ಯಾವುದೇ ವ್ಯಕ್ತಿಯಲ್ಲಿ ಕ್ಯಾನ್ಸರ್ ಕಾಯಿಲೆ ಬಂದಿದೆ ಎಂದರೆ ಆ ವ್ಯಕ್ತಿಯಲ್ಲಿ ವಂಶವಾಹಿ (Gene) ಕೆಟ್ಟಿದೆ. ಎಂದು ವಿಜ್ಞಾನಿಗಳು ಸಂಶೋಧಕರು ತಿಳಿಯತ್ತಾರೆ. ವಂಶವಾಹಿಯನ್ನು ಹಾಳುಗೆಡುವ ಅಂಶಗಳನ್ನು ಸರಿಪಡಿಸಲು ಔಷಧಿಗಳನ್ನು ಪ್ರಯೋಗಗಳ ಮೂಲಕ, ಶತಪ್ರಯತ್ನ ಮಾಡಿ ಕಂಡು ಹಿಡಿಯಲಾಯಿತು. ಈ ಹೊಸ ಸಂಶೋಧನೆಯನ್ನು ಅಮೇಹಾದ ಪ್ರಸಿದ್ದ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂನ್ಹೆಯ ಅಂಗ ಸಂಸ್ಥೆಯೊದ ಮೈಟ್‌ಹೆಡ್ ಇನಸ್ಬಿಟ್ಟೂಟ್ ಆಫ್ ಬಯೋಮೆಡಿಕಲ್ ರೀಸರ್ಚನ ಡಾ|| ರಾಬರ್ಟ್ ವೇನ್ ಬಗ್೯ ತಂಡದವರು ಕಂಡು ಹಿಡಿದರು.

ಅಮೇರಿಕಾದ ರಾಗ್ವ್ರೀ ಕ್ಯಾನ್ಸರ್ ಸಂಸ್ಥೆಯ ಕರ್ಟ್‌ಹ್ಯಾರಿಶ್ ಅವರು “ಇದು ಒಂದು ಗಮನಾರ್ಹವಾದ ಸಂಶೋಧನೆ. ಪ್ರಯೋಗಾಲಯದಲ್ಲಿ ಹಲವು ರೀತಿಯ ಸಾಧ್ಯತೆಯನ್ನು ನನಸಾಗಿಸುವ ಸಾಧ್ಯವಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಎರಡು ಡಜನ್ನಿಗೂ ಅಧಿಕ ಔಷಧಿಗಳು ವಿವಿಧ ಪ್ರಯೋಗಗಳು ಹಂತದಲ್ಲಿವೆ. ವೇನ್‌ಬರ್ಗನ ಮೊದಲ ಸಂಶೋಧನಾತ್ಮಕ ಔಷಧಿ “ಹೆರ್ಸ್‌ಪ್ಪಿನ್’ ಈಗಾಗಲೇ ಮಹಿಳೆಯರ ಸ್ಥನಗಳ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿದೆ. ಜೀವಕೋಶ ಯಾವಾಗ ಬೆಳೆಯಬೇಕು. ಯಾವಾಗ ಸಾಯಬೇಕು. ಎಂದು ಅದೇಶಿಸುವ ನಕ್ಷೆಯೇ ವಂಶವಾಹಿಯಾಗಿದೆ. ವಂಶವಾಹಿಗೆ ತೊಡಕುಂಟಾದಾಗ ಅನಿಯಮಿತವಾದ ಬೆಳವಣಿಗೆಯನ್ನು ಸಾಮಾನ್ಯವಾಗಿ ನಿಯಂತ್ರಿಸುತ್ತವೆ. ಈ ಕ್ಯಾನ್ಸರ್ ಸಪ್ಪೆಸ್ಸರ್‌ಗಳೇ ಹಾಳಾದಾಗ ಕ್ಯಾನ್ಸರ್ ಉಂಟಾಗುತ್ತದೆ. ಈ ಹೊಸ ಸಂಶೋಧನೆ ಫಲವಾಗಿ ಕ್ಯಾನ್ಸರ ಸಪ್ರೆಸ್ಸರ್ಸ್‌ಗಳು ಹಾಳಾಗದಂತೆ ಮಾಡಬಹುದು.
****