ಮಲ್ಲಿಗೆಯೆ
ಮುಡಿಯಬಾರದೇಕೆ
ಮುಡಿದರೆ ನಿನ್ನ ಮಡಿವಂತಿಕೆಯೆ ||

ಬಾಲೆಯಾದೆನ್ನ ಅಪ್ಪಿ
ಮುತ್ತಿಟ್ಟೆ ಒಲವು
ತೋರಿದೆ ಯೌವನಕೆ ||

ಮನವ ಸೆಳೆದು
ಮುಡಿಯ ನೇರಿ ನಗಿಸಿ
ಒಲ್ಲೆ ಎಂದು ಹೇಳಲು ನೀನು ||

ನೊಂದು ಬೆಂದ
ಬೈರಾಗಿ ನಾ ಅರಿಯಲಿಲ್ಲ
ಮುಗುದೆ ಜೀವನವನು ||

ಜನುಮಕೊಂದು
ಮದುವೆ ಎಂದು
ನಲಿದು ಮಣಿಸಿದೆ ನೀನು ||

ದೇವನೊಲಿದ ಮನೆ
ಬೆಳಕು ಹರುಷ
ತಂದಿತೆಂದು ನಂಬಿದೆ ||

ವಿಧಿಯಾಟವಾಡಿ
ನೀ ವಿಧವೆ ಎಂದಾಗ
ನಿನ್ನ ಮುಡಿದರೆ ಮಡಿವಂತೆಕೆಯೆ ||

ಅತ್ತಿತ್ತ ಅವರಿವರಾಡಿದ
ಮಾತು ಚುಚ್ಚಿ ಕಾಡಿತು.
ಬರಿದಾಯ್ತು ಮನಸ್ಸು ||
*****