Home / ಲೇಖನ / ಇತರೆ / ಡಾ. ವಿ. ನಾಗರಾಜುರವರು

ಡಾ. ವಿ. ನಾಗರಾಜುರವರು

ಅಂದು- ಶಾಲೆಗೆ ಡಾ. ವಿ.ನಾಗರಾಜುರವರು ಆಗಮಿಸಿದ್ದರು. ಮಕ್ಕಳಿಗೆ ಆರೋಗ್ಯ ಭಾಗ್ಯದ ಬಗೆಗೆ ವಿವರಿಸಿದರು.

ಅವರು ಹೇಳುವುದ ಕೇಳುತ್ತಾ ಕುಳಿತ ನಮಗೆಲ್ಲ ಐದಾರು ದಶಕಗಳ ಕೆಳಗೆ ನಾವೆಲ್ಲ ಕಡ್ಡಾಯವಾಗಿ ನಿತ್ಯ ಹಾಲು-ಮೊಸರು-ಮಜ್ಜಿಗೆ-ಬೆಣ್ಣೆ-ಗಿಣ್ಣು-ತುಪ್ಪ ಉಂಡು ಬೆಳದ ಆ ಸವಿಸವಿ… ದಿನಗಳು ಕಣ್ಣ ಮುಂದೆ ಮೆರವಣಿಗೆ ಹೊರಟವು. ಪ್ರತಿಯೊಬ್ಬರ ಮನೆಮನೆಗಳಲ್ಲಿ ಹತ್ತಾರು ದನಕರು ಕುರಿಮೇಕೆಗಳ ಹಿಂಡು ಹಿಂಡು…

ಡಾ. ವಿ.ನಾಗರಾಜು ಅವರ ಅನುಭವಾಮೃತವನ್ನು ಅಂದು ಅಲ್ಲಿದ್ದವರಿಗೆಲ್ಲ ಉಣಬಡಿಸತೊಡಗಿದರು. ನೀವು ಏನೆಲ್ಲ ಎಷ್ಟೆಲ್ಲ ಸೇವಿಸಿದರೂ ಕೊನೆಗೆ ಮಜ್ಜಿಗೆಯನ್ನು ಕಡ್ಡಾಯವಾಗಿ ಮೂರು ಹೊತ್ತು ಸೇವಿಸುವುದನ್ನು ಮರೆಯಬಾರದೆಂದು ಒತ್ತಿ ಹೇಳಿದರು. ಕಾರಣ- ಮಜ್ಜಿಗೆಯಲ್ಲಿ ಏನೆಲ್ಲ ಪ್ರೋಟೀನ್, ಪೊಟ್ಯಾಶಿಯಂ, ‘ಬಿ’ ಕಾಂಪ್ಲೆಕ್ಸ್ ಇತ್ಯಾದಿ ವಿಟಮಿನ್‌ಗಳ ಗಣಿಯಾಗಿದೆ. ತೂಕ ಇಳಿಸಲು ಮಜ್ಜಿಗೆ ಔಷಧಿಯ ಹಾಗೆ ಕೆಲಸ ಮಾಡುವುದು. ಬಾಯಿ ವಾಸನೆಯನ್ನು, ತೂಕವನ್ನು, ತಡೆಗಟ್ಟುವುದು, ಅಜೀರ್ಣವನ್ನು ನಿವಾರಿಸುವುದು. ಅಲರ್ಜಿಗೆ ರಾಮಬಾಣ, ಕರುಳು ಬೇನೆ, ಭೇದಿ, ಆಮಶಂಕೆ, ಗ್ಯಾಸ್, ಉರಿ, ಉಬ್ಬರ ವಿಳಿತ ಇತ್ಯಾದಿಗೆ ಮಜ್ಜಿಗೆ ಸೇವನೆ ಹೇಳಿಮಾಡಿಸಿದ ಪಾನೀಯ. ಜೀರ್ಣಕ್ರಿಯೆಗೆ ಸಹಕಾರಿ.

ಮಜ್ಜಿಗೆಯನ್ನು ಯಥೇಚ್ಛವಾಗಿ ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಆರೋಗ್ಯ ಪರಿಣಿತರು ಈಗಾಗಲೇ ರುಜುವಾತು ಪಡಿಸಿರುವುದನ್ನು ಅವರು ಒತ್ತಿ‌ಒತ್ತಿ ಹೇಳಿದರು. ಅವರ ಮಾತೇ ಹಾಗೇ ಹಾಲು ಜೇನಿನಾ ಹಾಗೇ ಕಲ್ಲು ಸಕ್ಕರೆಯಾ ಹಾಗೇ.. ಹೌದೌದು ಎನ್ನುವ ಹಾಗೇ ತುಂಬ ಸೊಗಸಾಗಿ ಹೇಳುತ್ತಾ ಹೋದರು…

ಮಜ್ಜಿಗೆಗೆ ಮಸಾಲೆ ಹಾಕುವುದು ಒಗ್ಗರಣೆ ಕೊಡುವುದು ಹಸಿಮೆಣಸಿನಕಾಯಿ ಸೇರಿಸುವುದು ಸಕ್ಕರೆ ಬೆಲ್ಲ ಇತ್ಯಾದಿ ಏನೆಲ್ಲ ಸೇರಿಸಿ ಕುದಿಸಿ ಕುಡಿಯುವುದೂ… ಇದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಡ್ಡ ಪರಿಣಾಮಕ್ಕೆ ರಹದಾರಿಗಳು…….. ಮಜ್ಜಿಗೆಯಲ್ಲಿ ಕಣ್ಣಿಗೆ ಕಾಣದಂಥ ಬ್ಯಾಕ್ಟಿರಿಯಾಗಳಿರುತ್ತವೆ! ಇವು ಆರೋಗ್ಯಕ್ಕೆ ಬೇಕೇ ಬೇಕು…! ಬೇಕಾದ ಬ್ಯಾಕ್ಟಿರಿಯಾಗಳು…. ಇವು ವಿನಾಶವಾಗದಂತೆ ಎಚ್ಚರಿಕೆ ವಹಿಸುವುದು ಎಲ್ಲರಿಗೆ ತಿಳಿದಿರಲೇಬೇಕು! ಇವನ್ನು ನಾಶ ಮಾಡಿಕೊಂಡು ಅಂದಚೆಂದಕ್ಕೆ ಮಂಜುಗಡ್ಡೆ ಹಾಕಿ ಕುಡಿಯುವುದರಿಂದ ಆರೋಗ್ಯದ ಮೇಲೆ ಅನಗತ್ಯವಾದ ಕೆಟ್ಟ ಪರಿಣಾಮ ಬೀರುವುದೆಂದು ಡಾಕ್ಟರ್ ವಿ. ನಾಗರಾಜು ಅವರು ವಿವರಿಸುತ್ತಾ ನಿಂತರು.

ಕಾಲ ಸರಿದಿದ್ದೇ ಗೊತ್ತಾಗಲಿಲ್ಲ. ಅಲ್ಲಿದ್ದ ಮಕ್ಕಳೇನು… ಶಿಕ್ಷಕರೆಲ್ಲ… ನಾವೆಲ್ಲ ಕೇಳಿ ಬಲು ಸಂಭ್ರಮಿಸಿದೆವು…. ಅವರಿಗೆ ಶಾಲಾವತಿಯಿಂದ ಸನ್ಮಾನಿಸಿದರು.

ಅಲ್ಲಿಗೆ ಅಂದಿಗೆ ‘ಜ್ಞಾನ ವಿಜ್ಞಾನ’ ಮಾಲಿಕೆಯ ಉಪನ್ಯಾಸ ಮುಕ್ತಾಯಗೊಂಡಿತು.

ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಡಾ. ವಿ.ನಾಗರಾಜು ಅವರು ಮಕ್ಕಳತ್ತ ಕೈಬೀಸಿ ಖುಷಿಲಿ ಶಾಲೆಯಿಂದ ನಿರ್ಗಮಿಸಿದರು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...