ಆ ಕಾಡಿನಲ್ಲಿ ಪಿಂಗಲಕನೆಂಬ ಸಿಂಹವು ಮೃಗಗಳಿಗೆಲ್ಲ ಅರಸಾಗಿ ರಾಜ್ಯಭಾರ ಮಾಡಿಕೊಂಡಿತ್ತು. ಒಂದು ದಿನ ಆ ಸಿಂಹ ತನ್ನ ಪರಿವಾರವನ್ನೆಲ್ಲ ಕರೆಯಕೊಂಡು ನದಿಯಲ್ಲಿ ನೀರು ಕುಡಿಯಬೇಕು ಎಂದು ಬಂತು. ಆವೇಳೆಗೆ ಸರಿಯಾಗಿ ಸಂಜೀವಕನು ಎಲ್ಲಿಯೋ ಇದ್ದು ಒಂದು ಗುಟರೆಯನ್ನು ಹಾಕಿತು. ಆಗುಟರೆಯು ಗುಡುಗಿಗಿಂತ ಬಲವಾಗಿದ್ದು ದಿ...

ಸುಡಗಾಡುಗಟ್ಯಾಗ ಚಂದುಳ್ಳ ಚಲುವೇರು ಕುಂಟಲ್ಪಿ ಹಂಚಲ್ಪಿ ಆಡ್ಯಾರೆ ಹೆಣಗುಂಡ ತೆಗಿನ್ಯಾಗ ಚಕಚಂದ ಕುಂತಾರೆ ಕ್ವಾಡ್ಬಾಳಿ ಗಾರೀಗಿ ತಿಂದಾರೆ ||೧|| ಏಂಚಂದಾ ಭೋಚಂದಾ ಮಾಚಂದಾ ಸುಡಗಾಡು ಗೋರೀಯ ಮ್ಯಾಲ್ಹೂವು ನಕ್ಕಾವೊ ಗಿಡದಾಗ ಗಿಳಿಯಣ್ಣ ಕಂಟ್ಯಾಗ ನರಿ...

ಅವಳು ನೂರಾರು ಪ್ರೇಮ ಪ್ರಕರಣಗಳಲ್ಲಿ ಸಿಲಿಕಿಕೊಂಡು, ನಿಜವಾದ ಪ್ರೀತಿಯನ್ನು ಹುಡುಕುತ್ತಾ, ಅಲೆಯುತ್ತಾ ಅವಳು ಹೃದಯಗಳ ತೀರ ಸನಿಹಕ್ಕೆ ಹೋಗುತ್ತಿದ್ದಳು. ಇವನ ನೆರಳು ನನಗೆ ತಂಪು ಕೊಟ್ಟೀತೆ? ಅವನ ಪ್ರೀತಿ ಬೆಸುಗೆಯಾದೀತೆ? ಎಂದು ಹತ್ತು ಹಲವರಲ್ಲಿ ...

ನಟ್ಟ ನಡು ಇರುಳಲ್ಲಿ ಅರಳಿದ ಹೂವು ನೆಟ್ಟ ಬಾವುಟದಲ್ಲಿ ಹೆಪ್ಪೊಡೆದ ನೋವು ನಡುವೆ ಉರಳುವ ಚಕ್ರ ಚಲನೆ ಸಾವಯವ ಮೈಮಾಟದಲ್ಲಿ ಭಾವ ಬುದ್ಧಿಗಳ ಕೂಟದಲ್ಲಿ ಕತ್ತಲ ರಾಣಿಯ ಮಿಂಚಿನ ಪ್ರತಿಮೆ! ಕುಶಲವೆ ನನ್ನ ಕತ್ತಲ ರಾಣಿ? ವಸಾಹತುವಿನ ಹುತ್ತದಲ್ಲಿ ವಿಷವಿ...

ಗುರಿ ಇರಬೇಕು ಬಾಳಿಗೆ ಛಲವಿರಬೇಕು ಜೀವಕೆ| ಗುರಿ‌ಇರದ ಬಾಳಿಗೆಲ್ಲಿದೆ ಕೊನೆಯು ಛಲವಿರದ ಜೀವಕೆಲ್ಲಿದೆ ಬೆಲೆಯು| ಗುರಿ ಬೇಕು ಗಂಡಿಗೆ, ಛಲಬೇಕು ಹೆಣ್ಣಿಗೆ|| ಅತ್ತ ಇತ್ತ ಹರಿದಾಡುವ ಮನಸ ಅಂಕೆಯಲಿಡಬೇಕು| ಆಸೆ ಆಮೀಷಕೆ ಅಧೀನವಾಗದ ಹಾಗೆ ನಿಗಾವಹಿಸಲು...

ಶುದ್ಧವಾದ ಗಾಳಿ ಇದ್ದರೆ ಎಷ್ಟು ವರ್ಷಗಳಾದರೂ ಜೀವರಾಶಿಗಳು ಬದುಕಬಹುದು. ಅದೇ ವಿಷಯುಕ್ತವಾದ ಇಂಗಾಲದ ಡೈ‌ಆಕ್ಸೈಡ್ ಗಾಳಿಯು ಪಸರಿಸಿದರೆ ಇಂಥಹ ಗಾಳಿಯನ್ನು ಸೇವಿಸುವ ಜೀವಿಗಳು ಆತಂಕಕ್ಕೀಡಾಗುತ್ತವೆ. ಇನ್ನೊಂದು ವಿಶೇಷವೆಂದರೆ ಒಂದು ನೆಲೆಯಲ್ಲಿ ವಿಶ...

ಸರೋವರದಂಥವರು ಸಾಧುಗಳಾದವರು ತ್ವರೆಯೊಳವರ ಬಳಿ ಸಾರಿದೊಡಲ್ಲಿ ಬೊಗಸೆ ನೀರನು ಹೀರಿ ತಣಿಯಲು ಬಹುದಾದೊಡಂ ದೂರ ದಾರಿಯ ದಣಿದ ಮಂದಿಗೆ ವಾರಿ ಸೇವೆಗೆ ಇರಲಿ ಬಿಂದಿಗೆಯೆಂದು ಬರೆದಿಹೆನಿಲ್ಲಿ ಕವನಗಳ – ವಿಜ್ಞಾನೇಶ್ವರಾ *****...

ಬಿತ್ತೋ.. ಬಿತ್ತೋ.. ನನ್ನೆದೆ ಹುತ್ತವ ಕರಗಿಸಿ ಅರಿವಿನ ಬೀಜವ ಬಿತ್ತೋ.. ಬಿತ್ತೋ.. ಮನಸಲಿ ಕಟ್ಟಿಹ ಕಲ್ಮಷ ಕಟ್ಟೆಯ ಒಡೆದು ಶುದ್ಧ ಭಾವದ ಸಲಿಲವ ಚಿಮ್ಮಿಸೋ… ಚಿಮ್ಮಿಸೋ.. ವಿಷಮ ಆಸೆಯ ಕೋಶ, ಕೋಶವ ಕ್ಷಯಿಸಿ ಬುದ್ಧ ಬೆಳಕನು ಕಣ್ಣಲಿ ತುಂಬಿಸ...

ಅಜ್ಜಯ್ಯಾ! ಎಂದರೆ ರಾಮಯ್ಯನವರಿಗೆ ಬಲು ಸಿಟ್ಟು. ಅದು ಊರ ಮಕ್ಕಳಿಗೆ ಗೊತ್ತು. ಆ ಸಿಟ್ಟಿನ ನೋಟ ನೋಡುವುದೆಂದರೆ ಅವರಿಗಿಷ್ಟ. ಆದುದರಿಂದ ರಾಮಯ್ಯನವರು ಎತ್ತ ಸುಳಿಯಲಿ, ಬೀದಿಯ ಎಡದಿಂದ ಬಲದಿಂದ, ಮುಂದಿಂದ ಹಿಂದಿಂದ. ಅಜ್ಜಯ್ಯಾ! ಅಜ್ಜಯ್ಯಾ! ಅಜ್ಜಯ...

ಕಪ್ಪಿಟ್ಟ ಮುಖ ಮಿಂಚು ಕಣ್ಣುಗಳು ಬೆಂಕಿ-ಬಿಸಿಯುಸಿರು ಗುಡುಗು-ಸಿಡಿಲು ಮೃದು ವಚನಗಳು! ಅವಳು ಕಣ್ಣು ನೆಟ್ಟಲೆಲ್ಲಾ ಕಂದಕಗಳು ತೋಳುಗಳು ತಾಕಿ ನೆಲಕ್ಕುರುಳಿದವು ಹೆಮ್ಮರಗಳು ಕಾಲಾಡಿದಲ್ಲೆಲ್ಲಾ ಚಿಮ್ಮಿದವು ಬಿಸಿ ನೀರ ಬುಗ್ಗೆಗಳು ತಲ್ಲಣಿಸಿತು ಸಕಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...