ ಭಾವನೆ ಹೆಚ್ಚುತ್ತಿದೆ. ಇದರಿಂದ ಅಸಮಾಧಾನಗೊಂಡ ಬ್ರಾಹ್ಮಣರು ಸರಕಾರಕ್ಕೆ ಅವಮಾನ ಮಾಡಬೇಕೆಂದು ಇಷ್ಟೂ ಮಾಡಿದ್ದಾರೆ. ಮಹಾರಾಜಾ ಸರಕಾರದವರು ಇದನ್ನು ಹೀಗೇ ಬಿಟ್ಟರೆ ಇದು ಕಾಡುಕಿಚ್ಚಿನಂತೆ ಹಬ್ಬಬಹುದು.?

“ತಮಗೆ ಬಿಂದಿರುವ ಸುದ್ದಿ ಸುಳ್ಳು. ತಾವು ಊಹಿಸಿರುವುದರಲ್ಲಿ ಅರ್ಧ ನಿಜ.”

“ಹಾಗೆಂದರೆ ?”

“ಹೌದು. ಇದು ಸರಕಾರಕ್ಕೆ ಅವಮಾನ ತರಬೇಕೆಂದು ಮಾಡಿ ದ್ದಾರೆಎನ್ನುವುದು ಅಧಿಕಾರಿಗಳ ಸೃಷ್ಟಣೆ. ಕಾಡುಕಿಚ್ಚಿನಂತೆ ಅಧಿಕಾರಿಗಳ ಮೇಲಿನ ಅಸಮಾಧಾನ ವಿದ್ಯಾರ್ಥಿ ವರ್ಗಕ್ಕೆಲ್ಲಾ ಹಬ್ಬಿರುವುದು ನಿಜ. ತಾವೇನಾದರೂ ಮಾಡಿದರಂತೂ ಅದು ಅನರ್ಥಕಾರಿಯಾಗುವುದು ತಪ್ಪಿದ್ದಲ್ಲ.”

“ಸರಕಾರದ ಅಧಿಕಾರಿಗಳು ಬಳೆ ತೊಟ್ಟಲ್ಲ.”

“ಬುದ್ದಿ, ನಾನು ಸರಕಾರದ ಮಿತ್ರ, ಶ್ರೀಮನ್ಮಹಾರಾಜರ ಭಕ್ತ, ನನ್ನಲ್ಲಿ ಮಾತನಾಡುವಾಗ ತಾವು ಈರೀತಿಯಾಗಿ ಮಾತನಾಡು ವುದಾದರೆ, ನನಗೆ ಇರುವುದು ಎರಡೇ ದಾರಿ. ತಮ್ಮಂತೆಯೇ ನಾನೂ ಬಿಗಿಯಾಗಿ ಮಾತನಾಡುವುದು: ಅಥವಾ ಸುಮ್ಮನಾಗಿ ಹೊರಟು ಹೋಗುವುದು. ಎರಡನೆಯದು ನನಗೆ ಅಭ್ಯಾಸವಿಲ್ಲ. ಹುಲಿ ಭುಜ ತಟ್ಟಿ ಎಬ್ಬಿಸಿ ಹೊಡೆಯುವ ನಾಯಕ, ದಿವಾನರ ಆರ್ಭಟಕ್ಕೆ ಹೆದರಿ ಹೊರಟು ಹೋದ ಎಂದರೆ, ಅವನು ಬದುಕಿರುವ ಬದಲು ನೇಣು ಹಾಕಿಕೊಂಡು ಸಾಯುವುದು ಒಳ್ಳೆಯದು. ಅದರಿಂದ ಒಂದೇ ದಾರಿ ಉಳಿದಿರುವುದು. ಆದರೂ ನಾನು ವಿಹಿತವಾಗಿ ಹೇಳುತ್ತೇನೆ. ತಾವು ದುಡುಕಬೇಡಿ. ತಾತಯ್ಯನವರನ್ನು ಕೇಳಿದಿರಾ ? ”

“ಅವರು ಬ್ರಾಹ್ಮಣರ ಕಡೆ?

” ಬುದ್ಧಿಯವರೆ, ಅವರು ಬ್ರಾಹ್ಮಣರು ನಿಜ. ಆದರೆ ಬ್ರಾಹ್ಮಣರ ಕಡೆಯಲ್ಲ : ಅವರು ಯಾವಾಗಲೂ ಸತ್ಯದ ಕಡೆ. ಅವರನ್ನು ಕೇಳದೆ ಏನೂ ಮಾಡಬೇಡಿ. ವೈಸ್ ಛಾನ್ಸೆಲ್ಲರು, ಪ್ರಿನ್ಸ್ ಪಾಲ್‌ ಸುಬ್ಬರಾಯರು ಅವರನ್ನು ಕೇಳಿದಿರಾ? ನಮ್ಮ ಡಿ. ಸಿ. ಯವ ರನ್ನೇ ಕೇಳಿದಿರಾ ? ಇಕೋ, ನಾನು ಆಣೆಯಿಟ್ಟು ಹೇಳುತ್ತೇನೆ. ನಾನು ಇವರನ್ನೆಲ್ಲಾ ಕೇಳಿದ್ದೇನೆ. ತಮ್ಮ ಡಿ. ಸಿ. ಬೌರಿಂಗ್ ಸಾಹೇಬರು ಹುಡುಗರ ಜೊತೆ ಸೇರಿ ಅವರು ಹಿಡಿದಿದ್ದ ಪಟಗಳಿಗೆ ಒಂದು ಸಲ ಟೋಪಿಯೆತ್ತಿ ಹೊರಟು ಹೋದರು. ಹಾಗೆ ಮಾಡಿ, ಹುಡುಗರ ಮೇಲೆ ಕೈ ಮಾಡಿದರೆ, ಎರಡು ಅನರ್ಥ. ಒಂದು ಅವರ ತಂದೆತಾಯಿಗಳ ಮನಸ್ಸಿಗೆ ನೋವು: ಇನ್ನೊಂದು ಆ ಹುಡುಗರು ತಪ್ಪದೆ ಸರಕಾರದ ವಿರೋಧಿಗಳಾಗುವರು.”

ಹಾಗೆಂದು ನಾವು ಮಾಡುವಕೆಲಸ ಬಿಡುವುದೇ? ”

“ಹಾಗಾದರೆ ಈಗೇನು ಮಾಡಬೇಕು ಎಂದಿದ್ದೀರಿ? ?

“ತಪ್ಪು ಮಾಡಿದವರನ್ನು ಅರೆಸ್ಟ್ ಮಾಡುವುದು.?

“ರಕ್ತಪಾತವಿಲ್ಲದೆ ಅರೆಸ್ಟ್ ಮಾಡಬಲ್ಲಿರಾ? ”

“ಅರೆಸ್ಟ್ ಮಾಡಬೇಕು ಎಂದಾದರೆ ಮಾಡಿಯೇ ಬಿಡುವುದು. ರಕ್ತಪಾತವಾದರೆ ಆಗುತ್ತದೆ ಅಷ್ಟೇ!”

“ಮಹಾಸ್ವಾಮಿ, ನಾಯಕನ ಮಾತು ಮನಸ್ಸಿನಲ್ಲಿರಲಿ. ಪ್ರಜೆಗಳ ಹಿತವನ್ನು ಗಮನಿಸದೆ ತನ್ನ ಪ್ರತಿಷ್ಠೆಯನ್ನು ಮಾತ್ರ ಕುರಿತು ಚಿಂತಿ ಸುವ ಸರಕಾರದ ಆಯಸ್ಸು ಮುಗಿದಂತೆಯೇ ಸರಿ. ಅದರೆ, ನೆನೆಪಿರಲಿ, ಇದು ಶ್ರೀಮನ್ಮಹಾರಾಜರ ಸರಕಾರ. ಈಗ ತಾವು ಯಾರನ್ನು ಅರೆಸ್ಟ್ ಮಾಡಬೇಕೆಂದಿರುವಿರೋ ಅವರೆಲ್ಲ ಶ್ರೀಮನ್ಮಹಾ- ರಾಜರ ಪ್ರಜೆಗಳು. ಅವರಲ್ಲಿ ಎಷ್ಟು ಜನ ದಿವಾನರಾಗುವವರು ಇರುವರೋ ? ಎಚ್ಚರಿಕೆ, ಶ್ರೀಮನ್ಮಹಾರಾಜರು ಬಂದು ಈ ವಿಷಯವ ತಾವು ದುಡುಕಕೂಡದು.”

“ನಾವು ಯಾರು ಎಂದು ತಾವು ಮಾತನಾಡುತ್ತಿದ್ದೀರಿ? ”

” ತಾವು ಈಗ ಸದ್ಯದಲ್ಲಿ ರೆಸಿಡೆಂಟರ ಏಜಂಟಿರಾಗಿದ್ದೀರಿ, ಎಂದು ನನ್ನ ಭಾವನೆ.”

ದಿವಾನರು ಉತ್ಸಾಹದ ಭರದಲ್ಲಿ ಮುಂದೆ ಕತ್ತು ಚಾಚಿಕೊಂಡಿದ್ದ ವರು ಥಟ್ಟನೆ ಬಾಗಿ ಸೋಫಾ ಒರಗಿಕೊಂಡರು. ತಲೆಯಮೇಲೆ ಕೈ ಇಟ್ಟುಕೊಂಡರು. ಕನ್ನಡಕನನ್ನು ತೆಗೆದು ಒರಸಿ ಹಾಕಿಕೊಂಡರು. ಮುಖ, ಕೆನ್ನೆ ಮೀಸೆ ಒರಸಿಕೊಂಡರು. ಏನೋ ಹೇಳಬೇಕೆಂದು ಮೂರುಸಲ ಪ್ರಯತ್ನಪಟ್ಟು ಪಟ್ಟು, ಕೊನೆಗೆ “ಈದಿನ ಮಹಾರಾಜರ ಸವಾರಿ ಮೈಸೂರಿಗೆ ಚಿತ್ತೈಸಿದ. ತಾವು ಹೋಗಿ ಅವರ ಭೇಟಿಮಾಡಿ ಎಲ್ಲಾ ಸುಲಾವಣೆ ಮಾಡಿ. ಮಹಾರಾಜರ ಅಪ್ಪಣೆಯಾಗುವವರೆಗೆ ಏನೂ ಮಾಡದಂತೆ ಅಧಿಕಾರಿಗಳಿಗೆ ಅಪ್ಪಣೆಮಾಡುತ್ತೇವೆ.”

” ಅಸ್ಪಣೆ.”

” ಇವೊತ್ತು ತಾನೇಕೆ ಇಷ್ಟು ರೇಗಿದ್ದೀರಿ?”

” ನಾವು ಹಳ್ಳಿಯ ಜನ ಮಹಾಸ್ವಾಮಿ. ನಾವು ಯಾವಾಗಲೂ ರೇಗಿಯೇಇರುತ್ತೇವೆ ; ನಾವು ಬಂದಾಗ ತಾವು ನಕ್ಕರೆ ತಮ್ಮ ನಗು ನಮ್ಮನ್ನು ನಗಿಸುತ್ತದೆ. ತಾವು ಕೊಂಚ ಬಿಗಿಯಾದಕೆ ನಮ್ಮಂತೆ ಮಾತನಾಡುತ್ತೇವೆ. ನಾವು ಮಿತ್ರರಂತೆ ಎರಡು ಮಾತನಾಡೋಣ. ತಿಲಕರನ್ನು ಇಂಡಿಯವೆಲ್ಲ ಗೌರವಿಸುತ್ತಿತ್ತು. ಅವರ ಪಟಹಿಡಿದು ಕೊಂಡು, ತಿಥಿಯ ದಿವಸ ಹುಡುಗರು “ತಿಲಕ್ ಮಹಾರಾಜಕಿ ಜೈ’ ಎಂದು ತಿರುಗಿದರೆ ಏನಂಥಾ ಅಪರಾಧ? ಸಾಲದೆ, ಈ ಕಾರ್ಯ ಮಾಡ ಬೇಡಿ ಎಂದು ತಾವು ಅಪ್ಪಣೆ ಮಾಡಿಲ್ಲ. ಹೊರಗಿನ ಗಾಳಿ ಸುದ್ದಿ ತಂದು ಎಲ್ಲರ ತಲೆಗೂ ತುಂಬುತ್ತಿದೆ. ಆ ಗಾಳಿಯನ್ನು ತಡೆಯಲು ತಾವು ಮೈಸೂರಿನ ಸುತ್ತ ಗೋಡೆಯನ್ನೂ ಕಟ್ಟಿಲ್ಲ. ನಮ್ಮ ಕಾಲೇಜು ಗಳ ಹುಡುಗರು ಇತರ ಬೊಂಬಾಯಿ, ಮದರಾಸು ಕಾಲೇಜುಗಳ ಹುಡುಗರ ಹಾಗೆ ನಡೆದರೆ ತಪ್ಪೇನು? ”

“ನಿಜ. ತಮ್ಮ ಮಾತು ಒಪ್ಪಬೇಕಾದ್ದೇ

ಆದರೆ, ಈ ಡೆಲ್ಲಿ ಸರಕಾರಕ್ಕೆ ಬಗ್ಗ ಬೇಕಾಗಿದೆಯಲ್ಲ ? ”

ನಾನು ಆಗಲೇ ಅರಿಕೆಮಾಡಿಕೊಂಡಿದ್ದೇನೆ. ಡೆಲ್ಲಿಗೆ ಹೇಳಿ ಮೈಸೂರಲ್ಲಿರುವುದು ಮಹಾರಾಜರ ಸರಕಾರವೇ ಹೊರತು. ಡೆಲ್ಲಿಯ ಸರಕಾರವಲ್ಲ ಎನ್ನಿ. ಅವರು ತಲೆ ತೆಗೆಯಲಾರರು.”

“ಆಗಲಿ, “ನೋಡೋಣ.”

“ಮತ್ತೆ ಹೇಳುತ್ತೇನೆ, ಮಹಾಸ್ವಾಮಿ, ತಾವು ಚಿನ್ನದ ಗಣಿ ಮಾರಿಬಿಡಿ. ಮಹಾರಾಜರ ಪಾದಹಿಡಿದು ಒಪ್ಪಿಸಿಬಿಡುತ್ತೇವೆ; ಆದರೆ ಒಂದು ಜೀವ ಕಳೆಯಬೇಡಿ.”

” ಆಗಲಿ, ನಾಯಕರೆ, ಮಹಾರಾಜರೆ ಅಪ್ಪಣೆಯಾಗುವ ತನಕ ನಾವು ಏನೂ ಮಾಡುವುದಿಲ್ಲ.”

“ಮಹಾರಾಜರು ಯೂನಿನರ್ಸಿಟಿಯ ಛಾನ್ಸೆಲ್ಲರು. ಹುಡು ಗರು ಯೂನಿವರ್ಸಿಟಿಯವರು. ಅವರೆಂದಿಗೂ ತಮ್ಮ ಯೂನಿವರ್ಸಿಟಿಯ ಹುಡುಗರನ್ನು ಬಿಟ್ಟುಕೊಡುವುದಿಲ್ಲ.”

” ಏನೇ ಹೇಳಿ. ಹುಡುಗರದೇ ತಪ್ಪೋ? ಅಧಿಕಾರಿಗಳದೇ ತಪ್ಪೋ? ಅಂತೂ ಇಂಡಿಯ ಎಲ್ಲಾ ಮೈಸೂರು ಕಡೆ ನೋಡುವಂತೆ ಆಯಿತು:”

ಇಲ್ಲ ಮಹಾಸ್ವಾಮಿ ಮೈಸೂರಿಗೆ ಕೀರ್ತಿ ತಂದುದು ನಮ್ಮ ಮಹಾರಾಜರು. ಕನ್ನ೦ಬಾಡಿ, ಭದ್ರಾವತಿ, ಯೂನಿವರ್ಸಿಟಿಗಳನ್ನು ಸ್ಥಾಪಿಸಿ ಮಾಲವೀಯರ ಹಿಂದೂ ಯೂನಿವರ್ಸಿಟಿಗೆ ಮೊದಲನೆಯ ಛಾನ್‌ಸೆಲ್ಲರ್ ಆದಾಗ ಮೈಸೂರಿನ ಕಡೆ ಎಲ್ಲರ ಕಣ್ಣೂ ಬಿತ್ತು. ಚಿನ್ನದ ಗಣಿ, ಆನೆಯಕಾಡು, ಗಂಧದ ಗೂಡು ಮೈಸೂರಿನ ಹೆಸರು ಎಲ್ಲರಿಗೂ ತಿಳಿಸಿತ್ತು. ಅದಿರಲಿ. ಅಪ್ಪಣೆಯಾದರೆ ಬರುತ್ತೇನೆ.”

“ನಮ್ಮ ಮಾತು ತೀವ್ರವಾಗಿತ್ತು. ಮನಸ್ಸಿಗೆ ಕಹಿಯಾಯಿ ತೇನೋ??

“ಇದೆಲ್ಲ ಕಾಫಿಯ ಕಹಿಯ ಹಾಗೆ ಹಿತ, ಪ್ರಿಯ, ಮಹಾ ಸ್ವಾಮಿ. ಎಷ್ಟಾಗಲಿ ನಾನೆಲ್ಲ ತಮ್ಮ ಪ್ರಜೆಗಳು: ತಾವು ನಮ್ಮ ಧಣಿಗಳು. ಧಣಿವರೆಗೆ ದೂರು ಎಂದು ತಮ್ಮ ಬಳಿ ಬಂದುದು.”

“ದೂರು ದೊರೆಗಳವರೆಗೂ ಹೋಗಲಿ. ಆಯಿತು. ನಿಮ್ಮ ರಾಜ್ಯದಲ್ಲಿ ಪಂಚಮರ ಸ್ಕೂಲುಗಳು ಹೇಗಿವೆ?”

” ನಾನೂ ಮೊನ್ನೆತಾನೇ ನೋಡಿಕೊಂಡು ಬಂದೆ. ಚೆನ್ನಾ ಗಿದೆ.”

“ಅವರಿಗೆ ಸ್ಕಾಲರ್‌ಷಿಪ್ ಕೂಡ ಕೊಡುತ್ತೀನಿ, ತಾವೂ ಅವ ರಿಗೆ ಪ್ರೋತ್ಸಾಹ ಕೊಡಿ?

“ಅಪ್ಪಣೆ. ಬುದ್ದಿ”
*****
ಮುಂದುವರೆಯುವುದು