ಕವಿತೆಗೆಲ್ಲಿದೆ ಅರ್ಥ ?

ಮೊರೆವ ನದಿ, ಅತ್ತಿತ್ತ ಹೆಬ್ಬಂಡೆರಾಶಿ ಎಂದೂ ಮುಗಿಯದ ಘರ್ಷಣೆ; ಹೊಗೆಯಂತೆ ಮೇಲೆ ನೀರ ಕಣಗಳ ಸಂತೆ ಕಾಮನ ಬಿಲ್ಲಿನ ಘೋಷಣೆ. ಪ್ರಜ್ಞೆ - ಪರಿಸರ ಯಂತ್ರ ಸ್ಥಿತಿ ಚಲನೆಗಳ ನಡುವೆ ಮೂಡಿ ಮೇಲೇಳುತಿದೆ ಅರ್ಥಕ್ಕೊಗ್ಗದ...

ಹೀಗೊಂದು ಕಾಲವಕ್ಕಾ

ಹೀಗೊಂದು ಕಾಲವಕ್ಕಾ ಸುತ್ತ ಮುತ್ತ ಬೆಳ್ಳಕ್ಕಿ ಕುಣಿವ ಹೀಗೊಂದು ಕಾಲವಕ್ಕಾ ಭಾವಕೊಂದು ಬಣ್ಣ ತುಂಬಿ ಚಿತ್ತಾರಕ್ಕೊಂದು ರೆಕ್ಕೆ ಹಚ್ಚಿ ಲತೆಗೊಂದು ಮೌನಕಟ್ಟಿ ಏರುಪೇರು ಬಂದ ಸಗ್ಗದಾ ನಡುವೆ ಕದವ ತಟ್ಟಿ ಕುಣಿವಾ ಕಾಲವಕ್ಕಾ ||ಹಿ||...
ತರಂಗಾಂತರ – ಹಿನ್ನುಡಿ

ತರಂಗಾಂತರ – ಹಿನ್ನುಡಿ

ಹಿನ್ನುಡಿಯ ಅಗತ್ಯವಿದೆಯೆ? ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ. ತನ್ನ ಬರಹದ ಕುರಿತು ಲೇಖಕ ಏನು ಹೇಳಿಕೊಂಡರೂ ಅದು ಓದುಗರ ಮನಸ್ಸನ್ನು ನಿರ್ದೇಶಿಸುವ ಕಾರಣದಿಂದ ಕೆಲವರು ಏನನ್ನೂ ಹೇಳದೆ ಸುಮ್ಮನೆ ಇರುತ್ತಾರೆ. ಇದೇ...

ಏ ವಯಸ್ಸೇ

ನಾನೇನೋ ಹೇಳಿದೆ ಬಹುಶ: ನೀನು ಕೇಳಿಸಿಕೊಳ್ಳಲಿಲ್ಲ ನೀ ನನ್ನ ಹುಡುಗತನ ಕಸಿಯಬಹುದು ಆದರೆ ನನ್ನ ಹುಡುಗಾಟವನು ಅಲ್ಲ ಪ್ರತಿ ಮಾತಿಗೊಂದು ಉತ್ತರವಿರಲಾರದು, ಪ್ರತಿ ಒಲವಿನ ಸಂಗತಿ ಕೆಟ್ಟದೇನೂ ಅಲ್ಲ. ಹೀಗೆ ಕುಡಿದು, ನಶೆಯಲಿ ಓಲಾಡುವೆನು...

ಗಳಿಗೆಬಟ್ಟಲ ತಿರುವುಗಳಲ್ಲಿ – ೪೯

ಹಸಿವಿನ ಅನಾರ್ಯ ಆದೇಶ ಒಂದು ದಾಸಾನುದಾಸ ಗುಲಾಮನದ್ದು. ರೊಟ್ಟಿಯ ತಹತಹಿಕೆ ಅಕ್ಕರೆ ಉಣಿಸುವ ಆರ್ದ್ರ ಮನದ್ದು. ಸಿಂಹಾಸನಾರೂಢ ದೊರೆಗೆ ಮಣ್ಣಿನಾಳದ ಪಿಸುಮಾತುಗಳು ಎಂದಿಗೂ ಅರ್ಥವಾಗಿಲ್ಲ. *****

ಮನುಷ್ಯರಂತೆ ಬಾಳೋಣ

ಒಂದು ವೃಕ್ಷದ ಕೆಳಗೆ ಇಬ್ಬರು ಪ್ರೇಮಿಗಳು ಕುಳಿತ್ತಿದ್ದರು. ಅವರು ಒಬ್ಬರಿಗೊಬ್ಬರು ಅಂತರಂಗವನ್ನು ಒಪ್ಪಿಸಿ "ಹಕ್ಕಿಯಂತೆ ಹಾಯಾಗಿರೋಣ." ಅಂದುಕೊಂಡರು. ವೃಕ್ಷದ ಮೇಲಿನ ಗೂಡನ್ನು ಸೂಕ್ಷ್ಮವಾಗಿ ನೋಡಿದ ಹುಡುಗಿ ಹೇಳಿದಳು- "ಒಂದು ಗಂಡು ಹಕ್ಕಿ ಜೊತೆ ಎರಡು...

ಆಟ

ಪ್ರತಿ ಸಂಜೆಯ ಬೆಳಕು ನನ್ನ ಪುಟ್ಟ ಕೋಣೆಯಿಂದ ಹಾರಿಹೋದ ಕ್ಷಣ ನೆರಳಿನ ಕತ್ತಲಿನಲಿ ಒಂದು ಪರಿಚಿತ ಮುಖ ಹುಡುಕುತ್ತೇನೆ. ಕವಿತೆ ಬೀಜ ಕಟ್ಟುವ ಹೊತ್ತು ತೇಲಿ ಸಾಗಿವೆ ಬೆಳ್ಳಕ್ಕಿ ಸಾಲು ಸಾಲು ಅಲ್ಲಲ್ಲಿ ಒಂದೊಂದು...

ಹೊಟ್ಟೆಪಾಡು

ಅಸಲಿ ಕಣ್ಣೀರುಗಳು ಕತ್ತಲೆಯಲ್ಲಿಯೇ ಕರಗಿ ಹೋಗುವಾಗ.... ಮೃದು ಭಾವನೆಗಳು ಮುರುಟುವಾಗ.... ನಕಲಿ ಕಣ್ಣೀರುಗಳದೇನು? ಬಳ ಬಳನೇ ಸುರಿಯುತ್ತಿವೆ ನೂರಾರು ಬಲ್ಬು ಬೆಳಕಿನ ಸಿನೇಮಗಳಲ್ಲಿ. *****
ತರಂಗಾಂತರ – ೧೨

ತರಂಗಾಂತರ – ೧೨

ಬಂಗಾರು ಚೆಟ್ಟಿಯನ್ನು ಕೊಂದೇ ಬಿಡುತ್ತೇನೆ ಇವತ್ತು ಎಂದುಕೊಂಡು ಮುಂದೆ ಧಾವಿಸುತ್ತಿರುವ ದೀಕ್ಷಿತನನ್ನು ಹೇಗಾದರೂ ಮಾಡಿ ತಡಯಲೇಬೇಕೆಂದು ವಿನಯಚಂದ್ರನಿಗೆ ಅನಿಸಿತು. ದೀಕ್ಷಿತನ ಕೈಯಲ್ಲಿ ತೆಂಗಿನಕಾಯಿ ಒಡೆಯುವಂಥ ಕತ್ತಿಯಿತ್ತು. ವಿನಯಚಂದ್ರ ಮೆಟ್ಟಲಲ್ಲಿ ಬಿದ್ದು ತುಳಿತಕ್ಕೊಳಗಾಗಿರುವ ಡೋರ್ ಮ್ಯಾಟನ್ನೇ...