ಬೇಟಕಾರ ಬಂದ ಮಾದ, ಹಹ್ಹ! ಏನು ಬೇಟವೋ! ಬೇಡಿ ಸತ್ತು ಸುಣ್ಣವಾದ, ಹಹ್ಹ! ಏನು ಬೇಟವೊ! ಮಾದಿ ಕತ್ತನೊಲೆದುದೇನು! ಅತ್ತ, ಇತ್ತ, ಸಿಡಿದುದೇನು! ಮಾದ, ಪಾಪ, ಮಿಡಿದುದೇನು! ಹಹ್ಹ! ಏನು ಬೇಟವೊ! ಕಯ್ಯ ಮುಗಿದ, ಕಾಲ ಹಿಡಿದ, ಹಹ್ಹ! ಏನು ಬೇಟವೋ! ರೊಯ್ಯನೆದೆಯೆ, ಹಲ್ಲ ಕಡಿದ, ಹಹ್ಹ! ಏನು ಬೇಟವೋ! ಬೆಚ್ಚಗುಸಿರ ಬಿಟ...

ಯಾವ ಹಾಡನು ನಾ ಹಾಡಲಿ, ಇನ್ನು- ಬಾಳಿನ ಉಷೆಯನು ಎಚ್ಚರಿಸಲಿ? ಬಂಗಾರ ಬಯಲಲಿ ಸಿಂಗಾರ ಬೆಳೆಯಲಿ ತಂದು ಇಕ್ಕಿದರೊಂದು ಕಿಡಿ ಬೆಂಕಿ ! ಬೆಳೆಯಲ್ಲಿ ಉರಿ ತಾಗಿ, ಬಯಲೆಲ್ಲ ಹೊಗೆಯಾಗಿ ಉಳಿದುದೆಲ್ಲವು ಇಲ್ಲಿ – ಎದೆ ಬೆಂಕಿ ! ನೋವನರಿಯದ ಬಾಳು ಬಾ...

ಮಂಗ ನಗರ ನೋಡಲೆಂದು ಮರದಿಂದಿಳಿದು ಬಂದ ಪಾಪ! ಆಕಾಶ ಚುಂಬಿ ಆಹ ಏನೆಂಬಿ ಸೌಧಗಳ ಕಂಡ ಸೌಧಗಳ ನಡುವೆ ನಾಗರದಂತೆ ಅಲ್ಲ ಅಜಗರದಂತೆ ಬಿದ್ದ ಟಾರ್ ರೋಡುಗಳ ಕಂಡ ಟಾರ್ ರೋಡುಗಳ ಮೇಲೆ ಏನು ಭಗವಂತನ ಲೀಲೆ ಓಡಾಡುವ ಮೋಟಾರು ಆಮೆಗಳ ಕಂಡ ಆಮೆಗಳ ಗರ್ಭದೊಳಗಿಂದ...

ಗಂಡಂದಿರೈವರು ನಿನಗೆ ಪಾಂಚಲಿ ಅದ್ಹೇಗೆ ನೀ ಪಂಚಪತಿವ್ರತೆಯರಲ್ಲಿ ಒಬ್ಬಳೊ ನಾಕಾಣೆ ಯಾರದೊ ಶೃಂಗಾರವ ಕಂಡ ರೇಣುಕೆ, ಪತಿಯ ಕೋಪಕೆ ಬಲಿಯಾಗಿ ಸುತನಿಂದಲೇ ಶಿರ ಛೇದಿಸಿಕೊಂಡಳು ಇಂದ್ರನ ಮೋಸಕ್ಕೆ ಬಲಿಯಾದ ಅಹಲ್ಯೆ ಕಲ್ಲಾದಳು ಕೈಹಿಡಿದವನಿಂದಲೇ ರಾವಣ ಕದ...

ಎಲ್ಲಿಂದಲಾದರೂ ಪ್ರಾರಂಭಿಸಬಹುದು ಹೊಸ ಅಧ್ಯಾಯಗಳನ್ನು ಅರ್ಥೈಸುವುದು ಹೇಗೆ? ತಳಪಾಯವಿಲ್ಲದೇ ಮನೆ ಕಟ್ಟಿದ ಹಾಗೆ! ಎಲ್ಲಿಟ್ಟು ಎಲ್ಲಿ ನೆಟ್ಟು ಏಣಿ ಹತ್ತಿದರೂ ಅಟ್ಟಗಳು ಸಿಕ್ಕಬಹುದು ದಿಗಂತ ಸಿಕ್ಕುವುದೆಂತು? ನಡೆಯಬಹುದು ಹೀಗೇ… ಉದ್ದಕ್ಕೂ ...

ಎಲ್ಲಿಂದಲೋ ಒಂದು ಹೆಣ್ಣು, ಇನ್ನೆಲ್ಲಿಯದೋ ಒಂದು ಗಂಡು ಜತೆಗೂಡಿ, ಸಂಸಾರದಾಟ ಹೂಡಿ ಆಗುತ್ತದೆ ಒಂದು ಜೋಡಿ ಅವನು ಗಂಡ ಅವಳು ಹೆಂಡತಿ ಭಾವಿಸಿ ನೋಡಿದರೆ ಎಷ್ಟೊಂದು ಸೋಜಿಗದ ಸಂಗತಿ *****...

ನೀರುಣಿಸಿ ಸಲುಹಿದರು ಹುಳುಹತ್ತಿ ಬೆಳೆಯಲಿಲ್ಲಾ ! ತಿಳಿಯಲಿಲ್ಲೆನಗೆ ಮಣ್ಣಲ್ಲಾ ಉಸುಕೆಂದು ಈ ನೆಲಾ! ಹೃದಯ ಬಟ್ಟಲೊಳು ಭಕ್ತಿ ಹಾಲು; ದೇವನೊಲಿಯಲಿಲ್ಲಾ! ಬಟ್ಟಲೇ ಎಂಜಲಾಗಿಹುದು; ಮಾಯೆ ಈ ಹೃದಯವಲಾ! ಚಲುವಾದ ಕಾಯಾಯ್ತು; ತಿನ್ನಲಾಸೆ ಮನಕಾಯ್ತು ಮರವ...

ಎಂಥ ಮಾತುಗಳ ಹೇಳಿದೆ ಗುರುವೇ ನಮಸ್ಕಾರ ನೂರು ಇಂಥ ನೀತಿಗಳ ಹೇಳಬಲ್ಲವನು ಕಬೀರನಲ್ಲದೆ ಯಾರು? ಹಿಂದೂ ಮುಸ್ಲಿಮ ಗಂಧಗಳೆಲ್ಲಾ ಮಣ್ಣಿನ ಶರೀರಕಷ್ಟೇ; ಆತ್ಮಕೆ ಮತದ ಬಂಧನವೆಲ್ಲಿದೆ? ಇರುವುದು ಸತ್ಯದ ನಿಷ್ಠೆ ವೇದ ಖುರಾನು ಗ್ರಂಥಸಾಹಿಬ ದಾರಿಯಿವೆ ಹಲವ...

ಜೋಪಾನ, ಹುಷಾರು, ಮಗ ಬಹಳ ತುಂಟ ಕೈ ಬಿಡಲೇಬೇಡ ಬೀಳ್ಕೊಡಲು ಬಂದ ಎಲ್ಲರ ಮಾತಿಗೂ ಹೂಂ ಗುಡುತ ಗಟ್ಟಿಯಾಗೇ ಮುಂಗೈ ಹಿಡಿದು ನಿಲ್ದಾಣದೊಳಗಡೆ…. ಟಿಕೆಟ್ ಪಾಸ್ಪೋರ್ಟ್ ಬ್ಯಾಗೇಜ್ ಅದೂ ಇದೂ….. ಮೂರು ತಾಸಿನ ಬಿಗಿಹಿಡತ ಬಿಡಿಸಿ ವಿಮಾನದೊಳ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....