ಮೂಡಿಬರಲಿ ಹೊಸ ವರುಷ

ಮೂಡಿಬರಲಿ ಹೊಸ ವರುಷದ
ಹೊಸ ಕಾಂತಿಯ ತಾರೆ
ಸಾಗಿ ಬರಲಿ ಮೇಲಿನಿಂದ
ಹೊಸ ಬೆಳಕಿನ ಧಾರೆ

ಹಸಿದ ಪುಟ್ಟ ಕಂದಮ್ಮಗೆ
ಹೊಟ್ಟೆ ತುಂಬ ಹಾಲು,
ದುಡಿವೆ ಎನುವ ಕೈ ಕಾಲಿಗೆ
ಕೆಲಸವಿರುವ ಬಾಳು,
ಹಬ್ಬುತಿರುವ ಬಳ್ಳಿಗಳಿಗೆ
ಹಂಬಿನ ಆಧಾರ,
ಆಗಲಿ ಈ ಹೊಸವರುಷ
ಸಮೃದ್ಧಿಯ ತೀರ.

ಬಾಯಿ ತೆರೆದ ಕೆರೆಗಳಿಗೆ
ಕುಡಿವಷ್ಟೂ ನೀರು,
ಮುಡಿಬಿಚ್ಚಿದ ಗಿಡಗಳಿಗೆ
ತೊಡುವಷ್ಟು ಹೂವು,
ಒಣಮಡಿಕೆಯ ಗದ್ದೆಗಳಿಗೆ
ತೆನೆದೂಗುವ ಬಾಳು,
ಕರುಣಿಸಲೀ ಹೂಸವರುಷ
ಕವಿತೆಗೆ ಹೊಸ ಸಾಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಷಣ – ೨
Next post ರಾಜಕಾರಣಿ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…