ಪ್ರೀತಿ ಇಲ್ಲದ ಮೇಲೆ
ಇಬ್ಬರ ಸಂಗಮವಾದೀತು ಹೇಗೆ?
ತಮ್ಮ ಸಂಸಾರದ ರಥ ಸಾಗೀತು ಹೇಗೆ?
ದಿನಂಪ್ರತಿ ಕಾಲ ಕಳೆಯುತ್ತ
ವಂಶದ ಕುಡಿ ಹೆಚ್ಚೀತು ಹೇಗೆ?

ಪ್ರೀತಿ ಇಲ್ಲದ ಮೇಲೆ
ಭೂಮಿ ಮೇಲೆ ಆಹಾರ ಧಾನ್ಯ ಬೆಳೆದೀತು ಹೇಗೆ?
ಆಕಾಶದಿ ಮೋಡ ಕಟ್ಟಿತು ಹೇಗೆ?
ನೆಲದ ಮೇಲೆ ಮಳೆ ನೀರು ಸುರಿದೀತು ಹೇಗೆ?
ಇಳೆಗೆ ಹಚ್ಚ ಹಸಿರು ಮೂಡೀತು ಹೇಗೆ?

ಪ್ರೀತಿ ಇಲ್ಲದ ಮೇಲೆ
ಮಾತಿಗೆ ಮಾತು ಸೇರಿತು ಹೇಗೆ?
ಅರ್ಥ ಹುಟ್ಟಿತು ಹೇಗೆ?
ಸಂಶಯ ಗಡಿಗಳುದ್ದಕ್ಕೂ ಹಬ್ಬಿದ
ಸಿಡಿಗುಂಡು ಮದ್ದುಗಳ ಕದನ ನಿಂತಿತು ಹೇಗೆ?

ಪ್ರೀತಿ ಇಲ್ಲದ ಮೇಲೆ
ಕವಿಗಳು ಭಾಷೆಗೆ ಸ್ಪಂಧಿಸಿದರು ಹೇಗೆ?
ಸಾಹಿತ್ಯ ಪರಿಷತ್ ಬೆಳೆದೀತು ಹೇಗೆ?
ಜನರ ಮನಸ್ಸು ಬಯಲು ಭೂಮಿಗಾದ
ಹಾಗೇ ರಕ್ಷಿಸುವುದೇ ಭಾಷೆ
ಪ್ರೀತಿ ಇಲ್ಲದ ಮೇಲೆ ನಾನು ಕವಿಯಾಗಿದ್ದು ಹೇಗೆ?
ಕವಿತೆ ಬರೆದಿದ್ದು ಹೇಗೆ?
ಪ್ರೀತಿಯಿಂದಲೇ ಎಲ್ಲವು ಸಾಧ್ಯ
*****

ಧರ್ಮೇಂದ್ರ ಪೂಜಾರಿ ಬಗ್ದೂರಿ
Latest posts by ಧರ್ಮೇಂದ್ರ ಪೂಜಾರಿ ಬಗ್ದೂರಿ (see all)