ಬೇಟಕಾರ ಬಂದ ಮಾದ, ಹಹ್ಹ! ಏನು ಬೇಟವೋ! ಬೇಡಿ ಸತ್ತು ಸುಣ್ಣವಾದ, ಹಹ್ಹ! ಏನು ಬೇಟವೊ! ಮಾದಿ ಕತ್ತನೊಲೆದುದೇನು! ಅತ್ತ, ಇತ್ತ, ಸಿಡಿದುದೇನು! ಮಾದ, ಪಾಪ, ಮಿಡಿದುದೇನು! ಹಹ್ಹ! ಏನು ಬೇಟವೊ! ಕಯ್ಯ ಮುಗಿದ, ಕಾಲ ಹಿಡಿದ, ಹಹ್ಹ! ಏನು ಬೇಟವೋ! ರೊಯ್ಯನೆದೆಯೆ, ಹಲ್ಲ ಕಡಿದ, ಹಹ್ಹ! ಏನು ಬೇಟವೋ! ಬೆಚ್ಚಗುಸಿರ ಬಿಟ...

ಇಂದ್ರಗಿರಿಯ ನೆತ್ತಿಯಲ್ಲಿ ನಿಂತ ಮಹಾಮಾನವ ನೀಡು ನಮಗೆ ನಮ್ಮೊಳಗನು ಕಂಡುಕೊಳುವ ಧ್ಯಾನವ ಹೌದು ನೀನೇ ಮಹಾಬಲಿ, ಹೆಣ್ಣು ಹೊನ್ನು ಗೆದ್ದೆ ನಿಜದ ಬೆಳಕ ಕಾಣಬಯಸಿ ನಿದ್ದೆಯಿಂದ ಎದ್ದೆ ; ಕಾಳಗದಲಿ ಗೆದ್ದೆ ನಿಜ, ಅದಕಿಂತಲು ಮಿಗಿಲು ಗದ್ದೆ ನೀನು ನಿನ್...

ಮಾಮ ಎಂದರೆ ಸೀದಾಸಾದಾ ಮಾಮ ಬಾನಿನ ಚಂದಮಾಮ! ಮಾವ ಎಂದರೆ ಮಗಳನು ಕೊಟ್ಟ ಗತ್ತೇ ಬೇರೆ ಸೋತು ನಿಂತ ತಾಕತ್ತೇ ಬೇರೆ ಮಾತು ನಿಂತ ಮನಸ್ಸಿನ ಗೊಂದಲದ ವಕಾಲತ್ತೇ ಬೇರೆ *****...

ನಡು ಸಮುದ್ರದ ನೆತ್ತಿಯ ಮೇಲೆ ನಡು ಸೂರ್ಯನ ಉರಿಬಿಸಿಲ ಕೆಳಗೆ ಸುಮ್ಮನೆ ನಿಂತು ಬಿಟ್ಟಂತಿದೆ ಈ ವಿಮಾನ ಕಿಡಕಿಯಾಚೆ ಕೆಳಗೆ ಇಣುಕಿದರೆ ಇಡೀ ಬ್ರಹ್ಮಾಂಡವೇ ಆವರ್ತಿಸಿದಂತೆ ಎಲ್ಲೆಲ್ಲೂ ಕಪ್ಪು ನೀಲಿ ನೀರೇ ನೀರು ಅರಬ್ಬಿ ಸಾಗರದ ದೈತ್ಯ. ಅಲ್ಲಲ್ಲಿ ತೊ...

ಒಮ್ಮೆ ಮನದೊಳಗಿಣುಕಿ ನೋಡು ನಿನ್ನನ್ನು ಕೆದಕಿ | ಹೃದಯವಿಹುದೆಲ್ಲರಲಿ ಮೀಟುತಲಿ ಕ್ಷಣ ಕ್ಷಣದಿ, ಹೃದಯವಂತಿಕೆ ಶೂನ್ಯ ಕಾಲ ಕಾಲಾಂತರದಿ, | ಸಂಚಿತದ ತಿಳಿವಿದ್ದರು ಸಂಕುಚಿತೆ ಬದುಕಿನಲಿ, ಮೌಲ್ಯಗಳು ಅಳಿದಳಿದು ಶೂನ್ಯ ಮನದಲಿ ಕವಿದು | ಭಾವ ತೀವ್ರತೆ...

ಎಲ್ಲಾ ಕನಸುಗಳ ದಾಟಿ ಕಣ್ಣ ಕಾಡಿಗೆ ತೀಡಿದೆ, ಮದರಂಗಿ ಅರಳಿದೆ ಕೈಯಲಿ, ಮಾಯೆ ಎದೆಯೊಳಗೆ ಇಳಿದಿದೆ, ಇಲ್ಲಿ ಅರಳುವ ಹೂಮನ ಎಲ್ಲೆಲ್ಲೂ ಘಮಘಮ. ಅಂತರ ದೃಷ್ಠಿಯ ಅಂತರದಲಿ ಸರಿದಾಗ ಆಳ ನಿರಾಳ ಕಣ್ಣೋಟಗಳು, ಬಿಂಬಿಸಿವೆ ಕಾಮನ ಬಿಲ್ಲಿನ ಬಣ್ಣ ಸಮಸಮ ಅಮಲು...

ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ ಬದಿಯಲ್ಲಿದ್ದ ಬೂದಿರಾಶಿಯ ಪಕ್ಕದಿಂದ ಗರಗಸದ ಹುಡಿಯನ್ನು ಕ...

ತಂಗಾಳಿಯೆಂದು ಕಿಡಕಿ ಬಾಗಿಲು ಹಾಕಿ ಕರ್ಟನ್ ಎಳೆದದ್ದಾಯಿತು – ಆದರೇನು ಬಾಗಿಲಿನ ಕೀಲಿಯ ಕಿಂಡಿಯಿಂದ ಒಳನುಸುಳುವುದೆ? *****...

ಹಾಸಿಗೆಯಿರುವುದು ನಿದ್ದೆಗೆಂದು ಯಾರು ಹೇಳಿದರು? ಅದು ಆನಂದಿಸುವುದಕ್ಕೆ ತಬ್ಬಿ ಹೊರಳಾಡುವುದಕ್ಕೆ ಎಲ್ಲ ಮರೆಯುವುದಕ್ಕೆ, ತೆರೆಯುವುದಕ್ಕೆ ಉದ್ದಕ್ಕು ಮೈಚಾಚಿ ಹಾವಸೆಯಾಗಿ ನಿನ್ನ ಪರೆಯಾಗಿ ನಾ ನೆನೆಯುತ್ತೇನೆ: ನಾನು ಇಲ್ಲೆ ಹುಟ್ಟಿದ್ದು ಸತ್ತದ್ದ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....