೧ ಪ್ರಥಮ ಜಾಗತಿಕ ಯುದ್ಧದ ನಂತರದ ಜರ್‍ಮನಿ ೧೯೧೮ರ ನವೆಂಬರನಲ್ಲಿ ಕೊನೆಗೊಂಡ ಪ್ರಥಮ ಜಾಗತಿಕ ಯುದ್ಧವು ಅರ್ಧಮಿಲಿಯನ್‌ಕ್ಕಿಂತಲೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿತಲ್ಲದೇ, ಒಂದು ಕಾಲಕ್ಕೆ ಬಲಿಷ್ಟವಾಗಿದ್ದ ಜರ್‍ಮನಿ ಸೋಲಿನ ಸುಳಿಯಲ್ಲಿ ನರಳಿತು. ಗಂಭೀರ ಯುದ್ಧ ಉದ್ದೇಶಗಳನ್ನು ಇಟ್ಟುಕೊಂಡು ತನ್ನ ಬೆಂಬಲಿ...

-೧- ಅಣ್ಣ, ನಾನು ಬರೆದ ಹಿಂದಿನ ಕಾಗದವು ನಿನಗೆ ತಲಪಿರಬಹುದು, ಅದಕ್ಕೆ ನೀನು ಪ್ರತ್ಯುತ್ತರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನಿನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿಷಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು. ನಮ್ಮ ಮನೆ...

ಕರುಳು ಬಳ್ಳಿಯಲಿ ಹರಿದು ಬಂದವನು ರಕ್ತಗತನಾಗಿಹನು ನರನಾಡಿಯಲಿ ಸಂಚರಿಸಿ ಉಸಿರು ಕೊಟ್ಟಿಹನು ಆಶೆ ಬೆಂಕಿಯನಿಕ್ಕಿ ಎಚ್ಚರವಾಗಿಹನು ಈಗವನ ಕಣ್ಣಿಂದಲೆ ನಾನವನ ನೋಡುವೆನು ಹಣ್ಣಲ್ಲಿ ಬೇರೂರಿದಂತೆ ನನ್ನಲ್ಲಿ ಅವನು. *****...

ವೀರಪ್ಪನ್ ಈಗ ರಾಷ್ಟ್ರ ಪ್ರಸಿದ್ಧಿ ಪಡೆದ ಕಾಡುಗಳ್ಳ, ಕಾಡುಗಳ ನಡುವೆ ಊರುಗಳು ಹುಟ್ಟಿ ಸಂಸ್ಕೃತಿಯ ಸ್ಥಿತ್ಯಂತರ ಸಂಭವಿಸುತ್ತ ಬಂದಂತೆ ಕಾಡು ನಿಗೂಢವೂ ದುರ್ಗಮವೂ ಆದ ಒಂದು ಕಷ್ಟ ಕೇಂದ್ರವಾಯಿತು. ಹಾಗೆ ನೋಡಿದರೆ ನಮ್ಮ ಸಂಸ್ಕೃತಿಯ ಮೊದಲ ಮಾದರಿ ‘...

ಅವಳು ನಡೆಯುತ್ತಿದ್ದಾಳೆ. ತನ್ನ ದಾರಿಯ ಪಥ ಸಂಚಲನ ಸರಳೀಕರಿಸಿಕೊಳ್ಳುತ್ತ ಗೊತ್ತು ಅವಳಿಗೆ, ಆಸ್ಟ್ರೇಲಿಯಾದ ಏಕಾಂತ ಬೀದಿಗಳು ಬೆಂಗಳೂರಿನ ಕಾಂಕ್ರೀಟು ಕಾಡುಗಳ ಕಾಲುದಾರಿಗಳು ನಮ್ಮ ನಿಮ್ಮೂರಿನ ಕಾಡಿನ ಕವಲು ಹಾದಿಗಳು ಚೂರು ಬದಲಾಗಿಲ್ಲ. ನಾಯಿಗಳ ಆ...

ವಿವಸ್ತ್ರೆ ವಿವಿಯನ್ ಬಾತ್‌ಟಬ್ಬಿನ ಬೆಚ್ಚನೆ ನೀರಿನ ಖುಷಿಗೆ ಅರ್ಧ ನಿಮೀಲಿತ ನೇತ್ರೆ, ನಿಶ್ಚಲೆ; ಚೂಪಿಟ್ಟ ಕಠಿಣ ಮೊಲೆ ತೊಡೆ ಸಂದಿಯ ಕೂದಲ ಸುರುಳಿಗಳು ಬಿಟ್ಟು ಕೊಟ್ಟಿದೆ ತಮ್ಮನ್ನು ತಾವೆ ನೀರಿಗೆ ತೆರೆದೂ ತೆರೆಯದ ಯೋನಿ ಮುಚ್ಚಲಾರದೆ ಬಿಚ್ಚಿದಂ...

ಪ್ರೀತಿಯ ಗೆಳೆಯಾ, ಈಗ ಈ ಹೊತ್ತು ಜಗತ್ತಿನ ಕಥೆಗಾರರೆಲ್ಲಾ ಕವಿಗಳೆಲ್ಲ ಏನು ಮಾಡುತ್ತಿರಬಹುದು, ಎಂಬ ಒಂದು ಆಲೋಚನೆ ತಲೆಯಲ್ಲಿ ಬಂತು. ಕೆಲವರು ಹೆಂಡತಿ ಮಕ್ಕಳನ್ನು ಕರೆದು ಮಾರ್ಕೆಟ್, ಗುಡಿ, ಶಾಪಿಂಗ್ ಹೋಟೆಲ್ ಅಂತ ಸುತ್ತುತ್ತಿರಬಹುದು. ಕೆಲವರು ...

ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ? ಸಾವಿರ ದಿನವೋ ಒಂದು ದಿನವೋ? ಒಂದು ವಾರವೋ ಒಂದಷ್ಟು ಶತಮಾನವೋ? ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ? ‘ಅನಂತ ಕಾಲ’ ಅಂದರೆ ಎಷ್ಟುಕಾಲ? ಈ ಯೋಚನೆಗಳಲ್ಲಿ ಮುಳುಗಿ ಉತ್ತರ ಹುಡುಕಲು ಹೊರಟೆ. ಹೋಗಿ ಮ...

ಚತುಷ್ಪದಿ ಸಾಧ್ಯವಿಲ್ಲವು ಪರೀಕ್ಷೆಯೊಳನಗೆ ಜಯವು; | ವಿದ್ಯಾಪರೀಕ್ಷಕರಿಗಿಲ್ಲವೈ ದಯವು|| ಆರು ವರ್ಷಗಳಿಂದ ಪೋಗುವೆನು ನಾನು; | ದೂರ ಗುಡ್ಡಕೆ ಬರಿದೆ ಮಣ್ಣ ತುಂಬಿದೆನು. || ತೋರಲಿಲ್ಲವು ಪರೀಕ್ಷೆಯೊಳು ಜಯವಿನ್ನು | ನೀರೊಳಗೆ ಹೋಮ ಗೈದಂತದುದೇನು?...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...