ನಿವೇದನೆ

ದೀಪದ ಕುಡಿ ನಿಶ್ಚಲವಾಗಿ
ಉರಿದಿರಲು
ಅಗರಬತ್ತಿಯು ಘಮಘಮಿಸಿ
ಸುವಾಸನೆಯ ಬೀರಿರಲು
ಕುಂಕುಮದ ಬೊಟ್ಟಿಟ್ಟು
ಹೂಗಳನೇರಿಸಿ
ಹಾಲು-ಸಕ್ಕರೆಯನಿರಿಸಿ
ನನ್ನ ಕಷ್ಟಗಳ ಕಟ್ಟು ಬಿಚ್ಚಿದೆ

ನಾನು ಹೇಳುತ್ತಾ ಹೋದೆ
ಅವನು ಕೇಳುತ್ತಾ ಕೂತ

ಸಮಯ ಸರಿದದ್ದೆ ತಿಳಿಯಲಿಲ್ಲ
ಅವನೂ ಕೂತಲ್ಲಿಂದ ಕದಲಲಿಲ್ಲ

ಕೊನೆಕೊನೆಗೆ
ನನ್ನ ಕಂಠವೂ ತುಂಬಿ ಬಂದಿತ್ತು
ಅವನ ಕಣ್ಣಿಂದಲೂ ನೀರು ತುಳುಕಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಸ್ಲೀಮಾ ಪ್ರಕರಣ
Next post ಜ್ಞಾನದ ಗಂಗ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…