ರಂಬೆ ಚಾರೂಚೀ ರಂಗೋಲೀ ಹೊಯ್ದೇವೆ
ರಂಬೆ ನಿನ ಮಗಲ ಮದವೀಯೇ || ಮದವೀ ಶುದ್ದಿಕೆಲೀ
ರಂಗೋಲಿ ಪತ್ರಕನ ಬರದಿದ್ದೆ || ತಂಗೀ, ಕೇಲೇ || ೧ ||

ತೆಂಗೂ ಲನೈಯ್ಡೂ ಹೆ(ಯೆ)ಡೆ ಕಡುದೇ || ಹೆಡ್ಯಕಡದೀ
ಗುಡುಗಾರಾ ಮನೆಗೇ ಹೋಗೂ ಬೇಕೇ || ಹೋಗೂಬೇಕಂದೇಲೀ ರೋ
ತೂರಾಯದಾ ಕರ್‌ಯೇ ಮಾಡುಬೇಕೋ || ೨ ||

“ಕೆಲರೆ ಕೇಲಾಲೇ ಗುಡುಗಾರರೆ, ನೀವು ಕೇಲೀ
ತೂರಯ್ದ ಲನೈಡ ಕಡ್ಡಿಬೇಕಽ”
ಅಷ್ಟೆಲ್ಲಾ ಮಾತೇ ಕೇಲೀ‌ರೆ ಗುಡುಗಾರರೇ || ೩ ||

ಬೆಂಡಿನ ಕೊಣೀಗೇ ನೆಡದೀರೇ || ನೆಡುದೀರು ಗುಡುಗಾರರೇ,
ಚಣ್ಣಿಂದೇ ಬೆಂಡ ಕೊರ(ರು)ದೀರೇ ಗುಡುಗಾರರೇ
ಕಡ್ಯಲ್ಲೇ ಆದರೂ ಸುರುದೀರೇ ಗುಡುಗಾರುರೇ || ೪ ||

ಚಣ್ಣಿಂದೇ ಬನ್ನಾ ಬಡದೀರೋ
ಹಚರೂ ಕೆಂಪ ಬಣ್ಣಾ ಹಲದೀ ನೀಲ ಬರದಾ
ಮೇನೇ ಚಕ್ಕರದು ಹೂವಾ ಬಿಡುದೇ || ಗುಡುಗಾರುರೇ || ೫ ||

ಮೇನೇ ಚಕ್ಕರದಾ ಲೂವಾ ಬಿಡ್ತೆಲೆತ್ತರೇ
ಚಣ್ಣಿಂದೆ ಗಿಳಿಯೂ ಬರದೀರೇ || ಬಿಡುಬೇರೇ ಗುಡುಗಾರುರೇ
ತುರಾಯು ಚಂದ ಹಲೀಬಣ್ಣಾ || ೬ ||

ಅದುರಾ ಲಲಿಬಣ್ಣ ಬಿಡುಚಲೆ ಕಂಡ
ಗೌಡನ ಕೂಡೆ ಲದುರಾ ಕೊಡುವೋರೇ || ಕೊಡುವೋನೇ ಗುಡುಗಾರ
ತಾಗಿದರ ಹಣವೇಲ್ಲಿಡೂದೀನೆ || ೭ ||

ತಾಗಿದ್ದರ ಹಣವೇ ಕೊಡುವೋನೇ || ಎಲೆಗೌಡ
ಹಿಂ(ಲಂ)ದಕೂ ಮನೆಗೇ ಬರುವೋನೇ || ಎಲೆಗೌಡ
ಬಾಗೀಲಲೆ ಬಂದೇ ನಿಲುವೋನೇ || ೮ ||

ಬಾಗಿಲಲೆ ಬಂದೇ ನಿಲ್ಲೂ ಹೊತ್ತಿನಲ್ಲೀ
ನೀರ ಹಾಕೇ ಕಾಲತೊಲದೀನೇ || ಎಲೆಗೌಡ
ದೇವರ ನೆಡುಗೆ ಹೋಗೇ ಮಡಗೀದ || ಮಡಗೂ ಹೊತ್ತೀ ನಲ್ಲಿ || ೯ ||

ಯೇನಂದೇ ಮಾತ ನುಡುದದೀನೇ?
ಕೇಲಲೆ ಕೇಲಾಲೇ ಯೆಲೆಮಡುದೀ ನೀ ಕೇಲೇ
ಹಲಗಾಯಿ ವಡದ ಹಾಲಲೇ ತಗದೀಡೇ || ಮಡುದೀಕೇಲೇ || ೧೦ ||

ಸುಗ್ಗೀ ಶಟುವತ ದಿನವಾಲೇ || ಮಡುದೀ ಕೇಲೇ
ಬೆಲ್ಲಾಕೆ ಪಾಯಾಸ ಮಾಡೂಬೇಕೇ | ಮಡುದೀ ಕೇಲೇ
ಎಲ್ಲೂ ಜೀರಿಗಿಯೇ ಹೊಡೀ ಗೈದ || ಮಡುದೀ ಕೇಲೇ || ೧೧ ||

ಪಾಯ್ಚಕೂ ಪರಮಲ ಬರಬೇಕೇ | ಮಡುದೀ ಕೇಲೇ
ಲಲ್ಲೀ ಮಾಡಿದ ಪಾಯ್ಚ ಮಾಲುಗಿಯಲ್ ಪರಿಮಾಲಽ || ಮಡುದೀ ಕೇಲೇ
ಮೇಲಿಂ ದ ಉ(ಲು)ಪುರುಗಿಗೇ ಪರಿಮಾಲ || ಪರಿಮಾಲದ ಪಾಯ್ಚ || ೧೨ ||

ಹಚ್ಚರುದೇ ನೀನೇ ಬಡಚೀಡೇ || ಬಡಚೀಡು ಮಡುದೀ ಕೇಲೇ
ವಬ್ಬರು ತಪ್ಪದೇ ಮರೆಬೇಡ || ಮಡದೀ ಕೇಲೇ
ಊರಕೇರ್‍ಯಾಗೇ ಬಡಚೀಡೇ || ೧೩ ||

ಊರಕೇರ್‍ಯಾಗೇ ಚಡುಬೆಟ್ಟ ಮಡುದೀ ಯೆಲೆ ಮಡದಿ
ಮದ್ದುದಾತುರೀಗೇ (ಯೇ) ಚಮನಾಗೇ || ಯೆಲೆ ಮಡದಿ
ಚುಗ್ಗೀ ಕೊನಿವಾಕೇ ಹೊರಟೀದೇ || ೧೪ ||

ಡೊಲಕ ದಮುಟ್ಯೇ ಲೆರ್ಡ ಕೈಯಗು ತಾಲ ಲಿಡುದ
ಬಗ್ಗೇ ಮಾಲುಗೀಯೇ ಹೆರಟೀನೆ || ಹೆರಟರೆ ಗಂಡುಮಕ್ಕಲೇ
ಕಯ್ಯಾಲಿ (ಲೆ) ಬಣ್ಣದ ವಲ್ಲೀ ಹಿಡುದ || ಹಿಡುದಲೆ ಕಂಡೀ || ೧೫ ||

ರಾಜಂಗುಲದಲ್ಲೇ ನೆಡದೀನೇ || ಹೋಗೂ ಹೊತ್ತಿನಲ್ಲೀ
ನೂರೊಂದೂ(ದ) ಜನರೇ ನೆರದೀರೇ || ನೆರುಗೂ ಹೊತ್ತಿ ನಲೇ
ಯೇನಂದೇ ಮಾತ ನುಡುದೀದೇ? || ೧೬ ||

ಚುಗ್ಗೀ ಕಣ್ಣನಲ್ಲೇ ಕುಲ್ಲೂ ಹೊತ್ತಿನಲ್ಲೀ
ಲುಕ್ಕೀನಾ ಕತ್ತೀ ಲಿಡೂಕಂಡ || ಗಂಡುಮಕ್ಕಲೇ
ಬಂಗರದ ಕೋಲ ಲಿಡುದೀರೇ || ೧೭ ||

ಬಂಗರದ ಕೋಲ ಕಯ್ಯಲ್ಲೇ ಲಿಡುಕಂಡೀ
ಚಣ್ಣಿಂದೇ ಲದರ ಕಡದೀರೋ || ಕಡದೀರೆ ಗಂಡುಮಕ್ಕಲೇ
ಬೆತ್ತದ ಚಲುಕೇ ಬೇಗುದೀರೇ || ಗಂಡುಮಕ್ಕಲೇ || ೧೮ ||

ಕೋಟೇಯರು ಕೋಲೂ ಚಿಗುದೀರೇ || ಚಿಗುದೀರೋ ಗಂಡುಮಕ್ಕಲು
ಬನ್ನಾ ದರ ಕುಂಚ ಗೆಯದೀರೇ || ಗಂಡುಮಕ್ಕಲೂ
ಬೆಟ್ಟದನ ನವಲ ಗಿರೀತಂದೆ || ಗಂಡುಮಕ್ಕಲೂ || ೧೯ ||

ಬಣ್ಣದಾ ಕುಂಚ ಗೆಯದೀರೇ || ಗಂಡುಮಕ್ಕಲೂ
ಲನ್ನೈಡ ಚಾಜಾ ನೆಯದೀರ
ಲನ್ನೈಡ ಕುಂಚಾಕೇ ಲನ್ನೈಯ್ಡ ತೂರಾಯ || ೨೦ ||

ಲನ್ನೈಡ ಜನರೇ ನಿಲುವೋರೇ || ನಿಲ್ಲೂ ಹೊತ್ತಿನಲ್ಲಿ
ಮಲ್ಲೂಗಿ ಹೂಂಗ ಬಿಡೀಚೂರೆ |
ಲನ್ನೈಡ ಕುಂಚಾಕೇ ಲನ್ನೈಡ ಮಲ್ಲುಗಿ ಜಲ್ಲಿ || ೨೧ ||

ಲನ್ನೈಡ ಜನರ ತುರುವೀಗೇ || ತುರುವೀಗಿಟ್ಟಲೇಕಂಡೀ ಗಂಡುಮಕ್ಕಲೂ
ರಾಜಂಗಲನಲ್ಲೇ ನಿಲೂತೀ ರೇ | ನಿಲ್ಲೂ ಹೊತ್ತಿನಲ್ಲೀ
ಮುರುದಂಗು ದಮಟೇ ಲಿಡದೀರೇ || ಗಂಡುಮಕ್ಕಲೇ || ೨೨ ||

ಡೋಲೂಕಿ ತಾಲಂಡೂದೀ ರೇ || ಹಿಡಿವಂತಾ ಹೊತ್ತೀನಲ್ಲೀ
ಮುಂಗೈಯಾ ಮುರುದೇ ಲೊಡದೀರೋ || ಹೊಡಿವಂತಾ ಹೊತ್ತೀಗೇ
ಹೊಯ್ಲದ ಮೇಲಿ ಕುಣಿತ ಕೊಣಿದೀರೇ || ೨೩ ||

ಹೊಯ್ಲದ ಮೇನೆ ಕೊನುತ ಕೊನವಂತ ಹೊತ್ತೀ ಗೇ
ಕನಕಾಲ ಮುರುದೇ ಕೊನೀ ವಾರೋ ||
ಕಾಲಗುರುಗೆಜ್ಜೆಲಿಟ್ಟ ಹನ್ನೈಡ ಹೊಯ್ಲ ಹೊಡಿದ || ೨೪ ||

ಲನ್ನೈಡ ಹೊಯಿಲ ಹೊಡ್ದು ಗಂಡ ಮಕ್ಕಲೇ
ಲನ್ನೈಡ ದೇವರಿಗೆ ಲ್ಹಿತುವಾದ || ನಮ್ಮೂರಾ
ಯಾರೂ ಕೊನುದದುರ || ೨೫ ||

ಯಾರೂ ಹೊಡದೀದ ಹೊಯ್ದ ಚುಗ್ಗೀಕುಣಿತ
ಈ ಊರ ಮುಂದೇ ಕೊಣದೀರೇ || ನಮ್ಮೂರ್‌ನ
ಬೂಮೀ ತಗ್ದಿ ಬೂಮಿ ನೆಲ ಚೋಕೇ || ಕಲ್ಕೊಡೂರ || ೨೬ ||

ಚುಗ್ಗೀ ಕೊನ್ದ ಬಾಲ ನೆಲೂನಂಪೇ ಕಲ್ಕೊಡೂರ
ಯಾವೂರ ಚುಗ್ಗೀ ಕೊನುದರಿಯಾ?
ದಿಕ್ಕೂ ದಿಕ್ಕೇಗೂ ಹದಿನೆಂಟ ಚೀಮ್ಯಾಗೂ || ೨೭ ||

ನಮ್ಮೂರ ಚುಗ್ಗೀ ಕೊನುದೀರೇ || ಕೊನುದಾಂಗೆ ಕಲ್ಕೊಡೂರ
ದೇಮಾಟೀ ತಾಲ ಬೂರೂಗ ಹಾಂಗೇ
ಯಾವೂರ ಚುಗ್ಗೀ ಬಂದೀದೆ? || ಮುಂದಾಗಿ ಕುಲುವೋರೇ || ೨೮ ||

ನಮ್ಮೂರ ಚುಗ್ಗಿ ಕೂನುದಾಂಗೇ
ನಮ್ಮೂರ ಚುಗ್ಗಿ ಬಂದರೇ ಮಂದೀ ಬಂದು ನೋಡೂರೂ
ನಮ್ಮೂರ ಚುಗ್ಗಿಯಟ್ಟು ಬೇರಿಯಿಲ್ಲ || ೨೯ ||

ಚಾವಿರಚಂಗೋಲಿಗೇ ಕುಮಟೀಯ ಪೆಟೀಗೇ
ಯಾರೂ ಮಾಡೀದ ತೂರಾಯವ?
ಯಾರೂ ಮಾಡೀರದುರೇ ಇಟ್ಟ ಉಂಚಿಲ್ಲವೋ || ಕುಮಟೀಯ || ೩೦ ||

ಯಾರೂ ಮಾಡೀದ ತೂರಾಯವ? || ತೂರಾಯ ಕುಮೈಪೇಟೇ
ಗುಡುಗಾರ ಮಾಡೀದಾ ಗಿಲಿಬಣ್ಣಾ ||
ಗಾಲೀಗೆ ಹಾರುವದಿಲ್ಲ ನೀರೀಗೆ ಲದ್ದುವದಿಲ್ಲ || ೩೧ ||

ಈ ಬೆಂಡ ಯಾರೂ ಕೊರದೀರೇ? || ಕೊರ್‌ದಿ ಕೊಟ್ಟ ತೂರಾಯ
ಕುಂತೀ ನೋಡಿದರೇ ಲರಗಲಿಗೇ ||
ಯೆಟ್ಟೂ ತುರಾಯ ನೋಡ್ದೇ || ಯೆಟ್ಟೂ ಚುಗ್ಗಿಯ ನೋಡ್ದೇ || ೩೨ ||

ಈ (ಲೀ) ತೂರಾಯದ ಮೇ ನೇ ಮನುಚಾದಲಿ || ಕಣ್ಣಿಗ್ ದಿಟ್ಟೀ ಹತ್ತೇ
ಯಾರೂ ಕೊಣದಿದುರ ಕೊಣತವ? || ಕಲ್ಕೊಡೂರ
ಹುಡುಗಾರ ಕೊಣದ ಕೊಣತವ || ೩೩ ||

ಲಿಲ್ಲೀ ಗಲ್ಲೀಗೆ ಬೆಂಗ್ಳೂರ ಪೇಟೇಗೂ
ಅಲ್ಲೀದೇ ಬಂತೂ ಕರೆಯಲ ಗಂಡಮಕ್ಕಲೇ
ನೀವು ಕಟ್ಟಿದ ಚುಗ್ಗೀ ಮನಚಾಗೇ || ಗಂಡುಮಕ್ಕಲೇ || ೩೪ ||

ನೀವ್ ಹೇಲೀ ದಾಡ ಚರೀಯಾಗೇ
ಲಿಲ್ಲೀದೆಲ್ಲೀಗೇ ಹೆಗ್ಗಡೇ ಪೇಟೇಗೇ
ಲಿಲ್ಲೀದೇ ಫೋನ ಬರತೀದ || ಗಂಡುಮಕ್ಕಲೇ || ೩೫ ||

ನೀವ್ ಹೇಳಿದ ಪದ ಲರಗೀದ ಗಂಡುಮಕ್ಕಲೇ
ಪೇಟೆಲೆ ಕೊಣದರೇ ಪೇಟೆಲಿಜನ ವದಗೀದ
ಪೇಟೇಲಿ ಜನರೇ ವದಗಿದ ಗಂಡುಮಕ್ಕಳೇ || ೩೬ ||

ನೀವ್ ಕೊಣಿದ ಕೊಣಿತ ಗಚ್ಚಾದ | ಗಜ್ಜಿನ ಮೇಲಿರುವಾಗೇ
ಕೆಮಿಕೊಟ್ಟಲದುರ ಕೇಲೂವರೆ
ಲಿಲ್ಲೀದಲ್ಲೀಗೇ ಲದನೆಂಟು ಬೆಮಿಯಾ || ೩೭ ||

ಈ ಊರೇ ಚುಗ್ಗೀ ಹೆರೂದಂದ || ಗಂಡುಮಕ್ಕಲೇ
ನೀವ್ ಹೇಲಿದ ಹಾಡೂ ನುಣೂಪಂದ || ನುಣುವಿನ ಮೇನಿಟಕಂಡಿ
ಮತ್ತೊಂದರ ವಡಿಯ ಕರೇದರ || ೩೮ ||

ಆಚಿಯಲಿ ಕೊನುದರ ಬಿಟ್ಟ ಈಚಿಯಲಿ ಕೊನುದರ ಬಿಟ್ಟ
ಗುಡ್ಡೇ ಮೂರು ಶುತ್ತೇ ಹೊಡದೀರೇ || ಗಂಡುಮಕ್ಕಲೇ
ಕೊನುದಾರೂ ತಾಮೇ ನಿಲುತೀರ || ನಿಲುತಿರ ಗಂಡುಮಕ್ಕಲೇ | ೩೯ ||

ಬೆಲ್ಲದ ಪಾನಕವ ಕುಡೀತೀರೆ | ಗಂಡುಮಕ್ಕಲೇ
ಲಿಂತಿರುಗೇ ತಾಮೂ ಬರುವರೇ
ಲಿಂತಿರುಗೇ ಮನೆಗೇ ಬರುವಂತ ಹೊತ್ತೀಗೇ || ೪೦ ||

ದೊಡ್ಡ ಕಣುನಲ್ಲೇ ನಿಲೂತೀರ || ನಿಲ್ಲೂ ಹೊತ್ತೀನಲ್ಲೇ
ದಮಟೀ ದನಿ ಮೇನೇ ಲೊಡದೀರೇ || ಲೊಡೆವಂತ ಹೊತ್ತೀಗೇ
ಮದುದಾತುರಿಯಾ ನಿದುರೆಲ್ಲೇ || ನಿದುರೇ ಮೇನಿರುವಾಗೇ || ೪೧ ||

ಶುಗ್ಗಿ ಬಂದೆ ನಮಗೆ ನೊಣಪಿಲ್ಲ
ನಾದೀ (ಹಾದೀ) ನೋಡೀ ತಾಯೀ ನಾದೀ ನೋಡುತಿ ಕುಲ್ಲೇ
ಅಡಗೀ ಮಾಡಡುಗೀ ಮಡುಗಿಟ್ಟೇ || ತಾಯವ್ವಿಯೇ || ೪೨ ||

ಮಗದಿರ ಬಂದ ಬರವ ಗುರುತಿಲ್ಲ ತಾಯವ್ವಿಯೆ
ಗಿಂಡ್ಯಲ್ಲೇ ನೀರ ಕೊಡವಲೇ || ತಾಯವ್ವಿಯೆ
ಚುಗ್ಗೀ ಕೊನ ಮೋರೇ ತೂದೀನೇ || ನಿನ್ನ ಮಗನೇ || ೪೩ ||

ಲಾಟಕೆ ಲವನೇ ಕುಲೂವನೇ || ಕುಲ್ಲೂ ಹೊತ್ತಿನಲ್ಲಿ
ಯೆಲಿಯ ಮೇನನ್ನಾ ಬಡಚೀರೇ |
ಇಂದುಂಡ ಲೂಟ ಹೊತ್ತಾರಂದೂಟ, ಚಂಜಬಂದುಡೀದೇ || ೪೪ ||
*****
ಹೇಳಿದವರು: ದಿ. ದೇವಿ ಮಾರು ಗೌಡ, ಕಲ್ಕೋಡು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.