ಮಾನವ ನೀನ್ನ ಬಾಳನ್ನು ನೀನು
ತಿಳಿಯಲಾರದಷ್ಟು ಅಸಮರ್ಥನೆ
ಬಾಳು ಮನೋರಂಜನೆ ವಲ್ಲ ನೀ
ಮನಸ್ಸಿನ ಗುಲಾಮನಾಗಲು ಸಮರ್ಥನೆ

ನಿನ್ನ ಬಾಳಿನ ಕಳಶದಲ್ಲಿ
ಅನೇಕ ಮುತ್ತು ರತ್ನಗಳು
ಅವುಗಳನ್ನು ಪಡೆಯಲು ನೀನೆಂದೂ
ಮಾಡಿಲ್ಲವೆ ಪ್ರಯತ್ನಗಳು

ಬಾಳಿನ ಕ್ಷಣಗಳೆಲ್ಲ ಸಂಪತ್ತಾಗಿ
ನಿನ್ನ ಬಳಕೆಗೆ ಕಾಯುತ್ತಿವೆ
ನೀನು ಸಾರ್ಥಕತೆ ಮಾಡದೆ ಹೋದರೆ
ನಿನಗರಿಯದಂತೆ ಸಾಯುತ್ತಿದೆ

ಯಾವ ಕ್ಷಣವೂ ವ್ಯರ್ಥಬೇಡ
ಅದೆಲ್ಲವಾಗಲಿ ದೇವಶೋಧ
ದೇವನ ಪ್ರಾಪ್ತಿಯೇ ಅಂತಿಮ
ನಿನ್ನದಾಗಲಿ ಪ್ರತಿಶೋಧ

ಉಸಿರಾಟದಲ್ಲಿರಲಿ ದೇವರು
ಮತ್ತೆ ನಿತ್ಯ ಆರಾಧಿಸು
ದರ್ಶನದ ಅಂತಿಮ ಕ್ಷಣಗಳಲ್ಲೂ
ಮಣಿಕ್ಯ ವಿಠಲಾರಾಧಿಸು
*****